ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರ ನೇತೃತ್ವದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂರಿಶಿಷ್ಟ ಪಂಗಡದ ಪರಿಷತ್ತ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ತೆಗೆದುಕೊಂಡ ನಿರ್ಧಾರದ ಕುರಿತು ಮಾಜಿ ಸಚಿವ ಎನ್.ಮಹೇಶ್ ಸರಕಾರದ ವಿರುದ್ಧ ಅಸಮಾದಾನ ಹೊರಹಾಕಿದ್ದಾರೆ.
ಕೊಳ್ಳೇಗಾಲ : 2023-24 ನೇ ಸಾಲಿನಲ್ಲಿ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಒಟ್ಟು ಅನುದಾನ 34221 ಕೋಟಿ ಅನುದಾನ ಹಾಗೂ ಕಳೆದ ಸಾಲಿನ 72 ಕೋಟಿ ಹಣ ಸೇರಿದರೆ ಒಟ್ಟು 34293 ಕೋಟಿ ಹಣ ಬಜಟ್ ನಲ್ಲಿ ಘೋಷಿಸಿದ್ದಾರೆ. ಸಮಾಜ ಕಲ್ಯಾಣ ಸಚಿವರು ಇಂದು ಹೇಳುತ್ತಿರುವ ಪ್ರಕಾರ 11130 ಕೋಟಿ ಹಣವನ್ನು ಕಾಂಗ್ರೇಸ್ ಘೋಷಣೆ ಮಾಡಿರುವ ಐದು ಗ್ಯಾರಂಟಿ ಯೋಜನೆಗಳಿಗೆ ನಿಗದಿ ಪಡಿಸಿದ್ದಾರೆ. ಈ ಐದು ಗ್ಯಾರಂಟಿ ಯೋಜನೆಗಳು ಇಡೀ ರಾಜ್ಯದ ಬಡ ಕುಟುಂಬಗಳಿಗೆ ನಿಗದಿ ಪಡಿಸಿರುವ ಯೋಜನೆಗಳು. ಇದು ಕೇವಲ ಎಸ್.ಸಿ.ಎಸ್.ಟಿ ಗಳಿಗೆ ಮಾತ್ರ ಘೋಷಣೆ ಮಾಡಿರುವ ಯೋಜನೆ ಅಲ್ಲ.
ಪರಿಶಿಷ್ಟ ಜಾತಿ ಮತ್ತು ಪ.ಪಂಗಡದ ಅನುದಾನ ದುರ್ಬಳಕೆ ಯಾಗುತ್ತಿದೆ ಎಂದು ನಾವೆಲ್ಲ ಹೋರಾಟ ಮಾಡಿದರ ಪರಿಣಾಮ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಕಾಯ್ದೆ ಅಡಿಯಲ್ಲಿರುವ 7ಡಿ ಸೇಕ್ಷನ್ ರದ್ದು ಮಾಡಿದರು. ಒಂದ ಡೆ ರದ್ದು ಮಾಡಿ ಇನ್ನೊಂದಡೆ 11000 ಕೋಟಿ ನಿಗದಿ ಪಡಿಸಿರುವುದು ಯಾವ ನ್ಯಾಯ? ಇದನ್ನು ನೋಡಿದರೆ ದಲಿತರಿಗೆ ನೀಡಬೇಕಾದ ಅನುದಾನದ ದುರುಪಯೋಗ. ಗ್ಯಾರಂಟಿ ಯೋಜನೆಗಳಿಗೆ ಎಸ್.ಸಿ.ಮತ್ತು ಎಸ್.ಟಿ ಪಲಾನುಭವಿಗಳು ಎಷ್ಟು ಜನ ಎಂದು ಗುರುತ್ತಿಸಿದ್ದೀರಾ? ಗುರುತಿಸಿಲ್ಲ. ಹಾಗಾದರೇ 11000 ಕೋಟಿ ಹೇಗೆ ನಿಗದಿ ಪಡಿಸಿದ್ದೀರಿ ? ಇವೇಲವು ಹಲವು ಅನುಮಾನಗಳು ಹುಟ್ಟು ಹಾಕುತ್ತಿವೆ.
ನೀವು 7ಡಿ ಕಾಯ್ದೆ ರದ್ದು ಪಡಿಸಿರುವುದರಿಂದ ಹಣ ವರ್ಗಾವಣೆ ಮಾಡಲು ಬರುವುದ್ದಿಲ. ನೀವು ಮಿಸಲಿಟ್ಟಿರುವ 11000 ಕೋಟಿ ಹಣ ದಲಿತರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಸಿ. ಯೋಜನೆಗಳಿಗೆ ಬೇಕಾದರೆ ನೀವು ಸಾಮಾನ್ಯ ಅನುದಾನಗಳಿಂದ ಬಳಸಿ ನಿಮ್ಮಗೆ ಬೇಕಾದರೆ ನೀರಾವರಿ ನಗರೋತ್ಥಾನಕ್ಕೆ ನೀಡಿದ ಅನುದಾನ ಕಟ್ಟಮಾಡಿ ನಿಮ್ಮಗೆ ಬೇರೆ ಯಾವುದು ಆದ್ಯತೆಗಳಿಲ್ಲ, ನಿಮ್ಮಗೆ ಕೇವಲ ಐದು ಗ್ಯಾರಂಟಿಗಳು ಮಾತ್ರ ಮುಖ್ಯ ಯೋಜನೆಗಳಿಗೆ ನೀಡಿದ ಹಣ ತೆಗೆದುಹಾಕಿ ಐದು ವರ್ಷಗಳ ಕಾಲ ಕೆಲಸ ನಿಂತುಹೋಗಲಿ ಗ್ಯಾರಂಟಿಗಳಿಗೆ ಬೇಕಾದರೆ ಸಾಮಾನ್ಯ ಬಜಟ್ ನಲ್ಲಿ ನೀಡಿ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಅನುದಾನದಲ್ಲಿ ನೀಡುತ್ತಿರುವುದು ದಲಿತರಿಗೆ ಮಾಡುತ್ತಿರುವ ನೇರವಾದ ಮೋಸ ಎಂದು ಮಾಜಿ ಶಾಸಕ ಎನ್.ಮಹೇಶ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Leave a Reply