ವಿಜುಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ನಿಂಬಾಳ (ಬಿಕೆ) ಗ್ರಾಮದಲ್ಲಿ 05/02/1972 ತಂದೆ ದಿ.ಅರ್ಜುನ ತಾಯಿ ಶ್ರೀಮತಿ ಸರಸ್ವತಿ ಇವರ ಜ್ಯೇಷ್ಠ ಸುಪುತ್ರನಾಗಿ ಜನಿಸಿದ ಬಸವಾರಾಜ ರವರು ಒಟ್ಟು ನಾಲ್ಕು ಜನ ಸಹೋದರರು ಮೂವರು ರೈತರಾಗಿ ಊರಲ್ಲಿಯೇ ಕೆಲಸ ನಿವ‍್ಹಿಸುತ್ತಿದ್ದಾರೆ. ನಿಂಬಾಲ ಗ್ರಾಮದಲ್ಲಿ ಒಂದನೇಯ ತರಗತಿಯಿಂದ ನಾಲ್ಕನೇಯ ತರಗತಿಯವರೆಗೆ ನಿಂಬಾಳ (ಕೆಡಿ) ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐದನೆಯ ತರಗತಿಯಿಂದ ಏಳನೇಯ ತರಗತಿ ಪೂರೈಸಿ ಶ್ರೀ ಗುರುದೇವ ರಾನಡೆ ಜ್ಞಾನಧಾಮ ಪ್ರೌಢಶಾಲೆಯಲ್ಲಿ ಹೈಸ್ಕುಲ್ ಶಿಕ್ಷಣವನ್ನು ಮುಗಿಸಿದರು. ವಿಜಯಪುರದ ಅಂಜುಮನ್ ಕಾಲೇಜು, ನಂತರ ನೂತನ ಕಲಾ ಮಹಾವಿಧ್ಯಾಲಯ ವಿಜಯಪುರದಲ್ಲಿ ಬಿ.ಎ. ದ್ವೀತಿಯ ಹಾಗೂ ಅಂತಿಮ ವರ್ಷ ಪೂರೈಸಿ ಪದವೀಧರರಾದರು.
ಭೀChi ಅವರ ಪುಸ್ತಕಗಳನ್ನು ಓದಿ ಆಕರ್ಷಿತರಾದ ಅವರು ಅನೇಕ ಪತ್ರಿಕೆ, ಸಾಹಿತಿಗಳ ಕೃತಿ ಓದುವ ಮೂಲಕ ಸಾಹಿತ್ಯ ಕ್ಷೇತ್ರ ಆರಿಸಿಕೊಂಡರು. ನಾನು ಅವರಂತೆ ಬರೆಯಬೇಕೆಂದು ಯೋಚಿಸಿ ಬರವಣಿಗೆಯಲ್ಲಿ ತೊಡಗಿದರು. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಾದ ಸುಧಾ, ಕರ್ಮವೀರ, ಪ್ರಜಾವಾಣಿ, ದೀಪಾವಳಿ ವಿಶೇಷ ಸಂಚಿಕೆ ಹಾಗೂ ತುಷಾರ, ಮಾರ್ದನಿ, ಲೋಕದರ್ಶನ, ಉತ್ಥಾನ, ರಾಜಧಾನಿ, ನಟರಾಜ,ರಾಯಚೂರು ವಾಣಿ, ಸುದ್ಧಿ ಮೂಲ ಹೀಗೆ ಅನೇಕ ಪತ್ರಿಕೆಗಳು, ಚಾಲಿಕ್ಯಸಿರಿ, ಕಾವ್ಯ ಚಾಲುಕ್ಯ, ಬಾಹತ್ತರರಂತಹ ಸ್ಮರಣ ಸಂಚಿಕೆಗಳು ಹಾಗೂ ಪ್ರಾತಿನಿಧಿಕ ಕವನ ಸಂಕಲನದಲ್ಲಿ ಕವಿತೆಗಳು ಪ್ರಕಟವಾಗಿವೆ.
ಇವರು ವೃತ್ತಿಗಾಗಿ ಕಾರಾಗೃಹ ಇಲಾಖೆ ಆಯ್ಕೆ ಮಾಡಿಕೊಂಡರು. ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿ 29-05-1995ರಲ್ಲಿ ನೇಂಕವಾದರು. 1998ರಲ್ಲಿ ಬಾದಾಮಿಯ ಉಪ ಕಾರಾಗೃಹದಲ್ಲಿ 2003ರ ವರೆಗೆ ಸೇವೆ ಸಲ್ಲಿಸಿದರು. 2003 ರಲ್ಲಿ ಹುಮನಾಬಾದ 2009ರಲ್ಲಿ ಜಮಖಂಡಿ, 2014 ರಲ್ಲಿ ಬೀದರದ ಕಾರಾಗೃಹದ ಮುಖ್ಯ ವೀಕ್ಷಕರಾಗಿ ಬಡ್ತಿ ಹೊಂದಿದರು. 2019 ರಲ್ಲಿ ಹುಮನಾಬಾದ ಕಾರಾಗೃಹದ ಸಹಾಯಕ ಜೈಲರ್ ಆಗಿ ಬಡ್ತಿಹೊಂದಿ ಇಂದಿನವರೆಗೆ ಇಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಶಸ್ತಿಗಳು: 19/11/2021 ರಂದು ಯುನಿವರ್ಸಲ್ ಡೇವಲಪಮೆಂಟ್ ಕೌನ್ಸಿಲ್ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದರೆ, 2022 ರ ಜೂನ್ 29 ರಂದು ಬೆಂಗಳೂರಿನ ಅನಿಕೇತನ ಸಾಂಸ್ಕೃತಿಕ ವೇದಿಕೆ ರಾಷ್ಟ್ರ ಕವಿ ಕುವೆಂಪುರವರ ಹೆಸರಿನ ರಾಜ್ಯ ಅನಿಕೇತನ ಪ್ರಶಸ್ತಿ ಭಾಜನರಾಗಿದ್ದಾರೆ. 2018 ರಲ್ಲಿ ದೇಶಪಾಂಡೆ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರತಿಷ್ಠನ (ರಿ) ಬೀದರ ರವರು ಕಾವ್ಯ ಚೂಡಾಮಣಿ ರತ್ನ ರಾಜ್ಯ ಪ್ರಶಸ್ತಿ, ರಾಜರತ್ನಂ ಪ್ರಶಸ್ತಿ, ಹಲವಾರು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.
Leave a Reply