ನವದೆಹಲಿ: ಕಾಂಗ್ರೆಸ್ ಉಸ್ತುವಾರಿ ಇಂದು ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡಿ ಇದುವರೆಗೂ ಕರ್ನಾಟಕದ ಮುಖ್ಯಮಂತ್ರಿ ಆಯ್ಕೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಮುಂದಿನ 48ರಿಂದ 72ಗಂಟೆಗಳಲ್ಲಿ ಸ್ಪಷ್ಟಪಡಿಸುವರು ಸುಮ್ಮನೆ ಗೊಂದಲ ಸೃಷ್ಟಿ ಬೇಡ. ಬಿಜೆಪಿಯವರು ಅಧಿಕಾರ ಕಳೆದುಕೊಂಡ ಹಿನ್ನೆಲೆಯಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಹುದ್ದೆ ಕುರಿತು ಪಕ್ಷದ ಪ್ರಮುಖರು ಚರ್ಚೆ ಮಾಡುತ್ತಿದ್ದಾರೆ. ಮೊದಲ ಮಂತ್ರಿ ಮಂಡಲದಲ್ಲಿ ನಾವು ನೀಡಿರುವ 5ಗ್ಯಾರಂಟಿಗಳನ್ನು ಜಾರಿಗೆ ತರುತ್ತೆವೆ. ಭ್ರಷ್ಟಾಚಾರ ಮುಕ್ತವಾದ, ಸರಳ ಹಾಗೂ ಒಂದು ಸ್ವಚ್ಛವಾದ ಆಡಳಿತ ಕಾಂಗ್ರೆಸ್ ನೀಡುತ್ತದೆ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ತಿಳಿಸಿದರು.
Leave a Reply