ಸಿಂದಗಿ : ಮತಕ್ಷೇತ್ರದ ಕನ್ನೋಳ್ಳಿ ಗ್ರಾಮದಲ್ಲಿ ಮೇ ತಿಂಗಳಿನಲ್ಲಿ ಸಿಡಿಲು ಹೊಡೆತಕ್ಕೆ ಬಲಿಯಾದ ಘಟನೆ ಜರುಗಿತ್ತು. ನಿಮಿತ್ತವಾಗಿ ಸರ್ಕಾರದಿಂದ ನೊಂದ ಕುಟುಂಬಕ್ಕೆ ಪರಿಹಾರ ನೀಡಿ ಸಾಂತ್ವನ ಹೇಳಲು ತಾಲೂಕಾ ಆಡಳಿತದೊಂದಿಗೆ ಶಾಸಕ ಅಶೋಕ ಮನಗೂಳಿ ಭೇಟಿ ನೀಡಿದರು.
ಸಾಂತ್ವಾನ ಹೇಳಿ ಮಾತನಾಡಿದ ಶಾಸಕ ಅಶೋಕ ಮನಗೂಳಿ ಪ್ರಕೃತಿಯ ವಿಕೋಪಕ್ಕೆ ಇಂದು ನಮ್ಮೊಂದಿಗೆ ದಿ.ಸಿದ್ದು ಚನ್ನಪ್ಪ ಯಂಕಂಚಿ ಅಗಲಿದ್ದು ಅತೀವ ನೋವು ತಂದಿದೆ. ಅವರು ಕುಟುಂಬಸ್ಥರು ದಿಗ್ಭ್ರಮೆ ಆಗಿದ್ದು ನೋವಿನಲ್ಲಿದ್ದಾರೆ. ನಾವು ಎನೇ ಮಾಡಿದರು ಅವರು ಕಳೆದು ಕೊಂಡವರನ್ನು ತಂದು ಕೊಡಲು ಆಗುವುದಿಲ್ಲ ಆದರೆ ಸರಕಾರದ ಪರವಾಗಿ ನಾವು ಕುಟುಂಬಸ್ಥರ ಪರ ನಿಲ್ಲಬೇಕಾದದ್ದು ನಮ್ಮ ಮಾನವೀಯತೆ, ಮತ್ತು ಕರ್ತವ್ಯ ಆದರಿಂದ ಈಗಾಗಲೇ ಆಡಳಿತ ಅಧಿಕಾರಿಗಳಿಂದ 5 ಲಕ್ಷರೂ ಅವರ ತಂದೆ ಚನ್ನಪ್ಪ ಸಾಯಬಣ್ಣ ಯಂಕಂಚಿ ಇವರ ಖಾತೆಗೆ ಜಮೆಯಾಗಿದ್ದು ಕ್ಷೇತ್ರಾದ್ಯಂತ ಮಾನವಹಾನಿ ಹಾಗೂ ಪ್ರಾಣಿಹಾನಿ ಸೇರಿ ಒಟ್ಟು 7ಲಕ್ಷ 58ಸಾವಿರ ರೂ ಜಮೆಯಾಗಿದ್ದು ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕಾ ದಂಡಾಧಿಕಾರಿ ನಿಂಗಣ್ಣ ಬಿರಾದಾರ, ಸರ್ಕಲ್ ಕಾಸಿಂ ಮಕಾಂನದಾರ, ಶಿವಪುತ್ರ ಕರನಳ , ಪ್ರವೀಣ ಕಂಟಿಗೊಂಡ, ಜಿಲಾನಿ ನಾಟೀಕಾರ, ವಿಜುಗೌಡ ಪಾಟೀಲ, ರಾಮು ಖೇಡಗಿ, ರಾಚಪ್ಪ ತಂಬಾಕೆ, ಸಿದ್ದಣ್ಣ ಯಾಳಗಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Leave a Reply