ಸಿಂದಗಿ: ಪಟ್ಟಣದಲ್ಲಿರುವ ಅನೇಕ ಮಹಾನ್ ವ್ಯಕ್ತಿಗಳ ಪ್ರತಿಮೆಗಳು ಪರಿಸ್ಥಿತಿ ಅಧೋಗತಿಗೆ ಬಂದಿದ್ದು ನಿರ್ವಹಿಸಬೇಕಾದ ಪುರಸಭೆ ಆಡಳಿತ ವಿಫಲವಾಗಿದೆ.
ನಗರದ ಪ್ರಮುಖ ವೃತ್ತಗಳಾದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಅಂಬಿಗರ ಚೌಡಯ್ಯ ವೃತ್ತ, ಅಣ್ಣ ಬಸವಣ್ಣನವರ ವೃತ್ತ, ಸ್ವಾಮಿ ವಿವೇಕಾನಂದರ ವೃತ್ತ ಸೇರಿದಂತೆ ಟಿಪ್ಪು ಸುಲ್ತಾನ ವೃತ್ತದವರೆಗೆ ಬಂದರು ಮಹಾನ್ ವ್ಯಕ್ತಿಗಳ ಆದರ್ಶ, ಅವರು ಜೀವನ ಮುಂದಿನ ಯುವ ಪೀಳಿಗೆಗೆ ಇತಿಹಾಸ ತಿಳಿಸುವ ಬದಲು ಯಾರಾದರು ಸತ್ತರೆ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುವ ಅವರ ಭಾವಚಿತ್ರ ವೃತ್ತಕ್ಕೆ ಅಂಟಿಸಲಾಗುತ್ತಿದೆ.
ವೃತ್ತವನ್ನು ಸ್ವಚ್ಛವಾಗಿಡಲು ಮತ್ತು ಉದ್ಯಾನವನಗಳು ನೋಡಿಕೋಳಲ್ಲು ಸಿದ್ದು ಸುಣಗಾರ ಎಂಬ ಕಾರ್ಮಿಕನಿಗೆ ನೇಮಿಸಿದ್ದು ಅವನು ನೀರು ಬಿಡುವ ಜವಾಬ್ದಾರಿ ಹಾಕಲಾಗಿದೆ ಎಂದು ಪುರಸಭೆಯ ಅಧಿಕಾರಿ ಎನ್.ಎಚ್.ಉಸ್ತಾದ ಹೇಳಿದ್ದು ಮತ್ತೆ ವೃತ್ತ ಹಾಗೂ ಉದ್ಯಾನವನಗಳು ನಿರ್ವಹಣೆಗೆ ಮಾಡಬೇಕಾದವರು ಅವರೇ ಅಲ್ಲವೆ ಎಂಬ ಪ್ರಶ್ನೆಗೆ ಮುಖ್ಯಾಧಿಕಾರಿಗಳೊಂದಿಗೆ ಮಾತನಾಡಿ ಎಂದು ಹೇಳಿದ್ದಾರೆ.
ಈ ರೀತಿಯ ಘಟನೆಗಳಿಂದ ಅಲ್ಲಿನ ಕಾರ್ಮಿಕರು ರಾಜಕೀಯ ಪ್ರಭಾವಿತರೆ ಎಂಬ ಅನುಮಾನಗಳು ದಟ್ಟವಾಗಿ ಮೂಡಿಸುತ್ತಿದ್ದು ಅದರಂತೆ ಸಿದ್ದು ಸುಣಗಾರ ಅವರ ಸಹೋದರ ಹಣಮಂತ ಸುಣಗಾರ ಮಾಜಿ ಪುರಸಭೆ ಅಧ್ಯಕ್ಷರಾಗಿರುವುದು ಮತ್ತೊಂದು ಭಾಗವಾಗಿದೆ.
ಮಹಾನ್ ಸಾಧಕರ ಉದ್ದೇಶ, ಅವರ ಸಾಧನೆ, ಅವರ ಸಾಹಸ, ಅವರ ಇತಿಹಾಸ, ಅವರ ಶೌರ್ಯಗಳು ಮುಂದಿನ ಪೀಳಿಗೆಗಳಿಗೆ ಮಾರ್ಗದರ್ಶನವಾಗಲಿ. ಅವರಂತೆ ಬದುಕಲಿ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಲಿ ಅಂತ ವೃತ್ತಗಳ ನಿರ್ಮಾಣ ಮಾಡಲಾಗುತ್ತದೆ. ಆದರೆ ಇಂದಿನ ಆಧುನಿಕ ತೋರ್ಪಡೆಯ ಜೀವನ ಶೈಲಿಯಿಂದ ಮರಣ ಹೊಂದಿದವರ ಶ್ರದ್ಧಾಂಜಲಿ ಫೋಟೋಗಳನ್ನು ವೃತ್ತಗಳಿಗೆ ಅಳವಡಿಸಿ ಸಾಧಕರ ವೃತ್ತಗಳಿಗೆ ಅವಮಾನ ಮಾಡುವುದು ಹಾಗು ಶ್ರದ್ಧಾಂಜಲಿ ವೃತ್ತಗಳನ್ನಾಗಿ ಮಾರ್ಪಡಿಸಿದ್ದಾರೆ -ರಾಜು ಪಾಟೀಲ ಯುವ ಬ್ರಿಗೇಡ್
ಸೋಮವಾರ ಅಧಿಕೃತ ಆದೇಶ ಹೊರಡಿಸಲಾಗುವುದು ಇಂದೆ ಅವುಗಳೇಲ್ಲವನ್ನು ತೆರವುಗೋಳಿಸುವಂತೆ ಅಧಿಕಾರಿಗಳಿಗೆ ತಿಳಿಸುತ್ತೆನೆ -ಮೋಹನ ಜಾದವ್ ಮುಖ್ಯಾಧಿಕಾರಿ ಪುರಸಭೆ ಸಿಂದಗಿ
ಪಟ್ಟಣದಲ್ಲಿ ಯಾರ್ಯಾರು ಇಂದು ಸತ್ತಿದ್ದಾರೆ ಎಂದು ನೋಡಲು ಜನರು ನೇರವಾಗಿ ವೃತ್ತಗಳಗೆ ಆಗಮಿಸುತ್ತಿದ್ದು ಬುದ್ಧಿ ಜೀವಿಗಳು ಚಿಂತಕರು, ಇಂತಹ ಘಟನೆಗಳಿಂದ ಅತೀವ ಬೇಸರ ವ್ಯಕ್ತಪಡಿಸಿದ್ದಾರೆ.
Leave a Reply