ತಾಲೂಕಿನ ಬಬಲೇಶ್ವರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಕಟ್ಟಡ ಕಾಮಗಾರಿಗೆ ಶಾಲೆಯ ವಿದ್ಯಾರ್ಥಿಗಳು ಭೂಮಿ ಪೂಜೆ ನೆರವೇರಿಸಿದರು.
ಸಿಂದಗಿ: ಜು.10ರಂದು ಗ್ರಾಮದಲ್ಲಿ ಸನ್ಮಾನ ಸಮಾರಂಭಕ್ಕೆ ಆಗಮಿಸಿದ ಸಂದರ್ಭ ಶಾಲಾ ಕಟ್ಟಡದ ಕಾಮಗಾರಿಯ ದುರಸ್ತಿ ಬಗ್ಗೆ ಶಾಲೆಯ ವಿದ್ಯಾರ್ಥಿನಿ ಸಂಧ್ಯಾ ಹಂಗರಗಿ ಮನವಿ ಮಾಡಿಕೊಂಡ ಹಿನ್ನಲೆ ಜು.30ರಂದು ಮಕ್ಕಳ ಕೈಯಿಂದಲೇ ಭೂಮಿ ಪೂಜೆ ಮಾಡಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ತಾಲೂಕಿನ ಬಬಲೇಶ್ವರ ಗ್ರಾಮದಲ್ಲಿ ಮಾತುಕೊಟ್ಟಂತೆ ಸರಕಾರಿ ಪ್ರಾಥಮಿಕ ಶಾಲಾ ಕಟ್ಟಡದ ಕಾಮಗಾರಿಗೆ ಶಾಸಕರ ಪ್ರದೇಶಾಭಿವೃದ್ದಿ ಯೋಜನೆಯ ಅಡಿಯಲ್ಲಿ 9ಲಕ್ಷ ರೂ. ಅನುದಾನ ಮಂಜೂರು ಮಾಡಿಸಿ ವಿದ್ಯಾರ್ಥಿ ಸಂಧ್ಯಾ ಹಂಗರಗಿ ಕಡೆಯಿಂದ ಭೂಮಿ ಪೂಜೆ ನೆರವೇರಿಸಲಾಯಿತು.
ಇದೇ ಸಂಧರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯಿಂದ ಮಂಜೂರಾದ 50.00 ಲಕ್ಷ ಮೊತ್ತದ ಸಿ.ಸಿ ರಸ್ತೆ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಶಾಲಾ ಸಿಬ್ಬಂದಿ, ಇಲಾಖೆ ಅಧಿಕಾರಿಗಳು, ಊರಿನ ಗ್ರಾಮಸ್ಥರಾದ ಸಂಗಪ್ಪ ಚಾಗಶೆಟ್ಟಿ, ಈರಪ್ಪ ಹಂಚಿನಾಳ, ಸಿದ್ದಪ್ಪ ಹಿರೆಭಾಶೆಟ್ಟಿ, ಸಂಗಮೇಶ ಬಿರಾದಾರ, ಜಗು ನಾಯ್ಕೊಡಿ, ಗಂಗಪ್ಪ ಹಂಚಿನಾಳ, ನಬಿಸಾಬ ನದಾಫ, ಕುಮಾರ ದೇಸಾಯಿ, ಶ್ರೀಶೈಲ ದೇಸಾಯಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Leave a Reply