ಬೆಳಕಿನ ಹಬ್ಬ ದೀಪಾವಳಿ ದಿನದಂದು ಸಿಂದಗಿ ರಸ್ತೆಗೆ ಅಲಂಕಾರಿಕ ದೀಪಗಳಿಗೆ ಶಾಸಕ ಅಶೋಕ ಮನಗೂಳಿ ಚಾಲನೆ ನೀಡಿದರು.
ಸಿಂದಗಿ : ಪಟ್ಟಣದ ಪ್ರಮುಖ ರಸ್ತೆ ಬಾಬಾಸಾಹೇಬ ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತದ ಮಾರ್ಗದಲ್ಲಿ ಇಂದು ದುದನಿ ಅವರ ಅಂಗಡಿ ಮುಂದುಗಡೆ ಅಳವಡಿಸಿದ ಮೇನ್ ಸ್ವೀಚ್ ಆನ್ ಮಾಡುವುದರ ಮೂಲಕ ಅಲಂಕಾರಿಕ ದೀಪಗಳಿಗೆ ಚಾಲನೆ ನೀಡಿದರು.
ಅಲಂಕಾರಿಕ ವಿದ್ಯುತ್ ಕಂಬಗಳ ಕಾಮಾಗಾರಿ ಇಂದಿಗೆ ಕೇವಲ 24 ದಿನಗಳ ಹಿಂದೆ ಬಸವೇಶ್ವರ ವೃತ್ತದಲ್ಲಿ ಐದು ಕೋಟಿ ರೂಪಾಯಿಗಳಲ್ಲಿ ಭೂಮಿ ಪೂಜೆ ಸಲ್ಲಿಸಿದರು. ವೇಗವಾದ ಕಾಮಗಾರಿಗೆ ಸಿಂದಗಿ ಜನತೆ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.
ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಸದಸ್ಯರಾದ ಸಂದೀಪ ಚೌರ, ಹಾಸೀಂ ಆಳಂದ, ಮುಖ್ಯಾಧಿಕಾರಿ ರಾಜಶೇಖರ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.
Leave a Reply