ಮೊದಲು ನಮ್ಮ ಶವ ಹೋಗಬೇಕು ಆಮೇಲೆ ತೆರವು ಕಾರ್ಯಚರಣೆ ಆಗಬೇಕು ; ಮಹಿಬೂಬ ಸಿಂದಗಿಕರ್

ಉಚ್ಚ ನ್ಯಾಯಾಲಯದ ಆದೇಶ ಇಟ್ಟುಕೊಂಡು  ತೆರವು ಕಾರ್ಯಾಚರಣೆ ಅಧಿಕಾರಿಗಳು ಬಂದಿದ್ದಿರಿ ಮೊದಲು ಆದೇಶದಲ್ಲಿ ಎನ್ನು ಬರೆದಿದೆ ಎಂದು ಓದಿ ಎಂದು ಮಹಿಬೂಬ ಸಿಂದಗಿಕರ ಎಚ್ಮಾಚರಿಕೆಯ ಮಾತನಾಡಿದರು. 

ಸಿಂದಗಿ : ರಸ್ತೆ ಪಕ್ಕದಲ್ಲಿರುವ ಹಲವು ವರ್ಷಗಳಿಂದ  ವಕ್ಫ್   ವಿವಾಧದಲ್ಲಿರುವ ಸ್ಥಳದಲ್ಲಿರುವ ಅಂಗಡಿಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳ ಸಭೆ ನಡೆದಿರುವ ವಿಷಯ ತಿಳಿಯುತ್ತಿದಂತೆ  ಅಂಗಡಿಕಾರರು  ಹೋರಾಟ ನಡೆಸಿ  ಪ್ರತಿಭಟನೆ ಮೂಲಕ ತಾಲೂಕಾ ದಂಡಾಧಿಕಾರಿಗೆ ಮನವಿ ಸಲ್ಲಿಸಲು ಆಗಮಿಸಿದರು. ಸಮಸ್ಯೆ ಕುರಿತು ಮಾತನಾಡಿದ ಅವರು  ಯಾರೋ ಕಮೀಟಿ ಮಾಡಿರುವುದನ್ನು ನಾವು ಒಪ್ಪುವುದಿಲ್ಲ.

 ನಾವು ವಕ್ಪ್ ಗೆ ಬಾಡಿಗೆ ಕಟ್ಟಲು ಸಿದ್ದರಿದೇವೆ ನಮ್ಮನ್ನು ತೆರವು ಗೋಳಿಸಿ ನೂತನ ಮಳಿಗೆ ನಿರ್ಮಿಸಿ ನಿಮ್ಮಗೆ ಕೋಡುತ್ತೇವೆ ಎಂಬ ಹಿಂಬಾಗಿಲಿನ ಭರವಸೆಯ  ಮಾತುಗಳು ಬಡವರ ಹೋಟ್ಟೆಗೆ ಕಾಲಿಡುವ ಉದ್ದೇಶವಾಗಿದೆ. ಇನ್ನಾದರೂ ಒಂದಾದದರೆ ನಮ್ಮಗೆ ಊಳಿಗಾಲವಿದೆ ಇಲ್ಲದೆ ಇದ್ದರೆ ನಮ್ಮ ಕುಟುಂಬಗಳು ಬೀದಿಗೆ ಬರುವುದು ನಿಶ್ಚಿತ.   ಮುಂದಿನ ದಿನಮಾನಗಳಲ್ಲಿ  ಭ್ರಷ್ಟರು, ದುಷ್ಟರು ಒಂದುಗೂಡಿ  ಬಡವರನ್ನು ತೆರವು ಕಾರ್ಯಾಚರಣೆ ಮಾಡಲು ಮುಂದಾಗುತ್ತಾರೆ ನೀವು ಹದರಬಾರದು  ನಿವೇಲ್ಲ ಒಂದಾಗಬೇಕು ಅಲ್ಲಿಯವರೆಗೆ ನ್ಯಾಯ ಸಿಗುವುದು ಕಷ್ಟ. ನಾವು ಮುಂದಿನ ದಿನಮಾನಗಳಲ್ಲಿ ಜೈಲು ಬರೋ ಚಳುವಳಿ ಮಾಡಬೇಕಾಗುತ್ತದೆ ನೀವು ತನುಇಖೆ ನಡೆಸದೆ ತೆರವು ಕಾರ್ಯಾಚರಣೆಗೆ ಬಂದರೆ ನಮ್ಮ ಹೆಣ ಹಾಕಿ  ತೆರವು ಕಾರ್ಯಾಚರಣೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯ ಮಾತನ್ನಾಡಿದರು.

https://www.facebook.com/share/v/15fzr64S5t/

ಸಿ.ಆಯ್.ಟಿ.ಯು ಸಂಘಟನೆಯ ಜಿಲ್ಲಾಧ್ಯಕ್ಷ ಅಣ್ಣಾರಾಯ ಈಳಗೇರ ಆಲಮೇಲ ಪಟ್ಟಣ ಪಂಚಾಯತ ಅಧ್ಯಕ್ಷ ಸಾಧಿಕ ಸುಂಬಡ. ಅಬ್ದುಲ ರಹೀಮ ದುದ್ದನಿ, ಮಾತನಾಡಿದರು.

ಸಮೀರ ಯರಗಲ್ಲ,  ಅಬ್ದುಲ ಸಿಂದಗಿಕರ್ , ಬಸೀರ, ಪಿರೋಜ್ ನಿಂಬರಗಿ,  ದೇವೆಂದ್ರ, ಪ್ರಭು ಮೇಸ್ತ್ರಿ, ಇಲಿಯಾಸ ಹಸರಗುಂಡಗಿ, ಅಬ್ದುಲ ಮುಲ್ಲಾ , ರಾಜು ಮುಲ್ಲಾ, ಜಾವೀದ ಬಿಲಾಲ ಸೇರಿದಂತೆ ಹಲವರು ಪ್ರತಿಭಟನೆಯ ಭಾಗವಾಗಿದರು.