ಅಭಿವೃದ್ಧಿ ಪಡಿಸದೆ ಲೇಔಟ್ ಮಾಡಿರುವವರಿಗೆ ನೋಟಿಸ್ | ಖಾತಾ ಬದಲಾವಣೆ ಸಾಮಾನ್ಯ ಸಭೆಯಲ್ಲಿ ಅಂತಿಮ

ಸಿಂದಗಿ ಪುರಸಭೆ ಸಾಮಾನ್ಯ ಸಭೆಯಲ್ಲಿ  ಹಲವು ಜನಪರ ಉಪಯೋಗ ಹಾಗೂ ಪುರಸಭೆ ಹಣಕಾಸು ಕೂಡಿಕರಣದ ಹಿತದೃಷ್ಟಿಯಿಂದ ಹಲವಾರು ಬದಲಾವಣೆಗಳನ್ನು ನೂತನ ಅಧ್ಯಕ್ಷ ಶಾಂತವೀರ ಬಿರಾದಾರ ನೇತೃತ್ವದಲ್ಲಿ ತಗೆದುಕೋಳ್ಳಲಾಯಿತು.

ಸಿಂದಗಿ : ಪುರಸಭೆಯ ಸಾಮಾನ್ಯ ಸಭೆಯ ವಿಷಯಗಳಲ್ಲಿ  ಸಂಬಂದಿಸಿದಂತೆ ಮಹತ್ವದ ನಿರ್ಣಯ  ಖಾತಾ ಬದಲಾವಣೆ ಹಾಗೂ ನೂತನ ಲೇಔಟ್  ಕುರಿತು ಅನುಮೋದನೆ ತೆಗೆದುಕೊಂಡು ನೂತನ ಅಧ್ಯಕ್ಷ ಶಾಂತವೀರ ಬಿರಾದಾರ  ಅಕ್ರಮ ನುಸುಳುಕಾರರಿಗೆ ಎಚ್ಚರಿಕೆ ನೀಡಿದ್ದಾರೆ. ಪಟ್ಟಣದಲ್ಲಿ ನೂತನ ಲೇಔಟ್ ಗಳ ಸಂಖ್ಯೆ ಕ್ರಮೇಣ ಹೇಚ್ಚುತ್ತಿರುವುದು ಕಂಡು ಬರುತ್ತಿದ್ದು ಎನ್.ಎ. ಮಾಡಿಸಿದ ಲೇಔಟ್ ಮಾಲೀಕರು ಅಭಿವೃದ್ಧಿ ಪಡಿಸದೆ  ಅಕ್ರಮವಾಗಿ ಪರವಾನಗಿ ಪಡೆದು ಪ್ಲಾಟ್ ಗಳನ್ನು ಗ್ರಾಹಕರಿಗೆ ನೀಡುತ್ತಿದ್ದಾರೆ. ಅಂತವರಿಗೆ ಲೇಔಟ್ ಅಭಿವೃದ್ಧಿ  ಮಾಡುವಂತೆ ನೋಟಿಸ್ ನೀಡುವುದು ಮತ್ತು ಖಾತಾ ಬದಲಾವಣೆಯಲ್ಲಿ ಅಕ್ರಮ ದಿಂದಾಗಿ ಹಲವಾರು ದೂರುಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಅದನ್ನು ತಡೆ ಹಿಡಿಯುವ ದೃಷ್ಟಿಯಿಂದ ತಿಂಗಳಿಗೋಮ್ಮೆ  ಸಾಮಾನ್ಯ ಸಭೆ ಕಡ್ಡಾಯವಾಗಿ ನಡೆಸಿ ಸಭೆಯ ನೇತೃತ್ವದಲ್ಲಿ  ಖಾತಾ ಬದಲಾವಣೆ ಮಾಡಲಾಗುವುದು ಎಂದು ಮಹತ್ವದ ನಿರ್ಣಯ ಸಭೆ ಅಂಗಿಕರಿಸಿತು.

ಅಕ್ರಮ‌ ಸಕ್ರಮ ನಳ ವನ್ನಾಗಿ ಪರಿವರ್ತಿಸಿ ಮನೆಗೆ ನಳದ ಪರವಾನಗಿ ನೀಡಿ ನಳಕ್ಕೆ ಇದುವರೆಗೆ ಕಟ್ಟದ ಬಿಲ್ ನಲ್ಲಿ ಕಡಿಮೆ  ಮಾಡಿ ಕೇವಲ ಡಿಪಾಸಿಟ್ ನೀಡಿ ನೂತನ ನಳವಾಗಿ ಬದಲಾಯಿಸಿ ಕೋಳಲು ಒಂದು ತಿಂಗಳ ಅವಕಾಶ ಕಲ್ಪಿಸಿದರೆ ಅನಧಿಕೃತ ನಳಗಳನ್ನು  ಪರವಾನಗಿ ನಳಗಳನ್ನಾಗಿ ಮಾಡಲು ಅವಕಾಶ ಕಲ್ಪಿಸಿದಂತಾಗುವುದು‌. ಹಾಗೂ ಪರವಾನಗಿ ತೆಗೆದುಕೋಳ್ಳದೆ ಇದ್ದರೆ ಅವರ ವಿರುದ್ಧ ಕ್ರೀಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಪುರಸಭೆಯ ಸದಸ್ಯರ ಚರ್ಚಿಸಿ ಅನುಮೋದನೆ ತೆಗೆದುಕೊಂಡರು.

ಒನ್ ವೇ ರಸ್ತೆಗೆ ಮೂರು ಬಾರಿ ಠರಾವು ಆದ್ರು ಕಾರ್ಯರೂಪಕ್ಕೆ ಬಂದಿಲ್ಲ ಈ ಬಾರಿಯಾದರೂ ಅಚ್ಚುಕಟ್ಟಾಗಿ ಮಾಡಿ ಎಂದು ಸದಸ್ಯ ಗೋಲ್ಲಾಳ ಬಂಕಲಗಿ ಹೇಳಿದರು. ಪುರಸಭೆ ಖರ್ಚು ವೆಚ್ಚಗಳ ಅನುಮೋದನೆಗೆ ಅಧ್ಯಕ್ಷರ ನೇತೃತ್ವದಲ್ಲಿ ವಿಶೇಷ ಸಮಿತಿ ರಚನೆ, 473 ಮತ್ತು 474 ಆಶ್ರಯ ವಸತಿಗೆ ತಿಂಗಳೊಳಗೆ ಮುಕ್ತಿ ಹಾಡುವ ಉದ್ದೇಶದಿಂದ ಅನುಮೋದನೆ ತೆಗೆದುಕೋಳ್ಳಲಾಗುತ್ತಿದೆ ಎಂದು ಅಧ್ಯಕ್ಷರು ತಿಳಿಸಿದರು.

ಟ್ಯಾಕ್ಸ್  ಗೋಲ್ಮಾಲ್  ಬ್ಯಾಂಕ್  ಸೀಲ್ ಡುಪ್ಲಿಕೇಟ್ ಮಾಡಿದವರಾರು?

ಪುರಸಭೆ ಸದಸ್ಯ ಶಾಂತವೀರ ಮನಗೂಳಿ ಟ್ಯಾಕ್ಸ್ ತುಂಬಲು ಬರುವ ಜನರಿಗೆ ಮೋಸ‌ ಮಾಡಲಾಗುತ್ತಿದೆ ದಿನಕ್ಕೆ ಲಕ್ಷಾಂತರ ರೂಪಾಯಿ  ಲಪಟಾಯಿಸಲಾಗುತ್ತಿರುವುದು ಕಂಡು ಬರುತ್ತಿದೆ ಏಜೆಂಟ್ ರು ಮಾಡುತ್ತಿದ್ದಾರೆ ಎಂಬುದಕ್ಕಿಂತ  ಸದಸ್ಯರೆ ಏಜೆಂಟ್ ಆಗುತ್ತಿದ್ದಾರೆ  ನಡೆದಿರುವ ಘಟನೆ ಸಭೆ ಎದುರಿಗೆ ತನ್ನಿ ಕೋಟಿ ಟ್ಯಾಕ್ಸ್  ಚಲನ್ ನೀಡಿರುವುದರ ವಿರುದ್ಧ ಕೂಡಲೆ ಪ್ರಕರಣ ದಾಖಲಿಸಿ ಎಂದು ಒತ್ತಾಯಿಸಿದರು.

ಸಭೆಯ  ಮಾಹಿತಿಗೆ ತಂದ ಮುಖ್ಯಾಧಿಕಾರಿ ಸುರೇಶ ನಾಯಕ ಟ್ಯಾಕ್ಸ್  ಚಲನ್  ಹೊಂದಾಣಿಕೆಯಲ್ಲಿ ಲೋಪ ಕಂಡುಬಂದಿದೆ ಎಂದಿದ್ದಾರೆ. ಸಭೆಯಲ್ಲಿ ನಡೆದ ವಿಡಿಯೋಗಳು ಈ ಕೆಳಗಿವೆ.

 

 

ಪುರಸಭೆ ಸದಸ್ಯೆ ಪ್ರತಿಭಾ ಕಲ್ಲೂರ  ಅಧಿಕಾರಿಗಳು ಸದಸ್ಯರಿಗೆ ಗೌರವ ಕೊಡುತ್ತಿಲ್ಲ ವಾರ್ಡಿನ ಜನರು ನಿಮ್ಮಗೆ ಚರಂಡಿ ತೆಗೆಯಿರಿ ಅನ್ನುವ ಪರಿಸ್ಥಿತಿಗೆ ಬರುತ್ತಿದ್ದಾರೆ ಎಂದು ಆರೋಪಿಸಿದ ತಕ್ಷಣ ಮುಖ್ಯಾಧಿಕಾರಿ ಸುರೇಶ ನಾಯಕ ಕೆಲಸದಲ್ಲಿ ವಿಳಂಬ ಆಗಿರಬಹುದು ಆದರೆ ಗೌರವ ನೀಡಿಲ್ಲ ಎಂದು ಸುಳ್ಳು ಆರೋಪ ಮಾಡಬೇಡಿ ನೀವು ಪುರಸಭೆಗೆ ಇಂದು ಬಂದಿದ್ದೀರಿ ನೀವು ಇದುವರೆಗೆ ಪುರಸಭೆಗೆ ಬಂದಿಲ್ಲ ನಿಮ್ಮನ್ನು ಗೌರವಿಸುತ್ತಿಲ್ಲ ಎಂದು ಹೇಳುವುದು ಸರಿಯಲ್ಲ ಎಂದರು. 

ಹಣಮಂತ ಸುಣಗಾರ, ಭಾಷಾಸಾಬ ತಾಂಬೋಳಿ, ಬಸವರಾಜ ಯರನಾಳ, ಸಂದೀಪ ಚೌರ, ಉಮಾದೇವಿ ಸುಲ್ಪಿ, ಸಾಯಬಣ್ಣ ಪುರದಾಳ, ಸಿದ್ದು ಮಲ್ಲೇದ,  ಸೇರಿದಂತೆ ಹಲವು ಸದಸ್ಯರು ಪುರಸಭೆಯ ಸಮಸ್ಯೆಗಳ ಬಗ್ಗೆ ಗಮನಸೆಳೆದರು. ಹಲವು ಸದಸ್ಯರು ಸಭೆ ಮುಕ್ತಾಯಕ್ಕು ಮುನ್ನವೆ ಸಭೆಯಿಂದ ಹೊರನಡೆದರು. ಅಧ್ಯಕ್ಷ ಶಾಂತವೀರ ಬಿರಾದಾರ ಹಾಗೂ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ ಅವರು ನೇತೃತ್ವದಲ್ಲಿ ಮೊದಲ ಸಭೆ ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತದೆ ಎಂದು ನೋಡಬೇಕಿದೆ.


Comments

Leave a Reply

Your email address will not be published. Required fields are marked *