ಸಿಂದಗಿ: ತಾಲೂಕಿನ ಹಿಕ್ಕಣಗುತ್ತಿ ಗ್ರಾಮಸ್ಥರು ದೇವರ ಕಾರ್ಯಕೆಂದು ಗೋಲಗೇರಿ ತೇರಳುತ್ತಿರುವ ಸಂದರ್ಭದಲ್ಲಿ ವಾಹನ ಚಾಲಕನ ನಿರ್ಲಕ್ಷತನದಿಂದ ಮನ್ನಾಪುರ ಗ್ರಾಮದ ಬಳಿ ಭೀಕರ ಅಪಘಾತ ಸಂಭವಿಸಿದೆ.
ತಾಲೂಕಿನ ಮನ್ನಾಪುರ ಗ್ರಾಮದ ಬಳಿ ಟೆಂಪೂ ಟ್ರ್ಯಾಕ್ಸ್ ಪಲ್ಟಿಯಾಗಿ 30ಕ್ಕೂ ಅಧಿಕ ಜನರಿಗೆ ಸಣ್ಣ ಪುಟ್ಟ ಗಳಾಗಳಾಗಿವೆ. ಅದರಲ್ಲಿ 3ಜನ ಪರಿಸ್ಥಿತಿ ಚಿಂತಾಜನಕವಾಗಿದೆ.
ಸಾರ್ವಜನಿಕ ಆಸ್ಪತ್ರೆಗೆ ಬೇಟಿ ನೀಡಿದ ಶಾಸಕ ಅಶೋಕ ಮನಗೂಳಿ ಮೂವತ್ತು ಜನರಿಗೆ ಗಾಯಗಳಾಗಿವೆ ಜಿಲ್ಲಾ ವೈದ್ಯಾಧಿಕಾರಿಗಳೊಡನೆ ಮಾತನಾಡಿ ಜಿಲ್ಲಾ ಆಸ್ಪತ್ರೆಯಲ್ಲಿ ಹೇಚಿನ ಚಿಕೀತ್ಸೆ ನೀಡಲು ತಯಾರಿಗೆ ಮಾತನಾಡಿದ್ದೇನೆ ಯಾವುದೇ ಪ್ರಾಣಾಪಾಯ ವಾಗಿಲ್ಲ ಎಂದು ತಿಳಿಸಿದರು.
ಮಾಜಿ ಶಾಸಕ ರಮೇಶ ಭೂಸನೂರ ಸೇರಿದಂತೆ ಹಲವು ಗಣ್ಯರು ಆಸ್ಪತ್ರೆಗೆ ಬೇಟಿ ನೀಡಿ ಕುಟುಂಬದವರಿಗೆ ಸಂತೈಸಿದರು.
Leave a Reply