ಆರು ದಶಕಗಳಿಂದ ಬಣಜಿಗ ಸಮಾಜದ ಋಣ ಮನಗೂಳಿ ಕುಟುಂಬದ ಮೇಲಿದೆ : ಶಾಸಕ ಅಶೋಕ ಮನಗೂಳಿ

ರಾಜಕೀಯ ಬದಲಾವಣೆಯಿಂದಾಗಿ ಹಲವು ಕಾರ್ಯಗಳು ಕುಂಠಿತಗೊಂಡಿವೆ ಅದನ್ನು ಮುಂದಿನ ದಿನಮಾನಗಳಲ್ಲಿ ಪೂರ್ಣಗೋಳಿಸಿ ಎಂದು ಎಂ.ಎಂ.ಪಡಶೇಟಿ ಹೇಳಿದರು.

ಸಿಂದಗಿ : ಪಟ್ಟಣದ ಅನುಗ್ರಹ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಗೌರವ ಅಧ್ಯಕ್ಷರಾದ ಎಂ.ಎಂ.ಪಡಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕುಲ ವೃತ್ತಿಯಾಧಾರಿತ ಕಾಯಕ ಪ್ರೀಯತೆಯ ಜತೆಗೆ ವಿವಿಧ ಸಮಾಜಗಳಿಗೆ ತನು-ಮನದ ದಾಸೋಹ ಮಾಡಿದ ಇತಿಹಾಸ ಹೊಂದಿರುವ ಬಣಜಿಗರ ಇತಿಹಾಸ 12ನೇ ಶತಮಾನ ಅಂದರೆ  ಅಣ್ಣ ಬಸವಣ್ಣನವರ ಕಾಲಕ್ಕಿಂತಲು ಪುರಾತನ ಇತಿಹಾಸವಿದೆ  ಎಂದರು.

ನಾನು ನೋಡಿದ ಹಾಗೆ ಸಿಂದಗಿ ಕ್ಷೇತ್ರದಿಂದ ದಿ.ಎಂ.ಸಿ.ಮನಗೂಳಿ ಅವರು ಹಾಗೂ ನನ್ನ ಗುರುಗಳಾದ ಡಾ.ಎಂ.ಎಂ.ಕಲ್ಬುರ್ಗಿ ಇಬ್ಬರು ಬಡತನ ಕುಟುಂಬದಿಂದ ಬಂದು  ಸಿಂದಗಿ ಕ್ಷೇತ್ರ ರಾಜ್ಯಾದ್ಯಂತ ಪರಿಚಯಿಸಿದವರು. ಮನಗೂಳಿ ಅವರೊಂದಿಗೆ  ಅಳಿಯ-ಮಾವನ ಸಂಭಂಧ ವಾದರೆ ಡಾ.ಎಂಎಂ.ಕಲ್ಬುರ್ಗಿ ಅವರೊಂದಿಗೆ ಗುರು-ಶಿಷ್ಯರ ಸಂಭಂಧವಿತ್ತು. ಆಗಿನ ಸಮಾಜಪರ ಕಾಳಜಿ ಮತ್ತು ಚಿಂತನೆಗಳ ಬಗ್ಗೆ ಇಬ್ಬರು ಮಹನಿಯರು ಚರ್ಚೆಗಳನ್ನು ನೋಡುತ್ತಾ ಬೆಳೆದವರು ನಾವು ಎಂದು ಹಿಂದನ ಅವರ ನೆನಪುಗಳನ್ನು ಮೇಲಕು ಹಾಕಿದರು.

ಮಾನ್ಯ ಶಾಸಕರು, ಈ ಹಿಂದೆ ಪುರಸಭೆಯಲ್ಲಿ ಬಸವೇಶ್ವರ ವೃತ್ತದಿಂದ ಚಿಕ್ಕಸಿಂದಗಿ ಬೈಪಾಸ್ ರಸ್ತೆಗೆ ಡಾ.ಎಂ.ಎಂ.ಕಲಬುರ್ಗಿ ಅವರ ಹೆಸರಿಡಲಾಗಿದೆ ಅಲ್ಲದೇ ಆನಂದ ಚಿತ್ರ ಮಂದಿರ ರಸ್ತೆಗೆ ಡಾ. ಬಮ್ಮಣ್ಣಿ ಅವರ ಹೆಸರಿಡಲಾಗಿತ್ತು ಆ ರಸ್ತೆಗಳ ನಾಮಕರಣ – ಪಲಕಗಳ ಅಳವಡಿಕೆ ಮತ್ತು ಶಾಂತವೀರ ಪಟ್ಟಾಧ್ಯಕ್ಷರ ಉದ್ಯಾನವನ ಹಾಗೂ ಹಂದಿಗನೂರ ಸಿದ್ರಾಮಪ್ಪ ರಂಗ ಮಂದಿರ ಕಾರ್ಯಗಳ ಕುರಿತು ಖುದ್ದು ಕಾಳಜಿಯಿಂದ ಚಾಲನೆಗೆ ತರಬೇಕು ಎಂದು ಮನವಿ ಮಾಡಿದರು.

ಸನ್ಮಾನಕ್ಕೋತ್ತರವಾಗಿ ಮಾತನಾಡಿದ ಶಾಸಕ ಅಶೋಕ ಮನಗೂಳಿ ಕಳೆದ ಆರು ದಶಕಗಳಿಂದಲೂ ಬಣಜಿಗ ಸಮಾಜದ ಋಣ ಮನಗೂಳಿ ಕುಟುಂಬದ ಮೇಲಿದೆ.   ನಮ್ಮ ಕುಟುಂಬದ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಕಳಕಳಿಯ ಮೂಲಕ ನಮ್ಮ ಬೆನ್ನೆಲುಬಾಗಿದೆ ಎಂದರೆ ತಪ್ಪಿಲ್ಲ. ನನ್ನ ತಂದೆ ಮೇಲೆ ಕ್ಷೇತ್ರದ ಜನರು ವಿಶ್ವಾಸವಿಟ್ಟು ಮತ ನೀಡಿದ್ದಾರೆ. ಇದೀಗ ನನ್ನ ಮೇಲೂ ಅದೇ ವಿಶ್ವಾಸದ ಮತ ಭಾರವಿದೆ. ಈ ಕ್ಷೇತ್ರವನ್ನು ಮಾದರಿಯಾಗಿಸುವ ಕನಸು ಹೊತ್ತಿದ್ದೇನೆ ಮುಂದಿನ ಒಂದು ತಿಂಗಳ ಅವಧಿಯಲ್ಲಿ ಡಾ.ಎಂ.ಎಂ.ಕಲಬುರ್ಗಿ ರಸ್ತೆ ನಾಮಕರಣ ಕೆಲಸ ಮಾಡುವ ಮೂಲಕ ಅಜರಾಮರಗೊಳಿಸುವೆ. ಡಾ.ಬಮ್ಮಣ್ಣಿ ಅವರ ರಸ್ತೆಯ ಕೆಲಸವನ್ನೂ ಮಾಡುವೆ ಎಂದು ಭರವಸೆ ನೀಡಿದರು. ಎಂದರು.

ಡಾ.ಅರವಿಂದ ಮನಗೂಳಿ , ಜಿಲ್ಲಾ ಕಾಂಗ್ರೆಸ್ ಮುಖಂಡೆ ಮಹಾನಂದ ಬಮ್ಮಣ್ಣಿ ಮಾತನಾಡಿದರು. ಸಾನಿಧ್ಯ ವಹಿಸಿದ್ದ ಶಿರೋಳದ ರಾಮಾರೂಢ ಮಠದ ಶಂಕರಾರೂಢ ಶ್ರೀಗಳು ಆಶೀರ್ವಚನ ನೀಡಿದರು.

ವೇದಿಕೆಯಲ್ಲಿ ಶಾಸಕರ ಪತ್ನಿ ನಾಗರತ್ನ ಮನಗೂಳಿ, ಮುತ್ತು ಮುಂಡೇವಾಡಗಿ ಇದ್ದರು. ಸೋಮನಗೌಡ ಬಿರಾದಾರ, ಮಹಾಂತೇಶ ಪಟ್ಟಣಶೆಟ್ಟಿ, ಅಶೋಕ ವಾರದ, ಶಾಂತೂ ರಾಣಾಗೋಳ, ಶಿವಪ್ಪ ಗೌಸಾನಿ, ಚಂದ್ರಕಾಂತ ಬಮ್ಮಣ್ಣಿ, ರವಿ ನಾಗೂರ್, ಚಂದ್ರಶೇಖರ ಮಣೂರ, ಸಿದ್ಲಿಂಗಪ್ಪ ವಡ್ಡೋಡಗಿ, ಚನ್ನಪ್ಪ ಗೋಣಿ, ಕಿರಣ ಕೋರಿ, ಮುತ್ತು ಪಟ್ಟಣಶೆಟ್ಟಿ, ಸತೀಶ ಕೌಲಗಿ, ಮಹಾಂತೇಶ ನೂಲಾನವರ ಸೇರಿದಂತೆ ತಾಲೂಕು ಘಟಕದ ಪದಾದೀಕಾರಿಗಳು, ಗಣ್ಯ ವರ್ತಕರು ಹಾಗೂ ಸಮಾಜ ಬಾಂಧವರು ಇದ್ದರು. ರವಿ ಗೋಲ್ಲಾ ಸ್ವಾಗತಿಸಿದರು  ಸಿದ್ಲಿಂಗ ಕಿಣಗಿ ಕಾರ್ಯಕ್ರಮ ನಿರೂಪಿಸಿದರು.