ಪಾದಯಾತ್ರೆ ಪೂರ್ವಭಾವಿ ಸಭೆಗೆ ವಿಠ್ಠಲ ಕೋಳ್ಳುರ ಆಹ್ವಾನ

ಸಿಂದಗಿ :   ಕರ್ನಾಟಕ ಪ್ರದೇಶ ಕಾಂಗ್ರೆಸ ಸಮಿತಿ ಅಧ್ಯಕ್ಷರಾದ  ಡಿ.ಕೆ ಶಿವಕುಮಾರ  ಅವರ ಆದೇಶದಂತೆ ರಾಷ್ಟೀಯ ಕಾಂಗ್ರೆಸ  ಪಕ್ಷದ ಮಾಜಿ ಅಧ್ಯಕ್ಷರಾದ  ರಾಹುಲ್ ಗಾಂಧಿಯವರ ಕನಸಿನ ಭಾರತದ “ಭಾರತ ಐಕ್ಯತಾ” ಪಾದಯಾತ್ರೆಯನ್ನು ದಿನಾಂಕ 07-09-2022 ರಂದು ಕನ್ಯಾಕುಮಾರಿಯಿಂದ ಕಾಶ್ಮೀರದವರಗೆ ಸುಮಾರು 150 ದಿನಗಳು 3500 ಕಿ.ಮೀ ವರಗೆ ನಡಿಗೆ ಹಾಕುವ ಮೂಲಕ  ರಾಷ್ಟೀಯ ಕಾಂಗ್ರೆಸ್ ಪಕ್ಷವು  ಈ ಕಾರ್ಯಕ್ರಮವನ್ನು ಹಮ್ಮಿಕೂಂಡಿದೆ.

ಈ ಸಂದರ್ಭದಲ್ಲಿ ಮಾರ್ಗಮದ್ಯದಲ್ಲಿ ದಿನಾಂಕ 28-09-2022 ಗುಂಡ್ಲುಪೇಟೆಯಿಂದ ಪ್ರಾರಂಭವಾಗಿ ರಾಯಚೂರವರಗೆ ಕರ್ನಾಟಕದಲ್ಲಿ 21 ದಿನಗಳ ಕಾಲ ಸುಮಾರು 506 ಕಿ.ಮಿ ದೂರದವರಗೆ  ರಾಹುಲ್ ಗಾಂಧಿ ಅವರು ಪಾದಯಾತ್ರೆ ಮಾಡುತ್ತಾರೆ. ಆದ್ದರಿಂದ  ಈ ಐತಿಹಾಸಿಕ ಪಾದಯಾತ್ರೆಯಲ್ಲಿ ಸಿಂದಗಿ ವಿಧಾನಸಭಾ ಮತಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗು ಮುಖಂಡರು ಭಾಗವಹಿಸುವ ಸಲುವಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ ಸಮಿತಿಯ ರಾಜ್ಯ ಪ್ರದಾನ ಕಾರ್ಯದರ್ಶಿಗಳು ಹಾಗು ಸಿಂದಗಿ ವಿಧಾನಸಭಾ ಮತಕ್ಷೇತ್ರದ  ಉಸ್ತುವಾರಿಗಳಾದ ಸನ್ಮಾನ್ಯ ಶ್ರೀ ವಿಜಯಸಿಂಗ್ ಧರ್ಮಸಿಂಗ್ ಅವರ ನೇತ್ತೃತ್ವದಲ್ಲಿ ಹಾಗೂ ಸಿಂದಗಿ ಬ್ಲಾಕ್ ಕಾಂಗ್ರೆಸ ಸಮಿತಿ ಅಧ್ಯಕ್ಷರಾದ ವಿಠ್ಠಲ ಜಿ ಕೋಳ್ಳೂರ ಅವರ   ಆಲಮೇಲ ಬ್ಲಾಕ್ ಕಾಂಗ್ರೆಸ ಅದ್ಯಕ್ಷರಾದ ಅಯೂಬ ದೇವರಮನಿಯವರ  ಜಂಟಿ ಅದ್ಯಕ್ಷತೆಯಲ್ಲಿ  ಪೂರ್ವಬಾವಿ ಸಭೆಯನ್ನು ಸಿಂದಗಿ ಕಾಂಗ್ರೆಸ ಪಕ್ಷದ ಕಾರ್ಯಲಯದಲ್ಲಿ ದಿನಾಂಕ 09-09-2022 ರಂದು ಮದ್ಯಾಹ್ನ 3 ಗಂಟೆಗೆ ಹಮ್ಮಿಕೊಳ್ಳಲಾಗಿದೆ .

ಸಿಂದಗಿ ಹಾಗೂ ಆಲಮೇಲ ಬ್ಲಾಕ್ ಕಾಂಗ್ರೇಸ್ ನ ಪ್ರಮುಖ ನಾಯಕರಾದ ಮಾಜಿ ಶಾಸಕರಾದ ಶರಣಪ್ಪ ಸುಣಗಾರ 2018 ರ ಅಭ್ಯರ್ಥಿಯಾದ ಮಲ್ಲಣ್ಣ ಸಾಲಿ ಹಾಗು 2021 ಉಪಚುನಾವಣೆಯ ಅಭ್ಯರ್ಥಿಯಾದ ಅಶೋಕ ಮನಗುಳಿ ಹಾಗು ಮಾಜಿ /ಹಾಲಿ ಚುನಾಯತ ಪ್ರತಿನಿದಿಗಳು  ಪಕ್ಷದ ಎಲ್ಲಾ ಪದಾಧಿಕಾರಿಗಳು ಮುಖಂಡರು ಹಾಗು ಎಲ್ಲಾ ಕಾರ್ಯಕತರು ಸಭೆಗೆ ಭಾಗವಹಿಸಬೇಕಂದು ಪತ್ರಿಕಾ ಪ್ರಕಟಣೆ ಮೂಲಕ ಸಿಂದಗಿ ಬ್ಲಾಕ್ ಕಾಂಗ್ರೆಸ ಸಮಿತಿ ಅಧ್ಯಕ್ಷರಾದ ಶ್ರೀ ವಿಠ್ಠಲ ಜಿ ಕೋಳ್ಳೂರ ಅವರು ಸಭೆಗೆ ಆಹ್ವಾನಿಸಿದ್ದಾರೆ.


Comments

Leave a Reply

Your email address will not be published. Required fields are marked *