ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯ ಅಳವಡಿಸಿದ ಶುದ್ಧ ನೀರಿನ ಘಟಕಕ್ಕೆ ಸಂಸ್ಥೆಯ ಚೇರಮನ್‌ರಾದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರರು ಚಾಲನೆ ನೀಡಿದರು.
ಸಿಂದಗಿ: ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯಲ್ಲಿ ಕಲಿಯುತ್ತಿರುವ ಸಾವಿರಾರು ವಿದ್ಯಾರ್ಥಿಗಳು ಹಾಗೂ ಪ್ರಶಿಕ್ಷಣಾರ್ಥಿಗಳಿಗಾಗಿ ಅತ್ಯಾಧುನಿಕ ಹಾಗೂ ದೊಡ್ಡ ಪ್ರಮಾಣದ ಶುದ್ಧ ಕುಡಿಯುವ ನೀರಿನ ಘಟಕವನ್ನು ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಳವಡಿಕೆ ಮಾಡಲಾಯಿತು. ಸಂಸ್ಥೆಯ ಚೇರಮನ್‌ರಾದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರರು ಚಾಲನೆ ನೀಡಿದರು.
ಈ ಕುರಿತು ಮಾತನಾಡಿದ ಲಿಕ್ವಿ ಕ್ಲಿಯರ್ ವಿತರಕರು ಹಾಗೂ ಸೌಮ್ಯಾ ಎಂಟರ್ ಪ್ರೈಸಸ್ ಮಾಲೀಕರಾದ ಸಂದೀಪ ಪಾಟೀಲ ಪ್ರಪ್ರಥಮ ಬಾರಿಗೆ ಸಿಂದಗಿಯಲ್ಲಿ ದೊಡ್ಡ ಪ್ರಮಾಣದ ಕುಡಿಯುವ ನೀರಿನ ಘಟಕ ಅಳವಡಿಕೆ ಮಾಡಲಾಗಿದ್ದು ಈ ಶುದ್ದ ನೀರಿನ ಘಟಕವು ಒಂದು 1000 ಲೀ ಸಾಮರ್ಥ್ಯ ಹೊಂದಿದ್ದು, ಅತೀ ಕಡಿಮೆ ನೀರಿನ ವೆಸ್ಟೇಜ್ ಹೊಂದಿದೆ, ಕಡಿಮೆ ವಿದ್ಯುತ್, ಸುಲಭ ನಿರ್ವಹಣೆ ಹಾಗೂ ದೇಹಕ್ಕೆ ಬೇಕಾದ ಮಿನರಲ್ಸ್ಗಳನ್ನು ಒದಗಿಸುತ್ತದೆ. ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ನೀರಿನ ಘಟಕವು ಇತರೆ ಪ್ಯೂರಿಫೈಯರ್‌ಗಳಿಗೆ ಹೋಲಿಸಿ ನೋಡಿದರೆ ಉತ್ತಮ ಹಾಗೂ ನೈಸರ್ಗಿಕವಾದ ನೀರನ್ನು ನೀಡುತ್ತದೆ. ಸಾವಿರಾರು ವಿದ್ಯಾರ್ಥಿಗಳ ಆರೋಗ್ಯದ ಹಿತ ದೃಷ್ಠಿಯಿಂದ ದೊಡ್ಡ ಪ್ರಮಾಣದ ನೀರಿನ ಅಳವಡಿಕೆ ಮಾಡಿಸಿದ ಶ್ರೀಗಳಿಗೆ ಹಾಗೂ ಆಡಳಿತ ವರ್ಗಕ್ಕೆ ಅಭಿನಂದನೆ ಸಲ್ಲಿಸಿದರು.
ಈ ವೇಳೆ ಪ್ರಾಚಾರ್ಯರಾದ ಜೆ.ಸಿ.ನಂದಿಕೋಲ, ಶರಣು ಜೋಗುರ, ವಿ.ಡಿ.ಪಾಟೀಲ, ಡಿ.ಎಸ್.ಮಠಪತಿ, ಎಸ್.ವಿ.ಚವ್ಹಾಣ, ಕವಿತಾ ರಾಠೋಡ, ಸಿ.ಜಿ.ಕತ್ತಿ ಹಾಗೂ ಆಡಳಿತ ಮಂಡಳಿ ಸದಸ್ಯರು ಇದ್ದರು
Leave a Reply