ನಾಳೆ ಪತ್ರಿಕಾ ದಿನಾಚರಣೆ ; ಆನಂದ ಶಾಬಾದಿ

ಜಾಹಿರಾತು

ಸಿಂದಗಿ : ಜು.31ರಂದು ಬೇಳಿಗ್ಗೆ 9:40ಗಂಟೆಗೆ ಸರಕಾರಿ ಪದವಿ-ಪೂರ್ವ ಕಾಲೇಜಿನಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕ ಸಿಂದಗಿ ಹಾಗೂ ಸರಕಾರಿ ಪಪೂ ಕಾಲೇಜಿನ ಸಹಯೋಗದಲ್ಲಿ ಪತ್ರಿಕಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಆನಂದ ಶಾಬಾದಿ ತಿಳಿಸಿದ್ದಾರೆ.

         ಕಾರ್ಯಕ್ರಮದ ಸಾನಿಧ್ಯವನ್ನು ಆದಿಶೇಷ ಸಂಸ್ಥಾನ ಹಿರೇಮಠದ ಶ್ರೀಶ್ರೀಶ್ರೀ ಪ.ಪೂ. ನಾಗರತ್ನ ರಾಜಯೋಗಿ ವೀರಾಜೇಂದ್ರ ಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ. ಶಾಸಕ ಅಶೋಕ ಮನಗೂಳಿ ಉದ್ಘಾಟಿಸಲಿದ್ದಾರೆ. ಶಾಂತೂ ಹಿರೇಮಠ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಧಾರವಾಡದ ಸಂಪನ್ಮೂಲ ವ್ಯಕ್ತಿ ಉಪನ್ಯಾಸ ರಂಗನಾಥ ಥೋರ್ಪ ಉಪನ್ಯಾಸ ನೀಡಲಿದ್ದಾರೆ. ವಿಜಯಪುರ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರು ಸಂಗಮೇಶ ಚೂರಿ, ತಹಶೀಲ್ದಾರ ನಿಂಗಣ್ಣ ಬಿರಾದಾರ, ಪಿಎಸ್‌ಐ ಭೀಮಪ್ಪ ರಬಕವಿ, ಪ್ರಾಚಾರ್ಯ ಎನ್.ಆರ್. ಗಂಗನಳ್ಳಿ, ತಾಪಂ ಇಓ ಬಾಬು ರಾಠೋಡ, ಪುರಸಭೆ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ, ಮಲ್ಲಿಕಾರ್ಜುನ ಕೆಂಭಾವಿ ಭಾಗವಹಿಸಲಿದ್ದಾರೆ ಎಂದು ಅಧ್ಯಕ್ಷ ಆನಂದ ಶಾಬಾದಿ ಹಾಗೂ ಪ್ರಧಾನ ಕಾರ್ಯದರ್ಶಿ ಭೀಮು ಕೆಂಭಾವಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹಿರಾತು


Comments

Leave a Reply

Your email address will not be published. Required fields are marked *