ರಾಜ್ಯದಲ್ಲಿ ಮಾದರಿ ಬ್ಯಾಂಕ್ ನಿರ್ಮಾಣ ಮಾಡುವ ಕನಸು ಹೊಂದಿದೆ : ಶಿವಾನಂದ ಹಡಪದ

ಸಿಂದಗಿ:  ಶ್ರೀ ಹಡಪದ  ಅಪ್ಪಣ್ಣ  ವಿವಧೋದ್ದೇಶಗಳ ಸಹಕಾರಿ ಸಂಘ ನಿ.,  ಸಿಂದಗಿ ಯ 17 ನೇ ವಾರ್ಷಿಕ ಸರ್ವಸಾಧಾರಣ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಕಾರ್ಯಕ್ರಮವು ಜರುಗಿತು.

 

ಕಾರ್ಯಕ್ರಮ ಉದ್ಘಟಿಸಿ ಮಾತನಾಡಿದ ಷ.ಬ್ರ.ಡಾ|| ಪ್ರಭುಸಾರಂಗದೇವ ಶಿವಚಾರ್ಯರು 2005 ರಲ್ಲಿ  ಬ್ಯಾಂಕ್ ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಾಗೂ ದಶಮಾನೋತ್ಸವದ ಕಾರ್ಯಕ್ರಮದಲ್ಲಿ ಹಾಗೂ ಇಂದು 17 ನೇ ವರ್ಷದ ಸಭೆಯಲ್ಲಿ ಪಾಲ್ಗೋಳುತ್ತಿರುವುದು ಸಂತಸ ತಂದಿದೆ. ಸರ್ವರು ಸೇರಿ ಬೆಳಿಸಿದಾಗ ಮಾತ್ರ ನಾವು ಮಾಡುವ ಕಾರ್ಯ ಯಶಸ್ವಿಗೊಳುತ್ತದೆ ಅದೇ ರೀತಿ ಇಂದು ಬ್ಯಾಂಕ್ ಅಭಿವೃದ್ದಿಗೆ ನೀವು ಕಾರಣಿಕೃತ್ತರಾಗಿದ್ದಿರಿ. ಅಧ್ಯಕ್ಷ ಶಿವಾನಂದ ಅವರು   ಮಠಕ್ಕೆ ಆಗಮಿಸಿದ್ದಾಗ ಸಮಾಜದ ಬಗ್ಗೆ ಹಾಗೂ ಬ್ಯಾಂಕಿನ ಸರ್ವ ಸದಸ್ಯರ ಬಗ್ಗೆ ಅಪಾರವಾದ ಭರವಸೆಯ ಮಾತುಗಳಾಡುತ್ತಾರೆ. ಈಗಿನ ಕಾಲದಲ್ಲಿ ಇನ್ನೋಬ್ಬರ ಬಗ್ಗೆ ಹಾಗೂ ಸಮಾಜದ ಬಗ್ಗೆ ಹೇಳೂವವರು  ತುಂಬಾ ಕಮ್ಮಿ ಶಿವಾನಂದ   ಒಬ್ಬ ನಿಷ್ಕಲ್ಮಷ ಮನುಷ್ಯ  ಎಂದು ಬ್ಯಾಂಕಿನ ಅಧ್ಯಕ್ಷರಿಗೆ ಆಶೀರ್ವದಿಸಿದರು. ಶ್ರೀ ಹಡಪದ  ಅಪ್ಪಣ್ಣ  ವಿವಧೋದ್ದೇಶಗಳ ಸಹಕಾರಿ ಸಂಘ ಬ್ಯಾಂಕ್  ಬಡ, ನಿರ್ಗತಿಕರ, ಹಿಂದುಳಿದ ವರ್ಗದ ಮಕ್ಕಳ ಶೈಕ್ಷಣಿಕವಾಗಿ ಸಹಾಯಮಾಡುವಲ್ಲಿ ಗುರಿ ಇಟ್ಟುಕೊಂಡು ಕೆಲಸ ಮಾಡಲಿ ಶೈಕ್ಷಣಿಕವಾಗಿ ನಾವು ಬಲಪಡಿಸಿದ್ದಾಗ ಮಾತ್ರ  ನಾವು ಸಮಾಜವನ್ನು ಮೇಲೆತ್ತಲು ಸಾಧ‍್ಯ ಎಂದರು.

ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿಅನೇಕ ಸಹಕಾರಿ ಬ್ಯಾಂಕಗಳು ಹುಟ್ಟಿದ್ದು ಕೆಲವು ಮುಚ್ಚಿಯು ಹೋಗಿವೆ.ಸಮಾಜದ ಯಾವುದೇ ವ್ಯಕ್ತಿ ತೀರಿಕೊಂಡರೆ 5000 ರೂ ಹಾಗೂ ಸದಸ್ಯರು ತೀರಿಕೊಂಡರೆ ಒಂದು ಲಕ್ಷದ ಇನ್ಶೂರೇನ್ಸ್ ಮಾಡಿಸಲಾಗಿದೆ ಇಂತಹ ಜನಪರ ಕಾಳಜಿಯಿಂದ ಬ್ಯಾಂಕ್ ಅಭೀವೃದ್ಧಿಯತ್ತ ಮುನ್ನುಗಲು ಸಾಧ್ಯವಾಗಿದೆ. ಬ್ಯಾಂಕಿನ ನಿಜವಾದ ಮಾಲೀಕರು ಬ್ಯಾಂಕಿನ ಸಾಲಗಾರರೆ ಹೊರತು ಬ್ಯಾಂಕಿನ ಅಧ್ಯಕ್ಷರಾಗಲಿ ಅಥವಾ ಸದಸ್ಯರಾಗಲಿ ಅಲ್ಲ ಅವರೇನಿದ್ದರು ಆಳುಗಳು ಮಾತ್ರ ಎಂದರು.

 

ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿ  ಬಡ, ನಿರ್ಗತಿಕರ, ಹಿಂದುಳಿದ ವರ್ಗದ ಕುಟುಂಬಗಳು ಸಂಕಷ್ಟದಲ್ಲಿರುವಾಗ ಸ್ಪಂದಿಸುವ ಕೆಲಸ ಮಾಡುವುದೆ ಸಹಕಾರಿ ಸಂಘಗಳು ಹೊರತು ದೊಡ್ಡ ಬ್ಯಾಂಕಗಳಲ್ಲ. ಠೇವಣಿದಾರರು ಕಠಿಣ ಪರಿಶ್ರಮದಿಂದ   ಬ್ಯಾಂಕ್ ಬೆಳಸಿದ್ದಾರೆ ಅಗತ್ಯಕ್ಕೆ ತಕ್ಕಷ್ಟು ಸಾಲ ಪಡೆದು ಸಮಯಕ್ಕೆ ಹಿಂದುರಿಗಿದ್ದರೆ ಬ್ಯಾಂಕ ಎಂತಹ ಸಮಯದಲ್ಲಿಯು  ಸಹಾಯಕ್ಕೆ ಬರುತ್ತದೆ. ಬ್ಯಾಂಕಿನಿಂದ ಕಲಾವಿದರಿಗು  ಸಹಾಯವಾಗಲಿ ಎಂದು ಹೇಳಿದರು.

ಅಧ್ಯಕ್ಷತೆಯ ನುಡಿಗಳನ್ನಾಡಿದ ಶಿವಾನಂದ ಹಡಪದ  ಬ್ಯಾಂಕಿನ ಕಟ್ಟಡಕ್ಕೆ ಈಗಾಗಲೇ ನಿವೇಶನ ಖರೀದಿ ಮಾಡಿದ್ದು ಕಟ್ಟಡದ ನೀಲಿನಕ್ಷೇಯು ತಯಾರಾಗಿದೆ ರಾಜ್ಯದಲ್ಲಿಯೆ ಮಾದರಿಯ ಬ್ಯಾಂಕ ನಿರ್ಮಾಣ ಮಾಡಬೇಕೆಂಬ ಕನಸು ನಮ್ಮದಾಗಿದೆ.  ಬ್ಯಾಂಕಿಗೆ ಗ್ರಾಹಕರಾಗಿ ಬಂದವರು ಕುಟುಂಬದ ಸದಸ್ಯರಾಗಿ ಉಳಿದಿದ್ದಾರೆ,  ನಮ್ಮ ಕುಟುಂಬದ ಸದಸ್ಯರ ಸಹಕಾರದಿಂದ ಬ್ಯಾಂಕ ಇಷ್ಟೊಂದು ಬೆಳೆದು ನಿಂತಿದೆ ಎಂದರು. ರಾಜಶೇಖರ ಗುಡದಿನ್ನಿ, ಅಶೋಕ ೆಂ. ಗಾಯಕವಾಡ ಮಾತನ್ನಾಡಿದರು.

ಹಡಪದ ಸಮಾಜದ ಕುಮಾರಿ ಸುಶ್ಮೀತಾ  ಆರ್ ಹಡಪದ 625ಕ್ಕೆ 593  ಅಂಕ ಪಡೆದ, ಸಮೀರ ಹೋನ್ನುಟಗಿ  567 ಹಾಗೂ ಶ್ರೀಶೈಲ   ಹಡಪದ ಅವರು  578 ಅಂಕ ಗಳಿಸಿದ ಮಕ್ಕಳಿಗೆ ವಿಶೇಷ ಸನ್ಮಾನ ಮಾಡಿ  ಪ್ರೋತ್ಸಾಹಿಸಿದರು. ಭರತನಾಟ್ಯ ಪ್ರಶಸ್ತಿ ಪುರಸ್ಕೃತಳಾದ ಕುಮಾರಿ ಅನನ್ಯ ಭೀ ಹಡಪದ ಅವರಿಗೆ ವಿಶೇಷ  ಸನ್ಮಾನ ಮಾಡಿದರು.  ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಂ.ಹಡಪದ ವಾರ್ಷಿಕ ವರದಿ ವಾಚಿಸಿದರು. ಆನಂದ ಭೂಸನೂರ, ಡಾ.ಶಾಂತವೀರ ಮನಗೂಳಿ,   ಮಹಾಂತೇಶ ಮೂಲಿಮನಿ  ಆಡಳಿತ ಮಂಡಳಿಯ ಉಪಾಧ್ಯಕ್ಷೆ ಶ್ರೀಮತಿ ನಾಗಮ್ಮ ಪ. ಕಾಶೆ ವೇದಿಕೆ ಮೇಲಿದ್ದರು  ಸಿಬ್ಬಂದಿ ವರ್ಗ ಹಾಗೂ ಸದಸ್ಯರು ಉಪಸ್ಥಿತರಿದ್ದರು.