ನಾನು ಸ್ವಾಗತ.ಸನ್ಮಾನ,ಭಾಷಣ, ಮಾಡಲು ನಾನು ಇಲ್ಲಿಗೆ ಬಂದಿಲ್ಲ ನನ್ನ ಅಧಿಕಾರ ಅವಧಿಯಲ್ಲಿ ಸಿಂದಗಿ ಮತಕ್ಷೇತ್ರದಲ್ಲಿರುವ ಎಲ್ಲ ಸಾರ್ವಜನಿಕ ಆಸ್ಪತ್ರೆಗಳು ಉತ್ತಮವಾಗಿ ನಡೆಯಬೇಕು ಅಷ್ಟೇ ಎಂದು ಶಾಸಕ ಅಶೋಕ ಮನಗೂಳಿ ಎಚ್ಚರಿಸಿದರು..
ಸಿಂದಗಿ : 12 ಜೂನ್ 2023ರಂದು ಶಾಸಕ ಅಶೋಕ ಮನಗೂಳಿ ಸಾರ್ವಜನಿಕ ಆಸ್ಪತ್ರೆಗೆ ದಿಡೀರ್ ಬೇಟಿ ನೀಡಿದ ಹಿನ್ನಲ್ಲೆಯಲ್ಲಿಅಲ್ಲಿನ ವ್ಯವಸ್ಥೆ ಕುರಿತು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿತ್ತು. ಅದರ ಭಾಗವಾಗಿ ತಾಲೂಕಾ ಆರೋಗ್ಯ ವೈದ್ಯಾಧಿಕಾರಿಗಳ ಕಛೇರಿಯಲ್ಲಿ ತಾಲೂಕಿನ ಎಲ್ಲ ಸಿಬ್ಬಂದಿಗಳ ಸಭೆಯನ್ನು ಕೆರೆಯಲಾಗಿತ್ತು.
ಸಭೆಯನ್ನುದೇಶಿಸಿ ಮಾತನಾಡಿದ ಶಾಸಕರು ನಿಮ್ಮಗೆ ಇರುವ ಸಮಸ್ಯೆಗಳಾದರು ಎನ್ನು? ಸಿಂದಗಿ ಸಾರ್ವಜನಿಕ ಆಸ್ಪತ್ರೆಗೆ ಬೇಟಿ ನೀಡಿದ ಸಂರ್ಧಭದಲ್ಲಿ ಅಲ್ಲಿ ಯಾರು ಇರಲಿಲ್ಲ. ನಿಮ್ಮ ಮನಬಂದಂತೆ ಕೆಲಸಕ್ಕೆ ಆಗಮಿಸಿದರೆ ಸಾರ್ವಜನಿಕರ ಪಾಡೇನು ಎಂದು ಗರಂ ಆಗಿಯೇ ಮಾತು ಪ್ರಾರಂಬಿಸಿದರು. ನಾನು ವೈದ್ಯಕೀಯ ಕುಟುಂಬದಿಂದ ಬಂದವನ್ನು ನನ್ನ ಕುಟುಂಬದಲ್ಲಿ ಎಂಟು ಜನ ವೈದ್ಯರಿದ್ದಾರೆ. ನಾನು ರಾಜಕೀಯ ಮಾಡಲು ಅಥವಾ ಯರನೋ ಟಾರ್ಗೇಟ್ ಮಾಡವುದಕ್ಕಾಗಿ, ಬಂದಿಲ್ಲ ನಾನು ನಿಮ್ಮಲ್ಲಿ ಕೇಳುವುದಿಷ್ಟೇ ಆಸ್ಪತ್ರೆಗೆ ಆಗಮಿಸುವ ಜನರಿಗೆ ಉತ್ತಮವಾದ ಸವಲತ್ತುಗಳು ಆರೋಗ್ಯ ಇಲಾಖೆಯಿಂದ ಸಿಗಬೇಕು. ನಿಮ್ಮೊಂದಿಗೆ ನಾನಿರುವೆ ನಿಮ್ಮ ಸಮಸ್ಯೆಗಳು ಎನ್ನೀದರು ನನ್ನಗೆ ತಿಳಿಸಿ ನಾನು ಅದನ್ನು ಪೂರೈಸುವ ಕೆಲಸ ಮಾಡುವೆ. ನಿಮ್ಮ ಸಮಸ್ಯೆ ಇದ್ದರೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಗೈರಾಗಿ ಅದನ್ನು ಬಿಟ್ಟು ಮನಬಂದಂತೆ ಬರುವುದು-ಹೋಗುವುದು ಕಂಡುಬಂದರೆ ಅವರ ಮೇಲೆ ನಿರ್ಧಾಕ್ಷಣ್ಯವಾಗಿ ಕ್ರಮ ತೆಗೆದುಕೋಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಪಾಲ್ಗೊಂಡ ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿ ರಾಜಕುಮಾರ ಯರಗಲ್ ಅವರಿಗೆ ಇಲ್ಲಿನ ಕೊರತೆಗಳು ಸಂಪೂರ್ಣವಾಗಿ ಬಗೆಹರಿಯಬೇಕು ಸಿಂದಗಿ ಸಾರ್ವಜನಿಕ ಆಸ್ಪತ್ರೆ ಇಷ್ಟೊಂದು ಹಿನ್ನಡೆ ಅನುಭವಿಸಲು ಮೇಲಾಧಿಕಾರಿಗಳಾದ ನೀವೆ ಕಾರಣ ನೀವು ತಿಂಗಳಿಗೆ ಒಮ್ಮೆಯಾದರು ತಾಲೂಕಿನ ಎಲ್ಲ ಕೇಂದ್ರಗಳಿಗೆ ದಿಡೀರ್ ಬೇಟಿಗಳು ನೀಡಿದರೆ ಈ ಪರಿಸ್ಥತಿ ಬರುತ್ತಿರಲಿಲ್ಲಾ ಎಂದು ಡಿ.ಎಚ್.ಓ ಅವರ ಮೇಲೆಯೆ ಹರಿಹಾಯ್ದರು. ಇನ್ನು ಮುಂದು ಈ ರೀತಿಯ ತಪ್ಪುಗಳು ಆಗದೇ ರೀತಿಯಲ್ಲಿ ಕಾರ್ಯಪ್ರವರ್ತರಾಗುತ್ತೇವೆ ಎಂದು ತಾಲೂಕಾ ಆರೋಗ್ಯ ಅಧಿಕಾರಿ ಡಾ.ಆರ್.ಎಸ್.ಇಂಗಳೆ ಶಾಸಕರಿಗೆ ತಿಳಿಸಿದರು.
ಸಭೆಯಲ್ಲಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಮಹಾಂತಗೌಡ ಪಾಟೀಲ, ಡಾ.ಮಂಜುನಾಥ ಆಕಾಶ, ಡಾ.ಬಿ.ಎಸ್.ಅರಳಿಚ್ಚಂಡಿ, ಡಾ.ಯೋಗೇಶ, ಡಾ.ಅಶೋಕ ಚೌದ್ರಿ, ಡಾ.ಎ.ಎ.ಮಾಗಿ, ಡಾ.ರಾಜಶೇಕರ.ಸಿ.ಎಸ್. ಡಾ.ಭತಗುಣಕಿ,ಸಾಯಬಣ್ಣ ಗುಣಕ್ಕಿ ಹಾಗೂ ಎಲ್ಲ ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು , ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಗಳು, ಆಶಾ ಸುಗಮಕಾರರು ಉಪಸ್ಥಿತರಿದ್ದರು ಶ್ರೀಹರಿ ಕುಲಕರ್ಣಿ ನಿರೂಪಿಸಿ ವಂದಿಸಿದರು.
Leave a Reply