ಸಿಂದಗಿ : ರಾಜ್ಯಾದ್ಯಂತ ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡಿರುವ ವಿಜಯ ಸಂಕಲ್ಪ ಯಾತ್ರೆಯ ರೋಡ್ ಶೋ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಶಾಸಕ ರಮೇಶ ಭೂಸನೂರ ಹೇಳಿದರು.
ಭೂಸನೂರ ಅವರ ಸ್ವಗೃಹ ದಲ್ಲಿ ಪತ್ರಿಕಾಗೋಷ್ಠಿ ಕುರಿತು ಮಾತನಾಡಿದ ಅವರು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನ ಐಕ್ಯತಾ ಸ್ಥಳವಾದ ನಂದಗಡ ದಿಂದ ಪ್ರಾರಂಭಗೊಂಡ ರಾಜ್ಯದ ಎರಡನೇ ಹಂತದ ವಿಜಯ ಸಂಕಲ್ಪ ಯಾತ್ರೆಯನ್ನು ರಾಜ್ಯದ ರಕ್ಷಣಾ ಸಚಿವರಾದ ರಾಜನಾಥ ಸಿಂಗ್ ಅವರು ಚಾಲನೆ ನೀಡಿದ್ದರು. ಅದರ ಭಾಗವಾಗಿ ನಾಡಿದ್ದು ಶನಿವಾರ ದಿನಾಂಕ 11-03-2023 ರಂದು ಬೆಳ್ಳಿಗೆ ಬೃಹತ್ತ ರೋಡ್ ಶೋ ಗಾಗಿ ವಿಜಯ ಸಂಕಲ್ಪ ಯಾತ್ರೆ ಹಮ್ಮಿಕೋಳ್ಳಲಾಗಿದೆ.
ರೋಡ್ ಶೋ ನಲ್ಲಿ ಕೇಂದ್ರ ಮಂತ್ರಿಗಳಾದ ರಾಜ್ಯದ ಸಹ ಉಸ್ತುವಾರಿಗಳಾದ ಕಿಸನ್ ರಡ್ಡಿ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶಟ್ಟರ, ಮಾಜಿ ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಬೃಹತ್ತ ಕೈಗಾರಿಕಾ ಸಚಿವರಾದ ಮುರಗೇಶ ನಿರಾಣಿ, ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ.ಪಾಟೀಲರು, ಶಶಿಕಲಾ ಜೋಲ್ಲೆ, ಬೈರತಿ ಬಸವರಾಜ, ಶಿವರಾಂ ಹೇಬ್ಬಾರ, ಮಾಜಿ ಸಚಿವರಾದ ರಮೇಶ ಜಾರಕಿಹೋಳಿ ಹಾಗೂ ಶಾಸಕ ಮಿತ್ರರಾದ ಅನೀಲ ಬೇಣಕಿ, ಪಿ.ರಾಜೀವ, ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶೀ ಮಹೇಶ ಟೆಂಗಿನಕಾಯಿ ಸೇರಿದಂತೆ ರಾಜ್ಯದ ಹಲವು ಮುಖಂಡರು ಹಾಗೂ ಜಿಲ್ಲೆಯ ಎಲ್ಲ ಭಾರತೀಯ ಜನತಾ ಪಕ್ಷದ ಶಾಸಕರು ಹಾಗೂ ಸಂಸದರು ಪಕ್ಷದ ಪ್ರಮುಖರು ಭಾಗಿಯಾಗಲಿದ್ದಾರೆ ಆದ ಕಾರಣ ಭಾರತೀಯ ಜನತಾ ಪಕ್ಷ ದ ಕಾರ್ಯಕರ್ತರು ಅಭಿಮಾನಿಗಳು ಹೇಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಶಾಸಕ ರಮೇಶ ಭೂಸನೂರ ಮನವಿ ಮಾಡಿದರು. ಬಸವೇಶ್ವರ ವೃತ್ತದಿಂದ ಪ್ರಾರಂಭವಾಗಿ ವಿವೇಕಾನಂದ ವೃತ್ತದ ಮಾರ್ಗವಾಗಿ ಟಿಪ್ಪು ಸುಲ್ತಾನ ವೃತ್ತದಿಂದ ಡಾ.ಬಿ.ಆರ್.ಅಂಬೇಡ್ಖರ ವೃತ್ತದ ವರೆಗೆ ಬೃಹತ್ತ ರೋಡ್ ಶೋ ನಡೆಯುತ್ತದೆ ಎಂದು ಹೇಳೀದರು. ಎಂ.ಡಿ.ಕುಂಬಾರ ಜಿಲ್ಲಾ ಉಪಾಧ್ಯಕ್ಷರು ಬಿಜೆಪಿ ಇವರು ಮಾತನಾಡಿದರು.
ವಿಡಿಯೋ ಗಾಗಿ ಕೆಳಗಿನ ಲಿಂಕ್ ಉಪಯೋಗಿಸಿ
ಅಲ್ಪಸಂಖ್ಯಾತರು ನನ್ನೊಂದಿಗೆ ಇದ್ದಾರೆ. ಅವರು ನನ್ನಗೆ ಓಟ್ ಹಾಕೀಲವೆಂದು ಬಸನಗೌಡ್ರು ಹೇಳಿದ್ದಾರೆ ಯಾವ ಅರ್ಥಕ್ಕೆ ಹೇಳಿದ್ದಾರೆ ನನ್ನಗೆ ಗೋತ್ತಿಲ್ಲ. ಅಲ್ಪ ಸಂಖ್ಯಾತರು ನನ್ನ ಕೈ ಹಿಡಿದಿದ್ದಾರೆ. ಶಾಸಕ ರಮೇಶ ಭೂಸನೂರ
ಪತ್ರಿಕಾಗೋಷ್ಠಿಯಲ್ಲಿ ವಕ್ತಾರ ರಾಜಶೇಖರ ಪೂಜಾರಿ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಸಿದ್ದು ಪಾಟೀಲ, ಅರವಿಂದ ಕನ್ನೂರ, ಬಿ.ಎಚ್.ಬಿರಾದಾರ, ಚಂದ್ರಶೇಖರ ಅಮಲಿಹಾಳ, ಶಿವಕುಮಾರ ಬಿರಾದಾರ ಇದ್ದರು. ತಾಲೂಕಾ ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಪರಗೊಂಡ ನಿರೂಪಿಸಿ ವಂದಿಸಿದರು.
Leave a Reply