ಕಬ್ಬು ಕಟ್ಟಾವು ಮಶಿನ್ ಹಸ್ತಾಂತರಿಸಿದ ಶಾಸಕ ಅಶೋಕ ಮನಗೂಳಿ

ಕೃಷಿ ಇಲಾಖೆಯಿಂದ ಮೂರು ಕಬ್ಬು ಕಟ್ಟಾವ ಮಶೀನ್ ಮಂಜೂರಾಗಿದ್ದು ಇದರ ಸದುಪಯೋಗ ರೈತರು ಪಡೆದುಕೋಳ್ಳಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಸಿಂದಗಿ :  ಆಹೇರಿ ಗ್ರಾಮದ ಮಹಿಬೂಬಸಾಬ ದವಲಸಾಬ ರಂಜುಣಗಿ ಹಾಗೂ ಹಣಮಂತ್ರಾಯ ಅಮರೋಪ್ಪಗೋಳ  ಚಟ್ಟರಕಿ   ಇಬ್ಬರು ಪಲಾನುಭವಿಗಳಿಗೆ ಕಬ್ಬು ಕಟ್ಟಾವು ಮಶಿನ್   ಇಂದು ಹಸ್ತಾಂತರಿಸಿದರು. ಈ ಯೋಜನೆ  2013 -18 ರಲ್ಲಿ ಈ ಯೋಜನೆ ಜಾರಿಗೆ ತಂದಿರುವ ಕೀರ್ತಿ ಕಾಂಗ್ರೇಸ್ ಪಕ್ಷಕ್ಕೆ ಸಲ್ಲುತ್ತದೆ. ಹಿಂದಿನ  ಸರಕಾರದ ಅವಧಿಯಲ್ಲಿ ಈ ಯೋಜನೆ ತಡೆಹಿಡಿಯಲಾಗಿತ್ತು ಇಗ ಪುನರಾರಂಬಿಸಿದ್ದು ನಮ್ಮ ಮತಕ್ಷೇತ್ರದಲ್ಲಿ 5 ಸಕ್ಕರೆ ಖಾರ್ಕಾನೆ ಕಾರ್ಯನಿರ್ವಹಿಸುತ್ತಿದ್ದು ಅಂದಾಜು 14 ಲಕ್ಷ ಹೇಕ್ಟರ್ ಕಬ್ಬು ಬೆಳೆಯಲಾಗುತ್ತಿದೆ. ಇಂತಹ ಹಲವಾರು ಕೃಷಿ ಇಲಾಖೆಯ ಯೋಜನೆಗಳು ಜನರಿಗೆ ತಲುಪಿಸವ ಕಾರ್ಯ ನಿರ್ಹಿಸಿ ಜನೋಪಕಾರಿಯಾಗಿ ಅಧಿಕಾರ ನಿರ್ವಹಿಸಲಿ. ಹೊರ ರಾಜ್ಯಗಳಿಂದ ಕಬ್ಬು ಕಟ್ಟಾವಿಗಾಗಿ ತರುವ ಕೂಲಿ ಕಾರರ ಅವಶ್ಯಕತೆ ಇನ್ನು ಕಡಿಮೆ ಆಗಬಹುದು. ಮತ್ತು ಕೂಲಿಕಾರರನ್ನು ಕರೆತರಲು ನೀಡಿದ ಮುಂಗಡ ಹಣವು ಮೂಳಿಗಿರುವ ಘಟನೆಗಳು ನಾವು ಕೇಳಿದ್ದೇವೆ. ಆದರಿಂದ ಮತಕ್ಷೇತ್ರದ ರೈತರು ನೂತನ ಮಶಿನ್ ಗಳ ಸದುಪಯೋಗ ಪಡೆದುಕೋಳಲ್ಲಿ ಎಂದು ಹೇಳಿದರು.

https://www.facebook.com/watch/?v=1240140867092074&rdid=G4qW7WuU9gYdzSmO

ಕೃಷಿ ಅಧಿಕಾರಿ ಎಚ್.ವಾಯ್ ಸಿಂಗೇಗೋಳ ಮಾತನಾಡಿ  ಕೆಟಗೇರಿ ಜನರಲ್ ವರ್ಗಕ್ಕೆ 40 ಲಕ್ಷ ಪರಿಶಿಷ್ಟ ಜಾತಿ  ಮತ್ತು ಮರಿಶಿಷ್ಟ ಪಂಗಡದ ವರ್ಗಕ್ಕೆ ಸರಕಾರ ದಿಂದ 50 ಲಕ್ಷ  ಸಬ್ಸಿಡಿ ಇದು  ಒಟ್ಟು ಮಿಶನ್ ಗೆ 96 ಲಕ್ಷ ಮೌಲ್ಯವಿದೆ  ಇಗಾ ಮೂರರಲ್ಲಿ ಎರಡು ಪಲಾನುಭವಿಗಳಿಗೆ ನೀಡಿದೆವೆ ಪರಿಶಿಷ್ಟ ಜಾತಿ ಮತ್ತು ಪ.ಪಂ ವರ್ಗದ ಜನರು ಯಾರು ಬೇಡಿಕೆ ಇಟ್ಟಲ್ಲ ಆಸಕ್ತರು ಸಂಪರ್ಕಿಸಿದರೆ ಅವರಿಗೆ ಸಹಾಯ ಮಾಡುವೆವು ಎಂದು ತಿಳಿಸಿದರು.

ತಾಲೂಕಾ ದಂಡಾಧಿಕಾರಿ ಪ್ರದೀಪಕುಮಾರ ಹಿರೇಮಠ ,  ಕೃಷಿಕ ಸಮಾಜದ ಅಧ್ಯಕ್ಷರಾದ ಶಿವಪ್ಪಗೌಡ ಬಿರಾದಾರ, ಎಸ್.ಬಿ.ಆಯ್ ಬ್ಯಾಂಕಿನ ವ್ಯವಸ್ಥಾಪಕರು  ಸೇರಿದಂತೆ ಹಲವಾರು  ರೈತರು ಉಪಸ್ಥಿತರಿದ್ದರು.