ಶಕ್ತಿ ಯೋಜನೆ ಕಾರ್ಯಕ್ರಮ ಉದ್ಘಾಟನೆಗೆ ವೇದಿಕೆಗೆ ಮಹಿಳೆಯರನ್ನು ಆಮಂತ್ರಸಿದ ಶಾಸಕ ಅಶೋಕ ಮನಗೂಳಿ

ಸಿಂದಗಿ :  ಹೆಣ್ಣು ಮಕ್ಕಳು ಎಲ್ಲ ರಂಗದಲ್ಲು ಮುನ್ನಲ್ಲೇಗೆ ಬರಬೇಕು. ಇಂದು ರಾಜ್ಯದಲ್ಲಿ ಸುವರ್ಣ ಅಕ್ಷರದಲ್ಲಿ ಬರೆದಿಡುವ ದಿನ  ಎಂದು ದಿವ್ಯ ಸಾನಿದ್ಯ ವಹಿಸಿದ ಡಾ.ಪ್ರಭು ಸಾರಂಗದೇವ ಶಿವಚಾರ್ಯರು ಸಾರಂಗಮಠ ಸಿಂದಗಿ ರವರು ಹೇಳಿದರು.

ಬಸ್ಸ್ ನಿಲ್ದಾಣದಲ್ಲಿ ಸಾರಿಗೆ ಇಲಾಖೆ ಆಯೋಜಿಸಿದ ಶಕ್ತಿ ಯೋಜನೆ ಚಾಲನೆ ಕುರಿತು ಆಶೀರ್ವಾದ ವಚನ ನೀಡಿದ ಪೂಜ್ಯರು  ಇಂದು ರಾಜ್ಯದಲ್ಲಿ ಸುವರ್ಣ ಅಕ್ಷರದಲ್ಲಿ ಬರೆದಿಡುವ ದಿನ ಇಂದಿನಿಂದ ಮಹಿಳೆಯರು ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ ಇದರ ಸದುಪಯೋಗ ಮಹಿಳೆಯರು ಪಡೆದುಕೋಳ್ಳಬೇಕು. ಹೆಣು ಮಕ್ಕಳು ತಮ್ಮ ಮನೆಯಲ್ಲಿರುವ ಯಜಮಾನರಿಗೆ ಸ್ವಲ್ಪ ವಿಶ್ರಾಂತಿ ಕೋಡಿ ಗ್ರಾಮಾಂತರ ಪ್ರದೇಶಗಳಿಂದ ನಗರಕ್ಕೆ ಬರುವ ಗಂಡಸರು ದುಶ್ಚಟ್ಟಕ್ಕೆ ಬಲಿಯಾಗುತ್ತಿದ್ದಾರೆ. ಅದಕ್ಕೆ ಕಡಿವಾಣ ಹಾಕಿ. ಮತ್ತು ಸರಕಾರ ಉಚಿತವಾಗಿ ಬಸ್ಸ ಸೌಲಭ್ಯ ವದಗಿಸಿದೆ ಎಂದು ಅದರ ದುರುಪಯೋಗ ಮಾಡಿಕೊಂಡರೆ ನಿಮ್ಮ ಸಂಸಾರವೆ ಬೀದಿಗೆ ಬರಬಹುದು, ಆದರಿಂದ ಅವಶ್ಯಕತೆ ಇದ್ದಾಗ ಮಾತ್ರ ಅದರ ಸದುಪಯೋಗ ಮಾಡಿಕೋಳ್ಳಿ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮ ಉದ್ಘಾಟನೆಗೆ ಆಗಮಿಸಿದ ಶಾಸಕ ಅಶೋಕ  ಮನಗೂಳಿ ಕಾರ್ಯಕ್ರಮಕ್ಕೆ ಆಗಮಿಸಿದ ಮಹಿಳೆಯರಿಂದ ಉದ್ಘಾಟಿಸಿದ್ದು ವಿಶೇಷವಾಗಿತ್ತು.  ನಂತರ ಮಾತನಾಡಿದ ಶಾಸಕ ಅಶೋಕ ಮನಗೂಳಿ ನಮ್ಮ ಸರಕಾರ ಚುನಾವಣೆಯಲ್ಲಿ 5 ಗ್ಯಾರಂಟಿಗಳನ್ನು ನೀಡಿತ್ತು ಅದರ ಭಾಗವಾಗಿ ಇಂದು ಪ್ರಥಮ ಗ್ಯಾರಂಟಿ ಯೋಜನೆಯಾಗಿ ಮಹಿಳೆಯರಿಗೆ ಶಕ್ತಿ ನೀಡುವ ದೃಷ್ಠಿಯಿಂದ ಅವರಿಗೆ ಶಕ್ತಿ ಯೋಜನೆ ಮುಖಾಂತರ ರಾಜ್ಯಾದ್ಯಂತ ಉಚಿತವಾಗಿ ಸಂಚರಿಸುವ ಯೋಜನೆ ಇದ್ದಾಗಿದ್ದು ಇದರ ಸದುಪಯೋಗ ರಾಜ್ಯದ ಜನತೆ ಪಡೆಯಲ್ಲಿದ್ದಾರೆ.  ಅಧಿಕಾರಕ್ಕ ಬಂದ ಕೆಲವೆ ದಿನಗಳಲ್ಲಿ ಯೋಜನೆ ಅನುಷ್ಠಾನಗೋಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನಬವರು ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ಸಂಪುಟ ದರ್ಜೆಯ ಎಲ್ಲ ಸಂಸದರಿಗೆ ಅಭಿನಂದನೆಗಳು ತಿಳಿಸಿದರು.

ಪ್ರಯಾಣಕ್ಕೆ ಬಂದಿರುವ ಒಬ್ಬ  ಮಂಗಳಮುಖಿಗೆ ಹೂ ನೀಡಿ ಬಸ್ಸಿಗೆ ಹತ್ತಿಸಿದರು.

 

ನಂತರ ನೂತನ  ಬಸ್ಸ್ ನಲ್ಲಿ  ಮಹಿಳೆಯರನ್ನು ಸ್ವಾಗತಿಸಲು ಬಂದ ಶಾಸಕರು ಮೋದಲು ಪ್ರಾತಿನಿದ್ಯ ನೀಡಿದ್ದು ಪ್ರಯಾಣಕ್ಕೆ ಬಂದಿರುವ ಒಬ್ಬ  ಮಂಗಳಮುಖಿಗೆ ಬಸ್ಸ್ ತುಂಬಿದ ನಂತರ ಡಾ.ಪ್ರಭು ಸಾರಂಗದೇವ ಶಿವಚಾರ್ಯರು ಸಾರಂಗಮಠ  ಸಿಂದಗಿ ತಾಲೂಕಾ ದಂಡಾಧಿಕಾರಿ ನಿಂಗಣ್ಣ ವಿರಾದಾರ, ಪಿ.ಎಸ್.ಆಯ್ ಸೋಮೇಶ ಗೇಜಿ, ಅಂಕಿಅಂಶ ಅಧಿಕಾರಿ  ಜಯಂತ ಹಾಗೂ ಘಟಕ ವ್ಯವಸ್ಥಾಪಕ ರೇವಣಸಿದ್ದ ಖೈನೂರ  ಬಸ್ಸಿಗೆ ಹಸಿರು ನಿಶಾನೆ ತೋರಿಸುವದರೊಂದಿಗೆ  ಚಾಲನೆ ನೀಡಿದರು ಘಟಕದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಶಕ್ತಿ ಯೋಜನೆಯ ಬಸ್ಸ್ ಗೆ ಹಸಿರು ನಿಶಾನೆ ತೋರಿಸುತ್ತಿರುವುದು.