ಎಸ್.ಸಿ/ಎಸ್.ಟಿ ಅನುದಾನ ಖೋಟ್ಟಿ ದಾಖಲೆಗಳು ನೀಡಿ ವಂಚನೆಯ ಆರೋಪ | ಹೋರಾಟಕ್ಕೆ 30 ದಿನಗಳು ಪೂರ್ಣ ಸ್ಪಂದಿಸದ ಜಿಲ್ಲಾಡಳಿತ

ಶ್ರೀ ಶಂಕರಲಿಂ‍ಗ ಉಚಿತ ಪ್ರಸಾದ ನಿಲಯ ಇಂಡಿ ಎಸ್.ಸಿ/ಎಸ್.ಟಿ ಸಂಬಂದಿಸಿದ ಶಿಕ್ಷಣ ಸಂಸ್ಥೆ, ಆಸ್ತಿ ಮತ್ತು ಅನುದಾನವನ್ನು ದುರ್ಭಳಕೆಯ ವಿರುದ್ದ  ನ್ಯಾಯವಾದಿ ವಿಕಾಸ ಹೊಸಮನಿ ಹೋರಾಟ

ವಿಜಯಪುರ : ಇಂಡಿ ತಾಲೂಕಿನ ಶ್ರೀ ಶಂಕರಲಿಂ‍ಗ ಉಚಿತ ಪ್ರಸಾದ ನಿಲಯ ಇಂಡಿ ಎಸ್.ಸಿ/ಎಸ್.ಟಿ ಸಮುದಾಯಕ್ಕೆ ಸೇರಿದ್ದು ಆಗಿದೆ. ಅದನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಲ್ಲದವರು  ಶಿಕ್ಷಣ ಸಂಸ್ಥೆಯ ಆಡಳಿತದ ವಿರುದ್ದ 21 ಅಕ್ಟೋಬರ್ 2022 ರಂದು ವಿಜಯಪುರದ  ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆಗೆ  ಮನವಿ ನೀಡುತ್ತಾರೆ. 

ಮನವಿಯಲ್ಲಿ  ಎಂಟು ರಿಂದ ಹತ್ತು ವರ್ಷಗಳಿಂದ ನಿಲಯದ ಆಡಳಿತ ಮಂಡಳಿಯಿಂದ ಹಿಡಿದು ತಮ್ಮ ಇಲಾಖೆಗೆ ನಕಲಿ ದಾಖಲೆಗಳನ್ನು ಒದಗಿಸಿ ಅನುದಾನ ಪಡೆದುಕೊಂಡಿದ್ದಲ್ಲದೆ, ನಿರಂತರ ಹಣಕಾಸಿನ ಮತ್ತು ಇನ್ನಿತರ  ದಾಖಲೆಗಳಲ್ಲಿ  ಅಕ್ರಮ ಮತ್ತು ಅವ್ಯವಹಾರ ಕಂಡುಬಂದಿದ್ದು ಅವರ ವಿರುದ್ಧ ತನಿಖೆ  ನಡೆಸಿ ಸಂವಿಧಾನ ಬದ್ದವಾದ ಕಾನೂನು ಕ್ರಮ ಜರುಗಿಸಲು ಕೋರುತ್ತಾರೆ.

ಮುಂದುವರೆದು 24 ನವೆಂಬರ್ 2022 ರಂದು ಪತ್ರ ಬರೆದು ನೀಡಿರುವ ದೂರಿನ ಬಗ್ಗೆ ತೆಗೆದುಕೊಂಡ ಕ್ರಮದ ಬಗ್ಗೆ ಲಿಖಿತ ಮತ್ತು ದೃಡಿಕೃತ ಮಾಹಿತಿ ವದಗಿಸುವಂತೆ ಕೇಳುತ್ತಾರೆ.  ಯಾವುದೇ ಮಾಹಿತಿ ನೀಡದ ಅಧೀಕಾರಿಗಳು ಸುಮಾರು 4ತಿಂಗಳ ನಂತರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ವಿಜಯಪುರ ಿವರಿಗೆ ಪತ್ರ ಬರೆದು 05 ಜನೇವರಿ 2023 ರಂದು ಶಾಲೆಗೆ ಬೇಟಿ ನೀಡಿ ಪರಿಶೀಲಿಸಲಾಗಿ ತರಗತಿಗೆ ಹಾಜರಾಗಲು ಬರುತ್ತಿದ ವಿಧ್ಯಾರ್ಥಿಗಳು ಹಾಗೂ ವಸತಿ ನಿಲಯಕ್ಕೆ ಹೊಂದಿಕೊಂಡ ಐ.ಜಿ ಜಾಮಗೊಂಡ ಪ್ರೌಡಶಾಲಾ ಮುಖ್ಯಗುರುಗಳು ಹಾಗೂ ಸಹ ಶಿಕ್ಷಕರು ಶಾಲಾ ಕರ್ತವ್ಯಕ್ಕೆ ಹಾಜರಾಗಲು ಬಂದ್ದಿದರು  ಅವರನ್ನು ವಿಚಾರಿಸದಾಗ ಪ್ರಸಕ್ತ ಸಾಲಿನಿಂದ ವಸತಿ ನಿಲಯ ಪ್ರಾರಂಬಿಸಿರುವುದಿಲ್ಲವೆಂದು ತಿಳಿಸಿದ್ದಾರೆ  ಹಾಗೂ ವಸತಿ ನಿಲಯದ ಬಾಗಿಲು ತೆಗೆದು ನೋಡಿದರೆ ದೂಳಿನಿಂದ ಅವರಿಸಿತ್ತೆಂದು ಹಾಗೂ ವಸತಿ ನಿಲಯದ ದಾಖಲಾತಿ ಪರಿಶೀಲನೆಗೆ ಅಧ್ಯಕ್ಷರಿಗೆ ದೂರವಾಣಿ ಕರೆ ಮಾಡಿ  ಕೇಳಿಕೊಂಡಾಗ ಬೆಂಗಳೂರಿಗೆ ಬಂದಿದ್ದು ಖುದ್ದಾಗಿ ಬಂದು ವದಗಿಸುವೆ ಎಂದು ಹೇಳಿ ಇದುವರೆಗು ಒದಗಿಸಿರುವುದಿಲ್ಲವೆಂದು ಹಾಗೂ ನೀಡಿರುವ ನೋಟಿಸ್ ಗೆ ಸಮಂಜಸವಾದ ಉತ್ತರ ಒದಗಿಸಿಲ್ಲವೆಂದು    ಹಾಗೂ ವಸತಿ ನಿಲಯ ಮುಚ್ಚಿರುವ ಹಾಗೂ ಪ್ರಾರಂಬವಾದ ಬಗ್ಗೆಯು ಯಾವುದೇ ಮಾಹಿತಿ ನೀಡಿರುವುದಿಲ್ಲವೆಂದು ಸಮಾಜ ಕಲ್ಯಾಣ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ಇಷ್ಟೇಲ್ಲ ಅಸ್ಥವ್ಯಸ್ಥೆಗೊಂಡರು ಸಹಿತಿ ಇದುವರೆಗೆ ಯಾವುದೇ ಕ್ರಮ ತೆಗೆದುಕೋಳ್ಳದ ಸಮಾಜ ಕಲ್ಯಾಣ ಅಧಿಕಾರಿಗಳು  ಜಾರಿ ನಿರ್ದೇಶನಾಲಯಕ್ಕೆ  ಹೇಚ್ಚಿನ ತನಿಖೆಗೆ ನೀಡಿದ್ದು ಮತ್ತಷ್ಟು ಕಾಲಹರಣ ಮಾಡಲಾಗುತ್ತಿದೆ ಎಂದು  ಕಳೆದ ಮೂವತ್ತು ದಿನಗಳಿಂದ ಹೋರಾಟ ನಡೆಸುತ್ತಿರುವ ನ್ಯಾಯವಾದಿ  ವಿಕಾಸ ಹೊಸಮನಿ ಇಲಾಖೆಯ ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಕಾಸ ಹೊಸಮನಿ ಅವರ ಪ್ರಮುಖ ಬೇಡಿಕೆಗಳು  1) ಪರಿಶಿಷ್ಟ ಜಾತಿ ಮತ್ತು ಪಂಗಡದವರಲ್ಲದ ವ್ಯಕ್ತಿಗಳು ಇಲಾಖೆಗೆ ಖೋಟ್ಟಿ ದಾಖಲೆಗಳನ್ನು ನೀಡಿ ಅನುದಾನ ದುರ್ಬಳಕೆ ಮಾಡಿಕೊಂಡಿರುವವರ ವಿರುದ್ಧ ದೂರು ದಾಖಲಿಸಬೇಕು.  2) ವಸತಿ ನಿಲಯ ಶಾಶ್ವತ ರದ್ದತಿಗೆ ಪ್ರಸ್ತಾವನೆ ಸಲ್ಲಿಸಬೇಕು 3)  ಮೂಲ ಪರಿಶಿಷ್ಟ ಜಾತಿ ಮತ್ತು ಪಂಗಡದ ಅನುದಾನ  ದುರುಪಯೋಗವಾಗಿದರೆ ಅದನ್ನು ಪುನಃ ಭರಣಾ  ಮಾಡಿಸಬೇಕು ಎಂದು ಪ್ರಮುಖ ಬೇಡಿಕೆಗಳನ್ನು ಇಟ್ಟುಕೊಂಡು  ನಿರಂತರವಾಗಿ 30 ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. 

ಇನ್ನಾದರು ಜಿಲ್ಲಾಡಳಿತ ಸ್ಪಂದಿಸುತ್ತಾ? ಅನುದಾನ ದುರ್ಭಳಕೆ ಮಾಡಿದವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುತ್ತಾ,  ಇನ್ನು ಎಷ್ಟು ದಿನಗಳ ಕಾಲ ಕಾಲಹರಣ ಮಾಡಲಾಗುತ್ತದೆ ಎಂದು ಕಾಯಬೇಕಿದೆ. ಹೋರಾಟ ನಿರತ ನ್ಯಾಯವಾದಿ ವಿಕಾಸ ಹೊಸಮನಿ ಗೇಲವು ಸಿಗುತ್ತದೆ ಎಂಬ ವಿಶ್ವಾಸವಿದೆ ನ್ಯಾಯ ಸಿಗುವವರೆಗೆ ಹೋರಾಟ ನಿರಂತರವಾಗಿರುತ್ತದೆ ಎಂದು ಆತ್ಮ ವಿಶ್ವಾಸದೊಂದಿಗೆ ಇದ್ದಾರೆ.

ಕೇಲವು ದಾಖಲಾತಿಗಳು ವದಗಿಸುವಂತೆ ಜಾರಿ ನಿರ್ದೇಶನಾಲಯವು ತಿಳಿಸಿತ್ತು ನಿನ್ನೇಯೇ ದಾಖಲಾತಿಗಳು ಇಲಾಖೆಯಿಂದ ನೀಡಲಾಗಿದೆ ತನಿಖೆ ಮುಗಿಯುವವರೆಗೆ ಕಾಯಬೇಕು –  ಪುಂಡಲೀಕ ಮಾನವರ ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ


Comments

Leave a Reply

Your email address will not be published. Required fields are marked *