ಚೀನಾದ ದುರಹಂಕಾರಗಳನ್ನು ತಡೆಯುವ ಶಕ್ತಿ ಯಾರಿಗಾದರು ಇದ್ದರೆ ನರೇಂದ್ರ ಮೋದಿ ಅವರ ಭಾರತಕ್ಕೆ ಮಾತ್ರ ಎಂದು ವಿಶ್ವವೇ ಮಾತಾಡುತ್ತಿದೆ.
ಸಿಂದಗಿ : ರಾಜರಾಜೇಶ್ವರಿ ಮಂಗಲ ಕಾರ್ಯಾಲಯದಲ್ಲಿ ನಡೆದ ಭಾರತೀಯ ಜನತಾ ಪಾರ್ಟಿಯ ಬಿಜೆಪಿ ಮೋರ್ಚಾಗಳ ಸಂಯುಕ್ತ ಸಮಾವೇಶ ಕುರಿತು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ರಷ್ಯಾ ದಾಳಿಯಲ್ಲಿ ಭಾರತದ ತಿರಂಗ ಧ್ವಜ ಹಿಡಿದು ಬರುವಾಗ ಅಲ್ಲಿನ ಯುದ್ದವನ್ನೇ ನಿಲ್ಲಿಸಿದರಲ್ಲಾ ಇಂದು ಭಾರತ ಗಟ್ಟಿಯಾಗಿ ನಿಲ್ಲುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಮುಂದಿನ ಬಾರಿ ರಾಷ್ಟ್ರಕ್ಕಾಗಿ ನಾವೆಲ್ಲರು ಎದ್ದು ನಿಲ್ಲಬೇಕಾಗಿದೆ. ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು. ಸುಪ್ರೀಂ ಕೋರ್ಟ್ ತ್ರಿವಳಿ ತಲಾಕ್ ಕುರಿತು ನೀಡಿದ ಆದೇಶಕ್ಕೆ ತಿದ್ದುಪಡಿ ತಂದು ತ್ರಿವಳಿ ತಲಾಕ್ ಸರಿ ಎಂದು ಅಂದಿನ ಪ್ರಧಾನಿ ರಾಜೀವ್ ಗಾಂಧಿ ಕಾಯ್ದೆಗೆ ತಿದ್ದುಪಡಿ ಮಾಡಿದರು ಇದು ಕಾಂಗ್ರೆಸ್ ನೀತಿಯಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅನುದಾನವನ್ನು ಗ್ಯಾರಂಟಿ ಯೋಜನೆಗೆ ಉಪಯೋಗಿಸಲು 11000 ಕೋಟಿ ಹಣ ಬಳಕೆಗೆ ಮುಂದಾಗಿ ದಲಿತರಿಗೆ ವಂಚನೆ ಮಾಡಿದ್ದಾರೆ.
ಒಬ್ಬನೇ ಒಬ್ಬ ಶಾಸಕನಿಗೆ ನೀಡಬೇಕಾದ ಎರಡು ಕೋಟಿ ಅನುದಾನ ಸಹಿತ ನೀಡಿಲ್ಲ, ಯುವನಿಧಿ ನೀಡುವ ಭರವಸೆ ನೀಡಿದರು ಇಂದು 2022-23ರಲ್ಲಿ ಪಾಸಾದ ವರಿಗೆ ಮಾತ್ರ ಎನ್ನುತ್ತಿದ್ದಾರೆ. ಅಧಿಕಾರಿಗಳ ವರ್ಗಾವಣೆ ದಂಧೆಯಾಗಿದೆ. ನಮ್ಮಗೆ ಸುಳ್ಳು ಹೇಳಿ ಸರ್ಕಾರ ತರುವುದು ಗೊತ್ತಿಲ್ಲ ಎಂದು ಕಾಂಗ್ರೆಸ್ ಸರ್ಕಾರವನ್ನು ತೀವಿದರು.
ಅಖಂಡ ಶ್ರೀನಿವಾಸ ಪೂಜಾರಿ ಅವರು ಕಾಂಗ್ರೆಸ್ ಪಕ್ಷದ ಶಾಸಕ ಅವರು ಮನೆಗೆ ಬೆಂಕಿ ಇಟ್ಟವರನ್ನು ಬಿಡುಗಡೆ ಮಾಡಿ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ. ಕಾಂಗ್ರೆಸ್ ಎಲ್ಲಿಗೆ ಬಂದು ನಿಂತಿದೆ.
ಬರುವಂತಾ ಚುನಾವಣೆ ಭಾರತದ ಭವಿಷ್ಯ ರೂಪಿಸುವ ಚುನಾವಣೆ, ಕುಟುಂಬದಂತೆ, ಸಮಾಜದಂತೆ, ಸಹೋದರತ್ವದಿಂದ ಲೋಕಸಭೆ ಚುನಾವಣೆಯಲ್ಲಿ ಬೆಂಬಲಿಸಿ ಎಂದು ವಿನಂತಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಮೂರನೇ ಅವಧಿಗೆ ಚುನಾವಣೆ ಎದುರಿಸಬೇಕಾಗಿದೆ. ನರೇಂದ್ರ ಮೋದಿ ಅವರ ಒಂಬತ್ತು ವರ್ಷದ ಅವಧಿಯಲ್ಲಿ ಬಿಜೆಪಿ ನಡೆಸಿರುವ ಸಾಧನೆಗಳನ್ನು ಪ್ರತಿ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಮೋರ್ಚಾಗಳ ಸಂಯುಕ್ತ ಸಮಾವೇಶ ಇಂದು ಮಾಡಲಾಗುತ್ತಿದೆ.
ಹೊಸತನವನ್ನು, ಮುಂದಿನ ದೂರದೃಷ್ಟಿಯನ್ನು ಇಟ್ಟುಕೊಂಡು ಸರ್ಕಾರ ನಡೆಸುವುದು ಭಾರತೀಯ ಜನತಾ ಪಾರ್ಟಿಯಿಂದ ಮಾತ್ರ ಸಾದ್ಯ. ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತದ ಕುರಿತು ಜನರಿಗೆ ಮನವರಿಕೆ ಮಾಡಿ ಕೊಡಲು ವಿಫಲರಾದ ಕಾರಣ ಹತ್ತು ವರ್ಷಗಳ ಕಾಲ ಯು.ಪಿ.ಎ ಸರ್ಕಾರ ಆಡಳಿತ ನಡೆಸಿತ್ತು. ಇ ಬಾರಿ ಹಿಂದಿನಂತೆ ಆಗಲು ನಾವು ಬಿಡಬಾರದು ಸುಭದ್ರ ಭಾರತದ ಕನಸು ಭಾರತವನ್ನು ವಿಶ್ವ ಭಾರತವನ್ನಾಗಿ ಮಾಡಲು ಮತ್ತೆ ನಾವು ಶ್ರಮ ವಹಿಸಬೇಕು ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.
ಭೀಮರಾಯ ಹೂಗಾರ ಅವರ ರಚಿತ ರಾಜಕಾರಣಿ ಹೇಗಿರಬೇಕು ಲಕ್ಷ ನುಡಿಮುತ್ತುಗಳು ಪುಸ್ತಕ ಅನಾವರಣ ಮಾಡಿದರು.
ಬಿಜೆಪಿ ವಿಧಾನಸಭೆಯಲ್ಲಿ ಸೋತಿರಬಹುದು ಆದರೆ ಸತ್ತಿಲ್ಲ ಲೋಕಸಭೆ ಚುನಾವಣೆಯಲ್ಲಿ ತಕ್ಕ ಉತ್ತರ ಕೋಡುತ್ತೆವೆ. ಇಂದು ಲೋಕಸಭೆ ಚುನಾವಣೆಯ ನಿಮಿತ್ತವಾಗಿ ಗ್ಯಾರಂಟಿ ಯೋಜನೆಗಳು ಚಾಲ್ತಿಯಲ್ಲಿವೆ. ಹಣಕಾಸು ಇಲಾಖೆ ಒಂದು ವರ್ಷ ಹಣ ನೀಡಬಹುದೆಂದು ತಿಳಿಸಿದ್ದಾರೆ. ಇಂದಿನ ಶಾಸಕರು ಗ್ರಾಮ ಪಂಚಾಯತ NREGಯ ಕಾಮಗಾರಿಗಳು ಭೂಮಿ ಪೂಜೆ ಮಾಡುವಂತಾಗಿದೆ. ಈ ಸರ್ಕಾರದಲ್ಲಿ ಬಜೆಟ್ ಕೊರತೆ ಇದೆ. ಆದರಿಂದ ಕಾಂಗ್ರೆಸ್ ಸರ್ಕಾರದಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು. ದೇ.ಹೀಪ್ಪರಗಿ ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಮಾತನಾಡಿದರು.
ಕಾಸುಗೌಡ ಬಿರಾದಾರ, ವಿವೇಕಾನಂದ ಡಬ್ಬಿ, ಶಿವರುದ್ರ ಬಾಗಲಕೋಟ, ಈರಣ್ಣ ರಾವೂರ, ಚಿದಾನಂದ ಛಲವಾದಿ, ಸಂಜೀವ ಐಹೊಳೆ, ಮಲ್ಲಿಕಾರ್ಜುನ ಜೋಗುರ, ಪ್ರಕಾಶ ಅಕ್ಕಲಕೋಟ, ಗೋಪಾಲ ಘಟಕಾಂಬಳೆ, ಶಿಲ್ಪಾ ಕುದರಗೊಂಡ, ರಾಜಕುಮಾರ ಸಗಾಯಿ, ಇದ್ದರು ಬಸವರಾಜ ಹೂಗಾರ ಕಾರ್ಯಕ್ರಮ ನಿರೂಪಿಸಿದರು.
Leave a Reply