![](https://vegadhut.com/wp-content/uploads/2023/07/IMG-20230731-WA0019-1024x394.jpg)
ತಾಲೂಕಿನ ಅಂತರಗಂಗಿ ಗ್ರಾಮದ ರೈತ ಸಂಜಯಕುಮಾರ ಭವಾನೆಪ್ಪ ಮಾಶ್ಯಾಳ (34) ಮೂಲತಃ ಒಕ್ಕಲುತನ ವೃತ್ತಿ ಯಾಗಿದ್ದು ಉತ್ತಮ ಬೆಳೆ ನೀರಿಕ್ಷೆಯಲ್ಲಿದ್ದ ಆತನಿಗೆ ತಕ್ಕ ಮಟ್ಟಿಗೆ ಬೆಳೆ ಬರದ ಕಾರಣ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸಿಂದಗಿ : 3 ಎಕರೆ 12 ಗುಂಟೆ ಯಲ್ಲಿ ರೈತಾಪಿ ಜೀವನ ನಡೆಸುತ್ತಿದ್ದ ಸಂಜಯಕುಮಾರ ಮಾಡಬಾಳದ ಪಿ.ಕೆ.ಪಿ.ಎಸ್ ಬ್ಯಾಂಕನಲ್ಲಿ ಎರಡು ಲಕ್ಷ ರೂ ಹಾಗೂ 2021ರಲ್ಲಿ ಮೂರು ಲಕ್ಷ ಐವತ್ತು ಸಾವಿರ ರೂ ಗಳ ಸಾಲ ಮಾಡಿ ಸುಮಾರು ನಾಲ್ಕು ಬೋರವೇಲ್ ಕೋರಿಸಿದ್ದರು. ಆದರೆ ಒಂದರಲ್ಲಿಯು ನೀರು ಬಿಳದ ಕಾರಣ ತಕ್ಕ ಮಟ್ಟಿಗೆ ಬೆಳೆ ಕೈ ಹೀಡಿಯಲಿಲ್ಲ ಆದರಿಂದ ಮನನೊಂದು ತೋಟದ ಮನೆಯ ಪಡಸಾಲೆಯಲ್ಲಿ ಕ್ರೀಮಿನಾಶಕ ಸವಿಸಿ ಆತ್ಮಹತ್ಯೆಗೆ ಮುಂದಾಗಿದ್ದಾನೆ. ಮುಂಜಾನೆ 8 ಗಂಟೆಯಿಂದ ಸಾಯಂಕಾಲ 4 ಗಂಟೆಯ ವರೆಗಿನ ಸಮಯದಲ್ಲಿ ಘಟನೆ ನಡೆದಿರಬಹುದೆಂದು ಹೇಳಲಾಗಿದೆ. ಸಿಂದಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![](https://vegadhut.com/wp-content/uploads/2023/07/IMG-20230730-WA0034-1024x640.jpg)
![](https://vegadhut.com/wp-content/uploads/2023/07/IMG-20230730-WA0035-1024x640.jpg)
Leave a Reply