ಸಿಂದಗಿ: ತಾಲೂಕಿನ ಎಲ್ಲ ಜನತೆಯ ದೈಹಿಕ ಹಾಗೂ ಮಾನಸಿಕ ಆರೋಗ್ಯದ ವೃದ್ಧಿಗಾಗಿ ಸದೃಢ ದೇಹ ಹಾಗೂ ಸದೃಢ ಮನಸಿನ ಪರಿಕಲ್ಪನೆ ಇಟ್ಟುಕೊಂಡು ಸಿಂದಗಿ ನಗರದಲ್ಲಿ ಶೀಘ್ರದಲ್ಲಿಯೇ ಬೃಹತ್ ಪ್ರಮಾಣದ ಯೋಗ ಶಿಬಿರವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಶಾಸಕ ಅಶೋಕ ಮನಗೂಳಿ ತಿಳಿಸಿದ್ದಾರೆ.
ಸಾತ್ವಿಕರು, ಮಹಾನ್ ದೈವಭಕ್ತರು ನುರಿತ ಯೋಗ ಗುರುಗಳಾದ ಹಿಮಾಲಯನ್ ಧ್ಯಾನ ಯೋಗಗುರು ಪರಮಪೂಜ್ಯ ಶ್ರೀ ನಿರಂಜನ ಸ್ವಾಮಿಗಳು ಶಿಬಿರವನ್ನು ನಡೆಸಿಕೊಡಲಿದ್ದಾರೆ.
ಕಾರಣ ಈ ಯೋಗ ಶಿಬಿರದ ಆಯೋಜನೆಯ ಪೂರ್ವಭಾವಿಯಾಗಿ ಇಂದು ಬುಧವಾರ ಸಾಯಂಕಾಲ 4:30 ಗಂಟೆಗೆ ಪಟ್ಟಣದ ಬಸವ ಮಂಟಪದಲ್ಲಿ ಶಾಸಕ ಅಶೋಕ್ ಮನಗೂಳಿ ಅವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.
ಸಿಂದಗಿಯ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಯುವಕರು, ಹಿರಿಯ ನಾಗರಿಕರು ಹಾಗೂ ಯೋಗಾಸಕ್ತರು ಕಾರ್ಯಕ್ರಮದ ಸಿದ್ಧತೆಗಳ ಬಗ್ಗೆ ಚರ್ಚೆ ಹಾಗೂ ಸಲಹೆ ಸೂಚನೆಗಳನ್ನು ನೀಡಲು ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಳ್ಳಲು ಯೋಗೋತ್ಸವ ಸಮಿತಿ ವಿನಂತಿಸಲಾಗುವುದೆಂದು ತಿಳಿಸಿ ಪ್ರಕಟಣೆ ನೀಡಿದ್ದಾರೆ.
Leave a Reply