“ವೇಗದೂತ ಫಲಶೃತಿ” ವೃತ್ತಗಳಿಗೆ ಅಂಟಿಸಲಾದ ಹಲವು ಬ್ಯಾನರ್ ಗಳ ತೆರವು | ಪುರಸಭೆಯಿಂದ ನಾಳೆ ನೂತನ ಆದೇಶ ಸಾದ್ಯತೆ

ಸಿಂದಗಿ : ನಗರದ  ವೃತ್ತಗಳಿಗೆ   ತೀರಿಕೊಂಡವರ ಹಾಗೂ ವಿವಿಧ ಜಾಹೀರಾತುಗಳು ಅಂಟಿಸುವುದು ಸಾಮಾನ್ಯವಾಗಿತ್ತು. ಅದರ ಕುರಿತು ನಿನ್ನೆ ವೇಗದೂತ ಜನದನಿ ವೇಬ್ ಪತ್ರಿಕೆಯಲ್ಲಿ ವರದಿ ಪ್ರಕಟಿಸಿ ಅಧಿಕಾರಿಗಳ ಹಾಗೂ ಸಾಮಾನ್ಯರ ಗಮನ ಸೆಳದಿತ್ತು. 

ಸ್ವಾಮಿ ವಿವೇಕಾನಂದರ ವೃತ್ತಕ್ಕೆ ಅಂಟಿಸಲಾದ ಹಲವು ಬ್ಯಾನರ್ ತೆರವು

ಇಂದು ಬೆಳ್ಳಿಗೆ ಪುರಸಭೆ ಕಾರ್ಯಾಲಯದಿಂದ ಪೌರಕಾರ್ಮಿಕರು ನಗರದ ೆಲ್ಲ ಮಹಾನ್ ವ್ಯಕ್ತಿಗಳ ವೃತ್ತಗಳಲ್ಲಿ ಹಚ್ಚಲಾದ ಭಾವಪೂರ್ಣ ಶ್ರಧಾಂಜಲಿ ಸೂಚಿಸುವ ಹಾಗೂ ಜಾಹೀರಾತಿನ ಎಲ್ಲ ಬ್ಯಾನರ್ ಹಾಗೂ ಪೋಸ್ಟರ್ ತೆರುವುಗೋಳಿಸಲಾಗಿದೆ. ನಾಳೆಯೇ ಅದರ ಕುರಿತು ಪುರಸಭೆ ಮುಖ್ಯಾಧಿಕಾರಿ ಮೋಹನ ಜಾದವ್ ಕಟ್ಟು ನಿಟ್ಟಿನ ಆದೇಶ ಹೋರಡಿಸಲಾಗುವುದು ಎಂದು ಹೇಳಿದ್ದಾರೆ. ಜನಸಾಮಾನ್ಯರು ಹಾಗೂ ಯುವಪೀಳಿಗೆಗೆ ಮಾಹನ್ ನಾಯಕರ ಪ್ರತಿಮೆಗಳು  ಆದರ್ಶವಾಗಲಿ  ಎಂಬುದು ಜನದನಿಯ ಆಶಯ ಆದ್ದರಿಂದ  ಜನರು ಸಹಕರಿಸಿ ಬದ್ದತೆ ಮೆರೆಯುತ್ತಾರಾ ಎಂಬುದು ಕಾದು ನೋಡಬೇಕಿದೆ. ಪುರಸಭೆಯಿಂದ ಮತ್ತೆ ಅದೇರಾಗ ಅದೇಹಾಡು ಎಂಬಂತೆ ಆಗದಿರಲಿ ಇದಕ್ಕೆ ಒಳ್ಳೆಯ ಕಟ್ಟು ನಿಟ್ಟಿನ ಆದೇಶ ಹೊರಡಿಸಿ ಪಾಲಿಸುವಂತೆ ಪುರಸಭೆ ಅಧಿಕಾರಿಗಳು ಸದಸ್ಯರು ಜಾಗೃತ್ತಿ  ಮೂಡಿಸಲಿ ಎಂದು  ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಿನ್ನೇಯ ವೇಗದೂತ ಜನದನಿ ವರದಿ 

ಆದರ್ಶ ವ್ಯಕ್ತಿಗಳ ವೃತ್ತಗಳು ಶ್ರದ್ಧಾಂಜಲಿಯ ಫಲಕಗಳಾಗಿವೇ !

ಪ್ರಶ್ನೆಗೆ ಉತ್ತರಕ್ಕಿಂತ ಸ್ಪಂದನೆ ತುಂಬಾ ಮುಖ್ಯ. ನಿನ್ನೆಯ ದಿನ ವೇಗದೂತ ಸುದ್ದಿ ಜಾಲತಾಣದಲ್ಲಿ ವೃತಗಳಿಗೆ ಶೃದ್ದಾಂಜಲಿಯ ಭಾವಚಿತ್ರಗಳ ಕುರಿತಂತೆ ವರದಿ ಮಾಡಿದ ಬೆನ್ನಲ್ಲೆ ಇಂದು ಎಲ್ಲಾ ವೃತಗಳಿಗೆ ಹಾಕಿದ ಭಾವಚಿತ್ರಗಳ ಬ್ಯಾನರಗಳನ್ನ ತೆರವುಗೊಳಿಸಿದ್ದಾರೆ. ತೆರವುಗೊಳಿಸಿದ ಸಿಬ್ಬಂದಿಗಳಿಗೆ ಧನ್ಯವಾದಗಳು. ಆದರೆ ಮತ್ತೆ ಅವುಗಳನ್ನ ಹಾಕದಂತೆ ಏನಾದರೂ ಕಠಿಣ ಕ್ರಮ ಅಥವಾ ದಂಡ ವಿಧಿಸುವಂತಾದರೆ ಜನವು ಎಚ್ಚತ್ತಕೊಳ್ಳಬಹುದು.

ರಾಜು ಪಾಟೀಲ ಯುವ ಬ್ರಿಗೇಡ