ಸಿಂದಗಿ: ರಾಜಕೀಯವಾಗಿ ಬಸನಗೌಡ ಪಾಟೀಲ್ ಯತ್ನಾಳ ನಾಚಿಕೆಯ ಬಗ್ಗೆ ನಿಮಗೆ ತಿಳದಿದೇಯೋ ಇಲ್ಲವೂ ಗೊತ್ತಿಲ್ಲ. ಆದರೆ ಜೆಡಿಎಸ್ ಪಕ್ಷದಲ್ಲಿದ್ದಾಗ ಯತ್ನಾಳ ಬಗ್ಗೆ ನನಗೆ ಸಂಪೂರ್ಣ ಗೊತ್ತಿದೆ ಎಂದು ಆಲಮೇಲ್ ಪಟ್ಟಣ ಪಂಚಾಯತ್ ಸದಸ್ಯ ಸಾಧಿಕ್ ಸುಂಬಡ್ ಹೇಳಿದರು.
ನಗರದ ತಹಶೀಲ್ದಾರ್ ಕಛೇರಿ ಆವರಣದಲ್ಲಿ ಪ್ರತಿಭಟಿಸಿ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಯ ಸಂದರ್ಭದಲ್ಲಿ ಮತ ಹಾಕಿ ಎಂದು ಕೇಳುತ್ತಾ ಬಂದಿದ್ದ ಯತ್ನಾಳ ಇಂದು ಮುಸ್ಲಿಂ ಸಮಾಜದ ಮತ ನನಗೆ ಬೇಕಾಗಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಜೆಡಿಎಸ್ನಲ್ಲಿರುವಾಗ ಇವರು ಜ್ಯಾತ್ಯಾತೀತವಾಗಿದ್ದರು. ಸಧ್ಯ ಅವರು ಮಾತನಾಡುತ್ತಿರುವ ನಾಲೆಗೆ ಅವರದ್ದಲ್ಲ, ಬದಲಾಗಿ ಬಿಜೆಪಿ ಮತ್ತು ನಾಗಪುರದ ಆರ್.ಎಸ್.ಎಸ್ನವರದು ಎಂದು ಹರಿಹಾಯ್ದರು. ಇಂದು ಅವರದೇ ಸಮಾಜದ ವಿರೋಧ ಪಕ್ಷದ ರಾಜಕೀಯ ಮುಖಂಡರು ಅವರ ಅವಹೇಳನಕರ ಮಾತಿಗೆ ಯಾವುದೇ ಪ್ರತಿಕ್ರಿಯೇ ನೀಡುತ್ತಿಲ್ಲ. ಅವರಿಗೂ ನಾವು ಎಚ್ಚರಿಕೆ ನೀಡುತ್ತೇವೆ. ಅವರಿಗೆ ತಿಳಿಹೇಳದಿದ್ದರೇ ನಾವು ಸಿಂದಗಿ ಮತ್ತು ಬಸವನ ಬಾಗೇವಾಡಿಯ ನಮ್ಮ ಸಮಾಜಕ್ಕೆ ಮತ ಕೇಳಲು ಬರುವ ಪಂಚಮಸಾಲಿ ಸಮಾಜದ ಅಭ್ಯರ್ಥಿಗಳಿಗೆ ತಕ್ಕ ಉತ್ತರ ನೀಡುತ್ತೇವೆ ಎಂದರು.
ಈ ವೇಳೆ ಕರ್ನಾಟಕ ರಾಜ್ಯ ಟಿಪ್ಪಸುಲ್ತಾನ ಅಭಿಮಾನಿಗಳ ಮಹಾವೇದಿಕೆಯ ತಾಲೂಕಾಧ್ಯಕ್ಷ ನಜೀರ್ ದಲಾಲ, ಆಲಗೂರ ಮಾತನಾಡಿ, ನಮ್ಮ ರಾಜ್ಯದಲ್ಲಿ ಅಸಮರ್ಥ ಸರಕಾರ ಮತ್ತು ಗೃಹ ಮಂತ್ರಿಗಳಿದ್ದಾರೆ. ಕೇಲವು ಯತ್ನಾಳರಂತ ಅವಿವೇಕಿಗಳು ಸಮಾಜವನ್ನು ಹೊಡೆದು ಹಾಕುತ್ತಿರುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಇಂದಿನ ಸರಕಾರ ಇಂತಹ ಹೇಳಿಕೆ ನೀಡುವವರನ್ನು ಕೈ ಬೀಡಬೇಕು. ಯತ್ನಾಳರಿಗೆ ನನ್ನ ಬಹಿರಂಗ ಸವಾಲು ಬೆಳಿಗ್ಗೆ ಸಾರ್ವಜನಿಕ ಸಭೆಗಳಲ್ಲಿ ಮುಸ್ಲಿಂ ಸಮುದಾಯವನ್ನು ತೆಗಳಿ, ರಾತ್ರಿ ಹೊತ್ತು ಕರೆಯಿಸಿ ಕಾಲು ಹಿಡಿದುಕೊಳ್ಳುವ ನೀತಿಯನ್ನು ಬೀಡಬೇಕು. ಮತ್ತು ಸರಕಾರ ಸೂಕ್ತ ಕಾನೂನು ಕ್ರಮ ಜರುಗಿಸಿ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಅಕ್ಬರ್ ಮುಲ್ಲಾ, ರಜತ್ ತಾಂಬೆ, ಬಂದೇನಮಾಜ ಶಹಾಪೂರ, ಮಹಮ್ಮದ್ ಪಟೇಲ್ ಬಿರಾದಾರ, ಸಲಿಂ ಮುಲ್ಲಾ ಮಾತನಾಡಿದರು.
ಗೌಡ್ರು ಎಂದರೆ ನಿಮ್ಮಗೇನು ಕೋಡು ಬಂದಿಲ್ಲಾ ಐದು ವರ್ಷಕೋಮ್ಮೆ ಬರುವ ಅಲಬ ದೇವರೇ, ಮನೆ ಮನೆಗೆ ಕಾಲು ಹಿಡಿಯಲು ಹೋಗಬೇಕು. ಹುಚ್ಚಗೌಡ ಟಿಪ್ಪು ಸುಲ್ತಾನರ ಬಗ್ಗೆ ನಿನಗೇನು ಗೋತ್ತು ಸ್ವಂತ ಮಕ್ಕಳನ್ನು ಅಡವಿಟ್ಟು ಹೋರಾಟ ಮಾಡಿದ ಸೂರ ಟೀಪ್ಪು ಸಲ್ತಾನ. ಬಂದೇನಮಾಜ ಶಹಾಪುರ
ನಗರದ ಅಂಬೇಡ್ಕರ್ ವೃತ್ತದಿಂದ ತಹಶೀಲ್ದಾರ್ ಕಛೇರಿಯವರೆಗೆ ಪ್ರತಿಭಟನಾ ರ್ಯಾಲಿ ಬಂದು ತಾಲೂಕಾ ದಂಡಾಧಿಕಾರಿ ನಿಂಗಣ್ಣ ಬಿರಾದಾರ ರವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಪುರಸಭೆ ಉಪಾಧ್ಯಕ್ಷ ಹಾಸೀಂಪೀರ ಆಳಂದ, ಕಾಶಿಮ ಬೇಕಿನಾಳ, ಜುಬೇರ ಮುತ್ತಗಿ, ಶಕೀಲ ವಾಲೀಕಾರ, ಅಕ್ಬರ್ ಮುರಡಿ, ಇರ್ಫಾನ ಆಳಂದ ಸೇರಿದಂತೆ ಮುಸ್ಲಿಂ ಸಮಾಜದ ಯುವಕರು, ಬಾಂಧವರು ಭಾಗವಹಿಸಿದ್ದರು.
Leave a Reply