ಪಟ್ಟಣದ ಸರಕಾರಿ ಪದವಿ-ಪೂರ್ವ ಕಾಲೇಜಿನ ಸಭಾಭವದಲ್ಲಿ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಸಮಾರಂಭವನ್ನು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಉದ್ಘಾಟಿಸಿ ಮಾತನಾಡಿದರು.
![](https://vegadhut.com/wp-content/uploads/2023/07/IMG-20230730-WA0035-1024x640.jpg)
ಸಿಂದಗಿ: ಸುದ್ದಿ ಮನೆಯಲ್ಲಿ ಕೆಲಸ ಮಾಡುವವರು ಮಾತ್ರ ಪತ್ರಕರ್ತರಲ್ಲ. ಇಂದಿನ ಮೊಬೈಲ್ ಯುಗದಲ್ಲಿ ಎಲ್ಲರೂ ಪತ್ರಕರ್ತರಾಗಿದ್ದಾರೆ ಎಂದು ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಸರಕಾರಿ ಪಪೂ ಕಾಲೇಜಿನ ಸಭಾಭವನದಲ್ಲಿ ಸೋಮವಾರದಂದು ಸಿಂದಗಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಸರಕಾರಿ ಪಪೂ ಕಾಲೇಜಿನ ಸಹಯೋಗದಲ್ಲಿ ಹಮ್ಮಿಕೊಂಡ ಪ್ರತ್ರಿಕಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಧ್ಯಾರ್ಥಿಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ನನಗೆ ಸಂತಸದ ಸಂಗತಿ. ಶಿಕ್ಷಣ ಪಡೆದುಕೊಳ್ಳಲು ಬರುವ ಪ್ರತಿಯೊಬ್ಬ ವಿದ್ಯಾರ್ಥಿಗಳು ಹಲವಾರು ಕನಸುಗಳನ್ನು ಇಟ್ಟುಕೊಂಡು ಬರುತ್ತಾರೆ. ಜೊತೆಗೆ ನಿಮ್ಮ ತಂದೆ-ತಾಯಿಗಳು ನೂರಾರು ಕನಸುಗಳನ್ನು ಹೊತ್ತುಕೊಂಡು ನಿಮಗೆ ಶಿಕ್ಷಣ ನೀಡುತ್ತಾರೆ. ಅದನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಗುರಿಯನ್ನು ಸಾಧಿಸಲು ಶ್ರದ್ಧಾಭಾವದಿಂದ ಓದಬೇಕು.
![](https://vegadhut.com/wp-content/uploads/2023/07/IMG-20230731-WA0019-1024x394.jpg)
ಮೊಬೈಲ್ ನಮ್ಮ ಜೀವನದಲ್ಲಿ ಸಾಧಕವು ಹೌದು, ಬಾಧಕವೂ ಹೌದು, ಮೊಬೈಲ್ ಗೀಳಿಗೆ ಬೀಳದಿರಿ ತಂತ್ರಜ್ಞಾನದಿಂದ ಒಳ್ಳೆಯ ಅಂಶಗಳನ್ನು ಮಾತ್ರ ತೆಗೆದುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಇದೇ ವೇಳೆ ಸಂಪನ್ಮೂಲ ವ್ಯಕ್ತಿ ರಂಗನಾಥ ಥೋರ್ಪೆ ಉಪನ್ಯಾಸ ನೀಡಿ ಮಾತನಾಡಿದ ಅವರು, ಮಾಧ್ಯಮಗಳು ಸಮಾಜದಲ್ಲಿನ ಸಿಹಿ-ಕಹಿ ಘಟನೆಗಳನ್ನು ನಮಗೆ ತಲುಪಿಸುತ್ತವೆ. ವೈಜ್ಞಾನಿಕ ಚಿಂತನೆಯಿಂದ ವ್ಯಕ್ತಿಯ ಬೆಳವಣಿಗೆಗೆ ಮಾಧ್ಯಮಗಳು ಪೂರಕವಾಗಿದೆ. ಪತ್ರಕರ್ತರಿಗೆ ಸಮಾಜದಲ್ಲಿ ಮಹತ್ವದ ಸ್ಥಾನವಿದ್ದು, ಅವರಿಗೆ ಹೊಣೆಗಾರಿಕೆಯೂ ದೊಡ್ಡದಿದೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಘಟಕದ ಪತ್ರಿಕಾ ದಿನಾಚರಣೆಯಲ್ಲಿ ಹಿರಿಯ ಪತ್ರಕರ್ತರಾಗಿ ಸೇವೆ ಸಲ್ಲಿಸಿದ ಹಿನ್ನಲೆಯಲ್ಲಿ ಸನ್ಮಾನಿತರಾದ ವರದಿಗಾರ ರವಿಚಂದ್ರ ಮಲ್ಲೇದ, ರಮೇಶ ಪೂಜಾರ ಅವರಿಗೆ ಗೌರವ ಸನ್ಮಾನ ಮಾಡಲಾಯಿತು. ಮತ್ತು ತಾಲೂಕು ಘಟಕಕ್ಕೆ ಸಹ ಪದಾಧಿಕಾರಿಗಳಾಗಿ ಆಯ್ಕೆಯಾದ ಮಹಾಂತೇಶ ನೂಲಾನವರ ಹಾಗೂ ಭೋಜರಾಜ ದೇಸಾಯಿ ಅವರನ್ನು ಸನ್ಮಾನಿಸಲಾಯಿತು .
ಈ ವೇಳೆ ತಾಲೂಕು ಅಧ್ಯಕ್ಷ ಆನಂದ ಶಾಬಾದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಮ ಪೂಜ್ಯ ಶ್ರೀ ನಾಗರತ್ನ ರಾಜಯೋಗಿ ವೀರರಾಜೇಂದ್ರ ಸ್ವಾಮಿಗಳು ಆಶೀರ್ವಚನ ನೀಡಿದರು. ಕಾನಿಪ ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಕೆಂಬಾವಿ, ಪ್ರಾಚಾರ್ಯ ಎನ್.ಆರ್ ಗಂಗನಹಳ್ಳಿ ವೇದಿಕೆ ಮೇಲಿದ್ದರು.
![](https://vegadhut.com/wp-content/uploads/2023/07/IMG-20230730-WA0034-1024x640.jpg)
ಕಾರ್ಯಕ್ರಮದಲ್ಲಿ ಅಶೋಕ ಅಲ್ಲಾಪುರ, ಪ್ರಕಾಶ ಚೌಧರಿ, ರಾಜು ನರಗೋದಿ, ಶ್ರೀಹರಿ ಕುಲಕರ್ಣಿ, ಪತ್ರಕರ್ತರಾದ ರವಿಚಂದ್ರ ಮಲ್ಲೇದ, ಮಲ್ಲಿಕಾರ್ಜುನ ಅಲ್ಲಾಪೂರ, ಭೀಮು ಕೆಂಭಾವಿ, ಶಾಂತವೀರ ಹಿರೇಮಠ, ಗುರುರಾಜ ಮಠ, ನಾಗೇಶ ತಳವಾರ, ಸಿದ್ದು ಮಲ್ಲೇದ, ಗುಂಡು ಕುಲಕರ್ಣಿ, ಇಸ್ಮಾಯಿಲ್ ಶೇಖ್, ಸಾಹಿತಿಗಳಾದ ಡಾ.ಎಂ.ಎಂ ಪಡಶೆಟ್ಟಿ, ಡಾ.ಚನ್ನಪ್ಪ ಕಟ್ಟಿ, ಉಪನ್ಯಾಸಕರಾದ, ಜಿ.ಎಸ್.ಮೋರಟಗಿ, ಎಮ್.ಎಮ್.ಯಾಳಗಿ, ಎಸ್.ಎಸ್.ಅವಟಿ, ಎಸ್.ಎಸ್.ಸುರಪುರ, ಜೆ.ಎಮ್.ಗಾಣಗೇರ, ಎಮ್.ಎನ್.ಬಿರಾದಾರ ಎ.ಆರ್.ರಜಪೂತ ಸೇರಿದಂತೆ ಕಾಲೇಜಿನ ಭೋದಕ ಹಾಗೂ ಭೋದಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Leave a Reply