ಬೀಗ ಹಾಕಿದ ಮನೆಗೆ ಕನ್ನ ಹಾಕಿದ ಖದೀಮರು

ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಪೊಲೀಸ್ ಡಾಗ್ ಸ್ಕ್ವಾಡ್  ಕಾರ್ಯಾಚರಣೆ.

ಸಿಂದಗಿ : ಪಟ್ಟಣದ ಮನಗೂಳಿ ಲೇಔಟ್ ನಲ್ಲಿರುವ ಮಹೇಶ ಮಸಳಿ ಇವರ ಮನೆಗೆ ನುಗ್ಗಿದ ಖದೀಮರು ಒಟ್ಟು ಮೂವತ್ತು ಸಾವಿರ ನಗದು ಹಾಗೂ ಎಂಬತ್ತು ಗ್ರಾಂ ಚಿನ್ನ ದೋಚಿ ಪರಾರಿ ಆಗಿದ್ದಾರೆ.

ಮಹೇಶ್ ಮೂಲತಃ ಆಲಮೇಲ ಪಟ್ಟಣದವರಾಗಿದ್ದು ಗಾಲೀಬ ಸಾಬರ ಜಾತ್ರೆ ನಿಮಿತ್ತ ಮನೆಗೆ ಬೀಗ ಹಾಕಿ ಆಲಮೇಲಕ್ಕೆ ತೆರಳಿದಾಗ ಘಟನೆ ನಡೆದಿದೆ  ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.

ಪ್ರಕರಣ ದಾಖಲಾಗಿದೆ ಆದಷ್ಟು ಬೇಗ ಪ್ರಕರಣಕ್ಕೆ ಇತಿಶ್ರೀ ಹಾಡುತ್ತೇವೆ ಸ್ಥಳೀಯರ ಸಹಕಾರ ಅಗತ್ಯ – ಆರೀಫ್ ಮುಶಾಪುರಿ ಪಿ.ಎಸ್.ಐ ಸಿಂದಗಿ.


Comments

Leave a Reply

Your email address will not be published. Required fields are marked *