ಗೋಲಗೇರಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ಗ್ರಾಮ ಪಂಚಾಯತ ಕಾರ್ಯಾಲಯ ಗೋಲಗೇರಿ ಇವರ ಾಶ್ರಯದಲ್ಲಿ ನಡೆದ ಗ್ರಾಮ ಪಂಚಾಯತ ಕಾರ್ಯಾಲಯದ ನೂತನ ಕಟ್ಟಡ ಕಾಮಗಾರಿಯ ಭೂಮಿಪೂಜೆಯನ್ನು ಕ್ಷೇತ್ರದ ಶಾಸಕರಾದ ರಮೇಶ ಭೂಸನೂರ ನೆರವೇರಿಸಿದರು.
ಬಿಜೆಪಿ ಮುಖಂಡ ಸಂತೋಷ ಪಾಟೀಲ ಭಾಗಿಯಾಗಿ ಮಾತನಾಡಿ ನಾವು ವಿವಿಧ ಪಂಚಾಯತಗಳಿಗೆ ಹೋದಾಗ ಅಲ್ಲಿನ ಪಂಚಾಯತ ಕಾರ್ಯಾಲಯ ನೋಡಿ ನಮ್ಮ ಊರಲ್ಲಿಯು ಕಾರ್ಯಾಲಯ ಆಗಬೇಕು ಎಂದು ಅಂದುಕೋಳ್ಳುತ್ತಿದೆವು. ಗೋಲಗೇರಿ ಗೋಲ್ಲಾಳೇಶ್ವರರ ಕೃಪಾ ಆಶಿರ್ವಾದದಿಂದ ಇಂದು ಕಟ್ಟಡಕ್ಕೆ ಭೂಮಿಪೂಜೆಯನ್ನು ನೆರವೇರಿಸಲಾಗಿದೆ. ಮುಂದಿನ ಆರು ತಿಂಗಳಿನಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಲಿದೆ ಈ ಕೆಲಸಕ್ಕೆ ಊರಿನ ಸರ್ವಸದಸ್ಯರು ಸಹಕರಿಸಬೇಕಾಗಿದೆ ಎಂದು ವಿನಂತಿಸಿದರು.
ಭೂಮಿಪೂಜೆ ನೆರವೇರಿಸಿದ ಶಾಸಕ ಭೂಸನೂರ ಮಾತನಾಡಿ ಯುವಕರು ಆಡಳಿತದ ಚುಕ್ಕಾಣಿ ಹಿಡಿದರೆ ನೂತನ ಪ್ರಯೋಗಗಳು ಹೊರ ಬರುತ್ತವೆ ಅದೆ ರೀತಿ ಇಂದು ಅಧೀಕಾರ ಹಿಡಿದ ಕೇಲವೆ ದಿನಗಳಲ್ಲಿ ಮಹತ್ತರ ಕಾಮಗಾರಿಯನ್ನು ಪಂಚಾಯತ ಅಧ್ಯಕ್ಷರಾದ ಸುನೀಲಗೌಡರು ಮಾಡುತ್ತಿರುವುದು ಸಂತಸತಂದಿದೆ. ಸುನೀಲಗೌಡರು ಯುವಕರಿಗೆ ಅಧಿಕಾರ ಸಿಕ್ಕರೆ ಎನು ಮಾಡುತ್ತಾರೆ ಎಂಬುದು ಸಾಭಿತುಪಡಿಸುವ ಅವಕಾಶ ಅವರಿಗೆ ಸಿಕ್ಕಿದೆ. ಸುಂದರ ಕಟ್ಟಡ ನಿರ್ಮಾಣಮಾಡಿ ಅವರ ಸಾಮರ್ಥ್ಯ ತೋರಿಸಬೇಕು ಎಂದು ಹೇಳಿದರು.
ಮುನೀಂದ್ರ ದೇವ ಶಿವಾಚಾರ್ಯರು ಸಾನಿಧ್ಯ ವಹಿಸಿದರು ಪ್ರಭುಗೌಡ ಪಾಟೀಲ, ಗೌಡಪ್ಪಗೌಡ ಪಾಟೀಲ, ಈರಣ್ಣ ರಾವೂರ, ರಾಘವೇಂದ್ರ ಕುಲಕರ್ಣಿ, ಗೋಲ್ಲಾಳಪ್ಪಗೌಡ ಪಾಟೀಲ, ಮಹಾಂತೇಶ ಸಾತಿಹಾಳ, ಸಿದ್ದು ಬುಳ್ಳಾ, ರವಿಕಾಂತ ನಾಯ್ಕೋಡಿ, ಸಂತೋಷ ಮಣಗಿರಿ ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.
2021-22 ನೇ ಸಾಲಿನ ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ಕರವಿನಾಳ ಎಲ್,ಟಿ ಗ್ರಾಮದಲ್ಲಿ ಮನೆ – ಮನೆ ನಳ ಅಂದಾಜು 66 ಲಕ್ಷ ಭೂಮಿಪೂಜೆ
ಭೂಮಿಪೂಜೆ ನೆರವೇರಿಸಿದ ಶಾಸಕರಾದ ರಮೇಶ ಭೂಸನೂರ ಮಾತನಾಡಿ ಉಪಚುನಾವಣೆ ಸಂಧರ್ಭದಲ್ಲಿ ಜನರ ಬಹುದಿನದ ಬೇಡಿಕೆ ರಸ್ತೆಮಾಡುವ ಕುರಿತು ಇತ್ತು, ಅಂದು ದೇವಿಯ ಮುಂದೆ ಶಪಥ ಮಾಡಿದೇವು ಡಂಬಳ ಗ್ರಾಮದಿಂದ ತಾಂಡಾ ವರೆಗೆ ರಸ್ತೆ ನಿರ್ಮಾಣ ಮಾಡುತ್ತೆವೆ ಎಂದು ಇಗ ಟೆಂಡರ್ ಹಂತದಲ್ಲಿದ್ದು ಮುಂದಿನ ದಿನಮಾನಗಳಲ್ಲಿ ಅದನ್ನು ಭೂಮಿಪೂಜೆ ಮಾಡುವ ಕೆಲಸ ಮಾಡಿ ನನ್ನ ಮಾತನ್ನು ಊಳಿಸಿಕೋಳ್ಳುವೆ ಎಂದರು. ಗ್ರಾಮದ ಉಮಾಜಿ ಪುಲಸಿಂಗ್ ಚವ್ಹಾಣ, ಹೀರಾಮನ್ ಸೋಮಲು ಚವ್ಹಾಣ, ಶ್ರೀಶೈಲ ಚಳ್ಳಗಿ, ಸೈಪನಸಾಬ್ ಕೋರವಾರ ಹಲವಾರು ಮುಖಂಡರು ಗ್ರಾಮಸ್ಥರು ಹಾಜರಿದ್ದರು.
Leave a Reply