ದೇಶ ವಿದೇಶಗಳಿಂದ ಪೂಜ್ಯ ಭಂತೆಜಿಗಳ ಆಗಮನ ನಾಳೆ ದಮ್ಮ ಪೂಜಾ ಮಹೋತ್ಸವ

ಇಂದು ಬೋಧಿವೃಕ್ಷಾ ಪೂಜೆ. ನಾಳೆ ಚಿವರ ಹೋತ್ತು ನಗರದ ಪ್ರಮುಖ ರಸ್ತೆಗಳಲ್ಲಿ ಮರವಣಿಗೆ ಪ್ರತಿವರ್ಷದಂತೆ ಸಾಗುವುದೆಂದು ಪೂಜ್ಯ ಭಂತೆ ಸಂಘಪಾಲ ಹೇಳಿದರು.

ಸಿಂದಗಿ : ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿ ಕುರಿತು ಮಾತನಾಡಿದ ಅವರು ದೇಶ ವಿದೇಶಗಳಿಂದ ಬೌದ್ಧಗುರು (ಪೂಜ್ಯ ಭಂತೇಜಿಗಳು) ಆಗಮಿಸುವರು ಅವರಿಗೆ ಸಿಂದಗಿ ಉಪಾಸಕ ಉಪಾಸಕಿಯರಿಂದ ಅಷ್ಠ ಪರಿಷ್ಕಾರ ದರ್ಶನ ಮೆರವಣಿಗೆ ಹಾಗೂ ಸಂಜೆ 5 ರಿಂದ 7 ಗಂಟೆ 30 ನಿಮಿಷದ ವರೆಗೆ ಧಮ್ಮ ಪ್ರವಚನ ತದ ನಂತರ ಬಿಕ್ಕು ಸಂಘಕ್ಕೆ ಅಷ್ಟ ಪರಿಷ್ಕಾರಗಳ ದಾನ ಕರ‍್ಯಕ್ರಮ ಜರುಗುವುದು ತಪ್ಪದೆ ಸಿಂದಗಿ ಜನತೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತಿಳಿಸಿದರು.

ನಂತರ ಮಾತನಾಡಿದ ಉಪಾಸಕ ರಾಜಶೇಖರ ಕೂಚಬಾಳ ಭೌದ್ಧ ಧಮ್ಮ ಭಾರತದ ಮೂಲ ಧರ್ಮವಾಗಿದ್ದು ಭಾರತದ ಭೌದ್ಧ ಧಮ್ಮವನ್ನು ಜಗತ್ತಿನ ವಿವಿಧ ದೇಶಗಳು ಜೀವನದಲ್ಲಿ ರೂಡಿಸಿಕೊಂಡಿರುವುದು ಭಾರತಕ್ಕೆ ಗೌರವ ತರುವಂತದ್ದು ಎಂದರು. ರಾಜಶೇಖರ ಮಣ್ಣೂರ, ಪರಶುರಾಮ ಕೂಚಬಾಳ ಇದ್ದರು.


Comments

Leave a Reply

Your email address will not be published. Required fields are marked *