ವಯೋವೃದ್ಧ – ಅಂಗವಿಕಲರ “ಮನೆ-ಮತ”

ಸಿಂದಗಿ : ಮತಕ್ಷೇತ್ರದಲ್ಲಿ ಮಿಂಚಿನ ಮತದಾನ ತಾಲೂಕಾ ಅಧಿಕಾರಿಗಳು ಮನೆ-ಮತ ನಡೆಸಿದ್ದಾರೆ.

ಪಟ್ಟಣದ ಹಲವು ಭಾಗಗಳಲ್ಲಿ ಮತದಾನ ಮಾಡಿಸಲು ಇಳಿದ ಅಧಿಕಾರಿಗಳು ಯಶಸ್ವಿಯಾಗಿ ಮತದಾನ ಮಾಡಿಸುತ್ತಿದ್ದಾರೆ.

 

ಇಂದು ಪಟ್ಟಣದ ವಾರ್ಡ್ ನಂ:23 ರಲ್ಲಿ  ವಯೋವೃದ್ಧರಿಗೆ ಹಾಗೂ ಅಂಗವಿಕಲರ ಮತದಾನ ಲಿಸ್ಟ್ ಹಿಡಿದು ಮನೆ-ಮನೆ ತಿರುಗಾಡುವುದು ಕಂಡುಬಂತು. ಪೊಲೀಸ್ ಅಧಿಕಾರಿಗಳ ಸೂಕ್ತ ಭದ್ರತೆಯಲ್ಲಿ  ಚುನಾವಣಾ ಅಧಿಕಾರಿಗಳು ಮತದಾನ ಯಂತ್ರದ ಬಾಕ್ಸ್ ಹಿಡಿದು ನಡೆದರು.

29 ಮತ್ತು 30 ಏಪ್ರಿಲ್ 2023 ರ ಎರಡು ದಿನಗಳ ಕಾಲ ಮನೆ-ಮತ ಮಾಡುವಂತೆ ಆಯೋಗದ ಆದೇಶದಂತೆ ಮತದಾನ ಮಾಡಲಾಗುತ್ತಿದೆ. ಅದಾಗ್ಯೂ ಉಳಿದರೆ ನಾಳೆಯೂ ಎರಡು ಗಂಟೆಗಳ ಕಾಲ ಮತದಾನದ ಅನುಕೂಲ ಮಾಡುವಂತೆ ತಿಳಿಸಿದ್ದೇನೆ. ಒಟ್ಟು ಕ್ಷೇತ್ರದಲ್ಲಿ 866 ವಯೋವೃದ್ಧ ಹಾಗೂ ಅಂಗವಿಕಲ ಮತದಾರರಿದ್ದು ನಿನ್ನೆ 402 ಮತಗಳನ್ನು ಹಾಕಿಸಲು  ಅಧಿಕಾರಿಗಳು ಯಶಸ್ವಿಯಾಗಿದ್ದಾರೆ ಪ್ರತಿಶತ ನೂರರಷ್ಟು ಮತದಾನ ಮಾಡಿಸುವಲ್ಲಿ ಅಧಿಕಾರಿಗಳು ಸಪಲರಾಗುತ್ತಾರೆ ಎಂಬ ವಿಶ್ವಾಸವಿದೆ ಎಂದು ಚುನಾವಣಾಧಿಕಾರಿ ಸಿದ್ದರಾಮ ಮಾರಿಹಾಳ ತಿಳಿಸಿದರು.