ಸಿಂದಗಿ : ಪಟ್ಟಣದ ಪ್ರತಿಷ್ಠಿತ ಶಾಲೆಯಾದ ಪೂಜ್ಯ ಶ್ರೀ ಚನ್ನವೀರ ಸ್ವಾಮಿ ಪ್ರೌಡ ಶಾಲೆ ಸಹಯೋಗದಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನ ಹಮ್ಮಿಕೊಳ್ಳಲಾಯಿತು.
ಅಭಿಯಾನ ಕುರಿತು ಮಾತನಾಡಿದ ಶಾಲಾ ಮುಖ್ಯಗುರುಗಳಾದ ಜಿ.ಜಿ.ಬಿರಾದಾರ ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ನಾಶವಾಗುವುದು. ಆದರಿಂದ ಪ್ಲಾಸ್ಟಿಕ್ ಬಳಕೆ ನಿಲ್ಲಿಸುವುದು ರೂಡಿಸಿಕೊಳ್ಳಬೇಕು ಎಂದರು.
ನಂತರ ಮಾತನಾಡಿದ ಕಿರಿಯ ಆರೋಗ್ಯ ನಿರೀಕ್ಷಕ ನಬಿರಸೂಲ ಉಸ್ತಾದ ಪ್ಲಾಸ್ಟಿಕ್ ಮಾರಾಟಗಾರರಿಗೆ ಹಲವುಬಾರಿ ತಿಳುವಳಿಕೆ ಪತ್ರ ಹಾಗೂ ಹಲವು ಅಭಿಯಾನ ಮಾಡಲಾಗಿದೆ, ಕಾನೂನು ಬಾಹಿರವಾಗಿ ಪ್ಲಾಸ್ಟಿಕ್ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದರು. ಕಿರಿಯ ಆರೋಗ್ಯ ನಿರೀಕ್ಷಿ ಇಂದುಮತಿ ಮಣ್ಣೂರ ಶಾಲಾ ಮಕ್ಕಳಿಗೆ ಪ್ರತಿಜ್ಞಾ ವಿಧಿ ವಾಚಿಸಿದರು.
ಶಾಲಾ ಮಕ್ಕಳೊಂದಿಗೆ ಪ್ರಮುಖ ರಸ್ತೆಗಳಲ್ಲಿ ಅಭಿಯಾನ ನಡೆಸಿದರು. ಅಭಿಯಾನದಲ್ಲಿ ಗುರುಮಾತೆ ಭೂಶೇಟ್ಟಿ, ಶಿಕ್ಷಕರಾದ ಎಮ್.ಬಿ.ಅಲ್ದಿ, ಮಂಜುನಾಥ ತಳವಾರ, ಎಸ್.ವಾಯ್.ಯರಡ್ಡಿ, ಬಿ.ಪಿ.ಕುಲಕರ್ಣಿ ಹಾಗೂ ಪುರಸಭೆ ಸುಪ್ರವೈಜರ್ ಅನಿಲ ಚೌರ ಇದ್ದರು.
Leave a Reply