ರಾಜ್ಯಾದ್ಯಂತ ಮೈಕ್ರೋ ಪೈನಾನ್ಸ್ ಗಳ ಕಿರುಕುಳ ಕುರಿತು ಕೇಳಿ ಬರುತ್ತಿರುವ ಆರೋಪದ ಬೆನ್ನಲ್ಲೆ ಸಿಂದಗಿ ಠಾಣೆಯಲ್ಲಿ ದೂರು ದಾಖಲಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಸಿಂದಗಿ : ಮಾಡಬಾಳ ಗ್ರಾಮದ ನಿಂಬೆವ್ವ ಧ್ಯಾವಪ್ಪ ದಿವಟಗಿ ಒಂದು ವರ್ಷದಿಂದ ಮೈಕ್ರೋ ಪೈನಾನ್ಸ್ ಗಳಲ್ಲಿ ಸಂಬಂಧಿಕರ ಹಾಗೂ ವ್ಯಯಕ್ತಿಕ ಹೆಸರಿನ ಮೇಲೆ ಸಾಲ ಪಡೆದಿರುವುದನ್ನು ಖಚಿತ ಪಡಿಸಿದ್ದಾರೆ. ಮೈಕ್ರೋ ಪೈನಾನ್ಸ್ ಏಜೆಂಟರುಗಳಿಗೆ ನನಗೆ ಸಮಯವಕಾಶ ಕೋಡಿ ನಾನು ಸಾಲ ತೀರಿಸುತ್ತೇನೆ ಎಂದು ಪದೇ ಪದೇ ಬೇಡಿಕೊಂಡರು ಹಗಲು-ರಾತ್ರಿ ಎನ್ನದೆ ತಮ್ಮ ಮನಸ್ಸಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಮಾನಸಿಕ ಕಿರುಕುಳ ನೀಡುತ್ತಿರುವುದನ್ನು ನಿಲ್ಲಿಸಿಲ್ಲಾ ಎಂದು ಆರೋಪಿಸಿ ಐದು ಮೈಕ್ರೋ ಪೈನಾನ್ಸ್ ಗಳ ಮೇಲೆ 24 ಜನೇವರಿಯಂದು ದೂರು ದಾಖಲಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.
1] ಬಿ.ಎಸ್.ಎಸ್. ಮೈಕ್ರೋ ಪೈನಾನ್ಸ್ ಸಿಂದಗಿ 2] ನವ ಚೇತನ (ಈ.ಎಸ್.ಎ.ಎಪ್) ಸಿಂದಗಿ, 3] ಪ್ರಗತಿ ಪೈನಾನ್ಸ್ ಸಿಂದಗಿ 4] ಭಾರತ ಪೈನಾನ್ಸ್ ಸಿಂದಗಿ 5] ಪೈವ್ ಸ್ಟಾರ್ ಹೋಮ ಲೋನ ಬ್ಯಾಂಕ್ ಸಿಂದಗಿ ಇವರ ಮೇಲೆ ದೂರು ದಾಖಲಿಸಿರುವ ಅವರು ಪೈವ್ ಸ್ಟಾರ್ ಹೋಮ ಲೋನ ಬ್ಯಾಂಕ್ ಸಿಂದಗಿ ಏಜೆಂಟರು ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಸಿಂದಗಿ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಾಲ ತೆಗೆದುಕೊಂಡಿರುವುದು ಸತ್ಯ ತಿರಿಸಲು ಸಮಯಾವಕಾಶ ಕೊಡಿಸಿ ನ್ಯಾಯ ದೊರಕಿಸಿ ಕೋಡುವಂತೆ ದೂರಿನಲ್ಲಿ ವಿನಂತಿಸಿದ್ದಾರೆ.
ದೂರು ದಾಖಲಾಗಿರುವ ಐದು ಶಾಖೆಗಳಿಗೆ ಮಾಹಿತಿ ವದಗಿಸುವಂತೆ ನೋಟಿಸ್ ನೀಡಲಾಗಿದೆ. ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಲಾಗುವುದು -ಆರೀಪ್ ಮುಶಾಪುರ ಪಿ.ಎಸ್.ಐ ಸಿಂದಗಿ
ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮೀ ಅವರ ಮುಂದೆ ಕಿರುಕುಳದ ಅಳಲು ತೋಡಿಕೊಂಡಾಗ ಜಿಲ್ಲಾ ಪೊಲೀಸ ಅಧೀಕ್ಷಕರಿಗೆ ತಿಳಿಸಿ ನ್ಯಾಯ ಕೊಡಿಸುವ ಪ್ರಯತ್ನ ಮಾಡಿದ್ದಾರೆ. ಪೈನಾನ್ಸ್ ನವರು ನಮ್ಮ ತಂದಯವರಿಗೆ ಅವರ ಕೆಲಸ ಬಿಡಿಸಿ ಕಛೇರಿಗೆ ಕರೆದೊಯ್ದು ಕುಂದಿರಿಸಿರುವುದು ಇದೆ. – ಚೇತನ ದಿವಟಗಿ ದೂರುದಾಳಳ ಮಗ
ಅವರಿಗೆ ಕಂತುಗಳು ತುಂಬಲು ತಿಳಿಸಿರುವುದು ನಿಜಾ ಯಾವುದೇ ದೈಹಿಕ ಹಲ್ಲೆ ಮಾಡಿರುವುದಿಲ್ಲ ಪೊಲೀಸ ಠಾಣೆಗೆ ಮಾಹಿತಿ ವದಗಿಸಲಾಗಿದೆ ತನಿಖೆಗೆ ಸಹಕರಿಸುವೆವೆ. – ಶಾಖಾಧಿಕಾರಿ ಪೈವ್ ಸ್ಟಾರ್ ಹೋಮ ಲೋನ ಬ್ಯಾಂಕ್ ಸಿಂದಗಿ
Leave a Reply