ಒಂದು ತಿಂಗಳ ಗಡವು ನೀಡುತ್ತೇವೆ ಸ್ಪಂದಿಸದಿದ್ದರೆ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಜಿಲ್ಲಾ ಗುತ್ತಿಗೆದಾರರ ಸಂಘದ ಗೌರವ ಅಧ್ಯಕ್ಷ ಅರುಣ ಮಠ ಹೇಳಿದರು.
ಸಿಂದಗಿ :ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ 14 ರಂದು ನಡೆಯುವ ಬೃಹತ್ ಹೋರಾಟದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಕಳೆದ ಮೂರು ತಿಂಗಳಿAದ ಗುತ್ತಿಗೆದಾರರಿಗೆ ಯಾವುದೇ ಇಲಾಖೆಯಿಂದ ಮಾಡಿರುವ ಕಾಮಗಾರಿಗೆ ಹಣ ಸಂದಾಯ ವಾಗುತ್ತಿಲ್ಲ ಆದ ಕಾರಣದಿಂದ ಕಾಮಗಾರಿ ಪೂರ್ಣ ಗೊಳಿಸಿದ ಉತ್ತಿಗೇದಾರರು ಸಂಕಷ್ಟದಲ್ಲಿ ಸಿಲುಕಿದಂತಾಗಿದೆ. ಅದರಿಂದ ಜಿಲ್ಲಾಧಿಕಾರಿಗಳಿಗೆ ಸಾಂಕೇತಿಕವಾಗಿ 14ರಂದು ಮನವಿ ಸಲ್ಲಿಸಲಾಗುವುದು. ಪ್ರತಿಭಟನೆಯು ಸಿದ್ದೇಶ್ವರ ಗುಡಿಯಿಂದ ಜಿಲ್ಲಾಧೀಕಾರಿಗಳ ಕಛೇರಿ ವರೆಗೆ ಜರುಗುವುದು. ಬೃಹತ್ ಪ್ರತಿಭಟನೆಯಲ್ಲಿ ಸಿಂದಗಿಯ ಜನರು ಭಗಿಯಾಗುವಂತೆ ಮನವಿ ಮಾಡಿದರು.
ನಂತರ ಮಾತನಾಡಿದ ಹಿರಿಯ ಗುತ್ತಿಗೆದಾರ ಮಹಾದೇವಪ್ಪ ಗುಡ್ಲಿಮನಿ ಯಾರದ್ದೋ ವ್ಯಕ್ತಿಕ ಅಥವಾ ರಾಜಕೀಯ ಕಾರಣದಿಂದ ಪ್ರತಿಭಟನೆ ಮಾಡುತ್ತಿಲ್ಲ ಕಳೆದ ಮೂರು ವರ್ಷಗಳಿಂದ ಸರಕಾರ ಹಣ ಸಂದಾಯ ಮಾಡುತ್ತಿಲ್ಲ ಹತ್ತ-ಹತ್ತು ಪ್ರತಿಶತ ಕಾಮಗಾರಿ ಬಿಲ್ಲ್ ಪಾವತಿ ಮಾಡಿದರು ಸಹಿತ ಯಾವುದೇ ಗುತ್ತೀಗೆದಾರರ ಬಿಲ್ಲ್ ಬಾಕಿ ಉಳಿಯುತ್ತಿರಲಿಲ್ಲ. ಗುತ್ತಿಗೆದಾರರು ಸಂಕಷ್ಟದಲ್ಲಿರುವ ಕಾರಣ ಪ್ರತಿಭಟನೆ ಅನಿವಾರ್ಯ ಎಂದು ಹೇಳಿದರು.
Leave a Reply