ಗುರುವಿಗೆ ಬ್ರಹ್ಮ, ವಿಷ್ಣು, ಮಹೇಶ್ವರ ಮತ್ತು ಪರ ಬ್ರಹ್ಮನನ್ನು ಹೋಲಿಸಿದ್ದಾರೆ.
ಈ ಮೂರು ಶಕ್ತಿಗಳಿಗೆ ಗುರು ಎಂದಿಲ್ಲ ಸೃಷ್ಠಿ ಮತ್ತು ಲಯಗಳನ್ನು ನಿಗ್ರಹಿಸುವ ಶಕ್ತಿ ಗುರುವಿನಲ್ಲಿದೆ ಎಂದು ಪ್ರೋ.ಸಿದ್ದಣ್ಣ ಲಂಗೋಟಿ ಹೇಳಿದರು.
ಸಿಂದಗಿ : ಶಿಕ್ಷಕರ ದಿನೋತ್ಸವದ ಅಂಗವಾಗಿ ಗುಂದದಗಿ ಪಂಕ್ಷನ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದ ಉಪನ್ಯಾಸ ಮಾಡಿದ ಅವರು ಗುರುಗಳ ಅನುಗ್ರಹದಿಂದ ವಿಜ್ಞಾನದ ವಿಧ್ಯಾರ್ಥಿಯಾದ ನಾನು ತತ್ವ ಜ್ಞಾನದ ಉಪನ್ಯಾಸ ನೀಡುತ್ತಾ ಪ್ರಪಂಚವನ್ನು ಎರಡು ಬಾರಿ ಸುತ್ತಿದ್ದು ಪೂಜ್ಯ ಶ್ರೀ ಸಿದ್ದೇಶ್ವರ ಶ್ರೀಗಳ ಶ್ರೀರಕ್ಷೆಯ ಆಶೀರ್ವಾದ.
ಶಿಕ್ಷಕನೆಂಬುದು ಅರಿವಿನ ಪ್ರತೀಕ, ವಿಶ್ವದ ಪರಮ ಚೈತನ್ಯವಿರುವುದು ಗುರುವಿನಲ್ಲಿ ಮಾತ್ರ. ಮನುಷ್ಯನಿಗೆ ಹೊಟ್ಟೆಯ ಹಸಿವು ನಿಗಿಸುವುದು ಸುಲಭ ಆದರೆ ನೆತ್ತಿಯ ಹಸಿವು ನಿಗಿಸುವುದು ಸುಲಭ ಸಾಧ್ಯವಿಲ್ಲ. ವಿದೇಶಕ್ಕೆ ತರಳಿದ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಅದ್ಬುತ ಕಟ್ಟಡಗಳು ಕಟ್ಟಿ ಅಲ್ಲಿ ಉತ್ತಮ ಶಿಕ್ಷಕರಿಲ್ಲದಿದ್ದರೆ ಆ ಶಾಲೆಯ ಕಟ್ಟಡ ನಿರ್ಜಿವ ವಸ್ತುವಿದ್ದಂತೆ ಎಂದು ಅವರ ನುಡಿ ನೆನಪಿಸಿದರು.
ಪ್ರಪಂಚದ ಎಲ್ಲ ತತ್ವಜ್ಞಾನವನ್ನು ಒಟ್ಟುಗೂಡಿಸಿ ಕಾಯಿಸಿದರು ಅದು ಭಾರತದ ತತ್ವಜ್ಞಾನಕ್ಕೆ ಸಮನಾಗುವುದಿಲ್ಲ. ಭಾರತದ ತತ್ವಜ್ಞಾನವನ್ನು ಸರ್ವಪಲ್ಲಿ ರಾಧಾಕೃಷ್ಣನ್ ಅವರು ಪ್ರಪಂಚಕ್ಕೆ ಪರಿಚಯಿಸಿದರು. 6000 ಜಾತಿಗಳು 500 ಭಾಷೆಗಳು ಮಾತನಾಡುವ 14 ಧರ್ಮಗಳ ಪುಟ್ಟ ವಿಶ್ವ ಭಾರತ ಎಂದು ಹೇಳಿದರು.
ನಂತರ ಅಧ್ಯಕ್ಷಿಯ ನುಡಿಗಳನ್ನಾಡಿದ ಶಾಸಕ ಅಶೋಕ ಮನಗೂಳಿ ಪ್ರಾಥಮಿಕ ಶಿಕ್ಷಣ ಜೀವನದ ವ್ಯಕ್ತಿತ್ವ ರೂಪಿಸುವ ಬುನಾದಿಯಾಗಿದೆ. ಜೀವನವನ್ನು ರೂಪಿಸಿದ ಗುರುಗಳನ್ನು ನೆನೆಯುವುದು, ಗೌರವಿಸುವುದು ಪ್ರತಿಯೊಬ್ಬನ ಆಧ್ಯ ಕರ್ತವ್ಯ. ಶಿಕ್ಷಣ ಮತ್ತು ಆರೋಗ್ಯ ಸುಧಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು. ತಾಲೂಕಾ ದಂಡಾಧೀಕಾರಿ ಪ್ರದೀಪಕುಮಾರ ಹಿರೇಮಠ ಮಾತನಾಡಿದರು ಪ್ರಾಸ್ತಾವಿಕವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಆರೀಪ್ ಎಚ್.ಬಿರಾದಾರ ಮಾತನಾಡಿದರು.
ಜಿ.ಎಸ್.ಬೆವನೂರ, ಅಶೋಕ ತೆಲ್ಲೂರ, ಆನಂದ ಭೂಸನೂರ, ಎ.ಎಚ್.ವಾಲೀಕಾರ, ಎಸ್.ಎನ್.ಯಾಳವಾರ, ಎಸ್.ಎಸ್.ಕತ್ನಳ್ಳಿ, ಆಯ್.ಎಸ್.ಟಕ್ಕೆ, ಆರ್.ಆರ್ ರಾಠೋಡ, ಆಯ್.ಎಪ್.ಭಾಲ್ಕಿ ವೇದಿಕೆ ಮೇಲಿದ್ದರು. ಶೀಕ್ಷಕ ಸಮೂಹ ಉಪಸ್ಥಿತರಿದ್ದರು.
ಸಮಯಪ್ರಜ್ಞೆ ಅತಿ ಮುಖ್ಯವಾದದ್ದು ಗುರುವೃಂದವನ್ನು ಶಿಸ್ತಿನಿಂದ ನೋಡುತ್ತಾರೆ ಮುಂದಿನ ದಿನಮಾನಗಳಲ್ಲಿ ನಿಗದಿ ಮಾಡಿದ ಸಮಯಕ್ಕೆ ಕಾರ್ಯಕ್ರಮ ಜರುಗಿಸಿ ಮಾದರಿಯಾಗಲಿ -ಪ್ರೋ.ಸಿದ್ದಣ್ಣ ಲಂಗೋಟಿ
Leave a Reply