ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಿಡುಗಡೆಗೊಳಿಸಿದ ಶಾಸಕ ಅಶೋಕ ಮನಗೂಳಿ

ರಾಜ್ಯ ಸರ್ಕಾರ ನುಡಿದಂತೆ ನಡೆದಿದೆ. ಅಭಿವೃದ್ಧಿಗೆ ಇನ್ನೊಂದು ಹೆಸರೇ ರಾಜ್ಯದ ಕಾಂಗ್ರೆಸ್ ಸರ್ಕಾರ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಸಿಂದಗಿ:  ಶುಕ್ರವಾರ ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಲೋಕಸಭಾ ಚುನಾವಣಾ ನಿಮಿತ್ಯವಾಗಿ ಹಮ್ಮಿಕೊಂಡಿರುವ ಕಾಂಗ್ರೆಸ್ ಗ್ಯಾರಂಟಿ ಕಾರ್ಡುಗಳನ್ನು ಬಿಡುಗಡೆಗೊಳಿಸಿ  ಮಾತನಾಡಿದರು.

ಕೇಂದ್ರ ಬಿಜೆಪಿ ಸರ್ಕಾರ ಕೇವಲ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ದೇಶದ ಜನರ ದಾರಿಯನ್ನ ತಪ್ಪಿಸುತ್ತಿದೆ. ದೇಶದ ಅಭಿವೃದ್ಧಿ ವಿಚಾರದಲ್ಲಿ, ಯುವಕರಿಗೆ ಉದ್ಯೋಗದ ವಿಚಾರದಲ್ಲಿ, ಮಹಿಳಾ ಸ್ವಾವಲಂಬನೆಯ ವಿಚಾರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಕೇಂದ್ರ ಸರ್ಕಾರ ಸುಳ್ಳಿನ ಭರವಸೆಯನ್ನ ನೀಡಿ ಜನರನ್ನು ದಿಕ್ಕು ತಪ್ಪಿಸುತ್ತಿದೆ.

ಹತ್ತು ವರ್ಷದ ಅಧಿಕಾರ ಅವಧಿಯಲ್ಲಿ ಈ ದೇಶ ಸಂಪೂರ್ಣವಾಗಿ ಅಭಿವೃದ್ಧಿಯ ಪಥದಲ್ಲಿ ಸಾಗಬೇಕಾಗಿತ್ತು. ಆದರೆ ಇನ್ನು ಈ ದೇಶದಲ್ಲಿ ಜ್ವಲಂತ ಸಮಸ್ಯೆಗಳು ಹಾಗೆ ಉಳಿದುಕೊಂಡಿವೆ. ಕಾಂಗ್ರೆಸ್ ಪಕ್ಷ ಈ ದೇಶದ ಸಮಗ್ರ ಅಭಿವೃದ್ಧಿಗೆ ಸದಾ ತುಡಿಯುತ್ತಿರುವ ಪಕ್ಷ. ಈ ಬಾರಿ ಜನ ಬದಲಾವಣೆಯನ್ನು ಬಯಸಿದ್ದಾರೆ. ಆ ನಿಟ್ಟಿನಲ್ಲಿ ವಿಜಯಪುರ ಲೋಕಸಭೆಯ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರ ಗೆಲವು ಖಚಿತವಾಗಿದೆ ಎಂದರು.

ಈ ವೇಳೆ ಗ್ಯಾರಂಟಿ ಯೋಜನೆಯ ಜಿಲ್ಲಾ ಅಧ್ಯಕ್ಷ ಇಲಿಯಾಸ್ ಬೋರಾಮಣಿ ಮಾತನಾಡಿ, ಭಾರತ ದೇಶ ಜಾತ್ಯತೀತವಾಗಿರುವ ದೇಶ. ಈ ಸುಂದರ ದೇಶದಲ್ಲಿ ಜಾತೀಯತೆಯ ವಿಷ ಬೀಜವನ್ನು ಬಿತ್ತಿ ಜನರ ಭಾವನೆಗಳಿಗೆ ಧಕ್ಕೆ ತರುತ್ತಿರುವ ಬಿಜೆಪಿ ಪಕ್ಷವನ್ನು ನಾವು ಕಿತ್ತಿ ಒಗೆಯುವ ಸಮಯ ಬಂದಿದೆ. ಪ್ರಧಾನಿ ನರೇಂದ್ರ ಮೋದಿಯವರು ದೇಶದ ಪ್ರತಿಯೊಬ್ಬ ವ್ಯಕ್ತಿಯ ಖಾತೆಗೆ 15 ಲಕ್ಷ ರೂಪಾಯಿ ಜಮಾ ಮಾಡುವ ಭರವಸೆಯನ್ನು ನೀಡಿದರು ಆ ಭರವಸೆ ಎಲ್ಲಿದೆ. ಕೇವಲ ಜನರಿಗೆ ಮೋಡಿ ಮಾಡುವ ನೀತಿಯನ್ನು ಬಿಜೆಪಿ ಪಕ್ಷ ಮಾಡುತ್ತಿದೆ. ರಾಜ್ಯ ಸರ್ಕಾರ ಬಡ ಜನತೆಯ ಕಲ್ಯಾಣಕ್ಕಾಗಿ ಐದು ಗ್ಯಾರಂಟಿಗಳನ್ನು ನೀಡುವ ಮೂಲಕ ರಾಜ್ಯವನ್ನ ಸುಭದ್ರವನ್ನಾಗಿ ಮಾಡುತ್ತಿದೆ. ಈ ಬಾರಿ ವಿಜಯಪುರ ಲೋಕಸಭೆಯ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ನಾವು ನಿರಂತರ ಹೋರಾಟ ಮಾಡಿದಲ್ಲಿ ಕಾಂಗ್ರೆಸ್ ವಿಜಯ ನಿಶ್ಚಿತ ಎಂದರು.

ಈ ವೇಳೆ ಕಾಂಗ್ರೆಸ್ ಮುಖಂಡರಾಗಿರುವ ಎಸ್ ಎಂ ಪಾಟೀಲ ಗಣಿಯಾರ, ಮುಸ್ತಾಕ್ ಮುಲ್ಲಾ, ಮಲ್ಲಣ್ಣ ಸಾಲಿ, ಚನ್ನು ವಾರದ ಸೇರಿದಂತೆ ಇತರರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ ಗ್ಯಾರಂಟಿ ಯೋಜನೆಯ ತಾಲೂಕಾ ಅಧ್ಯಕ್ಷ ಶ್ರೀಶೈಲ ಕೌಲಗಿ, ಬ್ಲಾಕ್ ಅಧ್ಯಕ್ಷ ಸುರೇಶ ಪೂಜಾರಿ, ಸುರೇಶ ಮಳಲಿ, ಅರವಿಂದ ಹಂಗರಗಿ, ಹಣಮಂತ ಸುಣಗಾರ, ರಾಜಶೇಖರ ಚೌರ, ವಾಯ್ ಪಿ ನಾಯ್ಕೊಡಿ, ಶರಣಯ್ಯ ಹಿರೇಮಠ್, ಶಿವು ಹತ್ತಿ, ಮಹಿಳಾ ಅಧ್ಯಕ್ಷರಾದ ಜಯಶ್ರೀ ಹದನೂರ, ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಇತರರು ಉಪಸ್ಥಿತರಿದ್ದರು.