ಬಿಜೆಪಿಯ ಶಕ್ತಿ ಕೇಂದ್ರದ ಸಭೆಗಳು ಗೆಲುವಿನ ರಣತಂತ್ರ ರೂಪಿಸುವಲ್ಲಿ ಪ್ರಮುಖರು

ಸಿಂದಗಿ ಬಿಜೆಪಿ ಮಂಡಲ ವತಿಯಿಂದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಿಂದಗಿ ವಿಧಾನಸಭಾ ಮತಕ್ಷೇತ್ರದ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರ ಹಾಗೂ ಶಕ್ತಿ ಕೇಂದ್ರದ ಅಧ್ಯಕ್ಷರ ಮಹತ್ವದ ಸಭೆ ಜರುಗಿತು.

ಸಿಂದಗಿ: ಸಭೆಯಲ್ಲಿ ವಿಜಯಪುರ ಲೋಕಸಭಾ ಚುನಾವಣೆಯ ಗೆಲುವಿಗೆ ಯಾವ ಯಾವ ಯೋಜನೆಗಳನ್ನು ರೂಪಿಸಬೇಕು ಸಂಪೂರ್ಣ ಮಾಹಿತಿಯನ್ನು ಬೆಳಗಾವಿ ವಿಭಾಗದ ಸಂಘಟನೆ ಕಾರ್ಯದರ್ಶಿ  ಪ್ರಕಾಶ ಅಕ್ಕಲಕೋಟ ಮಾರ್ಗದರ್ಶನ ನೀಡಿದರು. 

ಮಾಜಿ ಶಾಸಕ  ರಮೇಶ ಭೂಸನೂರ ಮಾತನಾಡಿ ಸಿಂದಗಿ ವಿಧಾನಸಭಾ ಮತಕ್ಷೇತ್ರದಲ್ಲಿ ಬಿಜೆಪಿಗೆ ಅತೀ ಹೆಚ್ಚು ಮತ ಹಾಕಿಸಲು ಕಾರ್ಯಕರ್ತರು ಶ್ರಮಿಸಬೇಕಾಗಿದೆ ಎಂದು  ಹೇಳಿದರು.

ಸಿಂದಗಿ ಮಂಡಲದ ಅಧ್ಯಕ್ಷ  ಸಂತೋಷ್ ಪಾಟೀಲ ಡಂಬಳ ಮಾತನಾಡಿ ನಮ್ಮ ಕಾರ್ಯಕರ್ತರು ಪ್ರತಿ ಬೂತ್ ಮಟ್ಟದಲ್ಲಿ ಮನೆ ಮನೆಗೆ ಸಂಪರ್ಕ ಮಾಡಬೇಕು ಮತದಾರರಿಗೆ ಮೋದಿ ಅವರ ಅಭಿವೃದ್ಧಿ ಕೆಲಸದ ಬಗ್ಗೆ  ತಿಳಿ ಹೇಳಬೇಕು ಎಂದರು.

ಇದೇ ಸಂದರ್ಭದಲ್ಲಿ ಮೋದಿ ಅವರ ಪ್ರಸಕ್ತ ಸಾಲಿನ ದಿನಚರಿ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಅನೀಲ ಜಮಾದಾರ ಗುರು ತಳವಾರ ಎಂ ಎಸ್ ಮಠ ಸಿದ್ರಾಮ ಆನಗೋಂಡ ನಿಲ್ಲಮ್ಮ ಯಡ್ರಾಮಿ ಹಾಗೂ ಎಲ್ಲಾ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರು ಹಾಗೂ ಶಕ್ತಿ ಕೇಂದ್ರದ ಅಧ್ಯಕ್ಷರು ಪಧಾದಿಕಾರಿಗಳು ಹಾಜರಿದ್ದರು.


Comments

Leave a Reply

Your email address will not be published. Required fields are marked *