ಕಿಡ್ ಜೀ ಚಿಕ್ಕಮಕ್ಕಳಿಗಾಗಿ ನೂತನ ಶಾಲೆ ಆರಂಭ

ಸಿಂದಗಿ: ನಗರದ ಬಂದಾಳ ರಸ್ತೆಯಲ್ಲಿರುವ  ಶಾಂತವೀರ ನಗರದಲ್ಲಿ ನೂತನವಾಗಿ ಕಿಡ್ ಜೀ ಶಾಲೆಯನ್ನು ನೂತನ ಶಾಸಕ ಅಶೋಕ್ ಮನಗೂಳಿ ಉದ್ಘಾಟಿಸಿದರು.

ಉದ್ಘಾಟಿಸಿ ಮಾತನಾಡಿದ ಅವರು ಚಿಕ್ಕ ಮಕ್ಕಳಿಗಾಗಿ ಒಂದು ಅತ್ಯುನ್ನತ ಸೌಲಭ್ಯವುಳ್ಳ ಶಾಲೆಯು  ಪರಿಸರ ದಿನದಂದು ಸಸಿ ನೀಡಿ ಸ್ವಾಗತಿಸಿರುವುದು ಶಾಲಾ ಸಂಸ್ಥಾಪಕ ವೆಂಕಟೇಶ್ ಆರ್ ಗುತ್ತೇದಾರ ಅವರು ಸಾಮಾಜಿಕ ಕಳಕಳಿ ಎತ್ತಿ ತೋರಿಸುತ್ತದೆ. ವೆಂಕಟೇಶ್ ಅವರು ನಗರದಲ್ಲಿ ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದು ಇಂದು ಪ್ಲೇ ಹೋಮ್, ನರ್ಸರಿ, ಎಲ್.ಕೆ.ಜಿ ಮತ್ತು ಯು.ಕೆ.ಜಿ ಪ್ರಾರಂಭಿಸಿ ಶಿಕ್ಷಣ ಕ್ಷತ್ರಕ್ಕೆ ಕಾಲಿಟ್ಟಿದ್ದಾರೆ ಅವರಿಗೆ ಶುಭವಾಗಲಿ ಇನ್ನು ಎತ್ತರಕ್ಕೆ ಅವರ ಸಂಸ್ಥೆ ಬೆಳೆಯಲಿ ಎಂದು ಹೇಳಿದರು.

 

ಪ್ರಥಮ ಹಂತದಲ್ಲಿಯೆ ಸುಮಾರು ದಾಖಲಾತಿ ಆಗಮಿಸಿದ್ದು ಅತ್ಯಂತ ಉತ್ತಮವಾದ ಸ್ಪಂದನೆ ವ್ಯಕ್ತವಾಗಿದೆ. ಹಲವು ಬಡ ಮಕ್ಕಳನ್ನು ಗುರುತಿಸಿ ಅವರಿಗೆ ಶುಲ್ಕ ರಹಿತ ಶಿಕ್ಷಣ ನಮ್ಮ ವಿ.ಆರ್.ಜಿ ಚಾರಿಟೇಬಲ್ ಎಜ್ಯುಕೇಶನಲ್ಲ್ ಆಂಡ್ ಡೇವಲಪಮೆಂಟ್ ಬರತಿ ಮಾಡಿ ವಿದ್ಯಾಭ್ಯಾಸದ ಹೊಣೆ ಹೊರಲಾಗಿದೆ.  ಶಾಲಾ ವಿಶೇಷತೆಯಂದರೆ ಗುರುವೃಂದಕ್ಕೆ ದಿನ ಆನ್ ಲೈನ್ ತರಬೇತಿ, ಅದೇರೀತಿ  ಪಾಲಕರಿಗೆ ಸುಲಭವಾಗುವಂತೆ ಮೊಬೈಲ್ ನಲ್ಲಿ  ಸರಳವಾಗಿ ಮಕ್ಕಳಿಗೆ‌ ತಿಳಿಸಲು ಅಪ್ಲಿಕೇಶನ್ ಸೌಲಭ್ಯವಿರುತ್ತದೆ ಎಂದು ಸಂಸ್ಥಾಪಕ ವೆಂಕಟೇಶ್ ಆರ್ ಗುತ್ತೇದಾರ ತಿಳಿಸಿದರು.

ರಾಜು ಗುತ್ತೇದಾರ, ಹಿರಿಯ ವರದಿಗಾರ ಶಾಂತು ಹಿರೇಮಠ, ಮಂಜುನಾಥ ಬಿಜಾಪುರ, ಶಿಕ್ಷಕ ರವಿ ಗೋಲಾ, ಜಿಲಾನಿ ನಾಟೀಕಾರ, ಮಹ್ಮದ ಪಟೇಲ್,  ಸಂದೀಪ ಚೌರಿ, ಪ್ರವೀಣ ಬಿರಾದಾರ, ರಮೇಶ ಚಟ್ಟರಕಿ, ಮುಖ್ಯಗುರುಮಾತಾ ವಿಪುಲಾ ವೆಂಕಟೇಶ್ ಗುತ್ತೇದಾರ ಹಾಗೂ ಸಿಬ್ಬಂದಿ ವರ್ಗ ಮತ್ತು ಪಾಲಕವೃಂದ ಉಪಸ್ಥಿತರಿದ್ದರು.


Comments

Leave a Reply

Your email address will not be published. Required fields are marked *