ಪುರಸಭೆಗೆ ಹಣುಮಂತನೇ ಅಧ್ಯಕ್ಷ ? ಅವಿರೋಧ ಆಯ್ಕೆ ಸಾದ್ಯತೆ..

ಸಿಂದಗಿ :   ನಗರದ ಪುರಸಭೆಗೆ ಪೆಬ್ರುವರಿಯ 23 ರಂದು ಅವಿಶ್ವಸ ಗೋತ್ತುವಳಿಯಲ್ಲಿ ಶಾಂತವೀರ ಮನಗೂಳಿ ಗೈರಾಗಿ ವಿಫಲರಾಗಿದ್ದು  ನಾಳೆ ಅಧ್ಯಕ್ಷ ಸ್ಥಾನಕ್ಕೆ  ಚುನಾವಣೆ ನಡೆಯಲಿದೆ.  ಜಿಲ್ಲಾಧಿಕಾರಿಗಳು ತಾಲೂಕಾ ದಂಡಾಧೀಕಾರಿಯನ್ನು ಚುನಾವಣಾಧಿಕಾರಿಯನ್ನಾಗಿ ನೇಮಕ ಮಾಡಿದ್ದಾರೆ. ಸಾಮಾನ್ಯ ಮೀಸಲಾತಿ ಅಡಿಯಲ್ಲಿ ಅಧ್ಯಕ್ಷ ಚುನಾವಣೆ ನಡೆಯಲಿದೆ  ಪುರಸಭೆಯ ಸಭಾ ಭವನದಲ್ಲಿ ಬೆಳ್ಳಿಗೆ 10:30 ರಿಂದ 11:30ರವರೆಗೆ ನಾಮಪತ್ರ ಸಲ್ಲಿಸಬಹುದು. ಬೆಳ್ಳಿಗೆ 11:30ರಿಂದ ಮದ್ಯಾಹ್ನ 12ಗಂಟೆಯವರೆಗೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಮಧ್ಯಾಹ್ನ 12 ರಿಂದ 12:15ರವರೆಗೆ ನಾಮನಿರ್ದೇಶನ ಹಿಂತೆಗೆದುಕೊಳ್ಳಲು ಅವಕಾಶವಿದೆ.

ರಾಜಕೀಯ ಲೆಕ್ಕಾಚಾರ

ಹಲವಾರು ದಿನಗಳಿಂದ ನ್ಯಾಯಾಲಯ ಹಾಗೂ ಪುರಸಭೆಯ  ಅಧ‍್ಯಕ್ಷಗಾದಿ ಬಗ್ಗೆ  ಚರ್ಚೆಯಾಗುತ್ತಿದ್ದು ನಾಳೆ ಅಂತಿಮ  ವಾಗುವ ಸಾದ್ಯತೆ ಇದೆ. ವಿಶ್ವಾಸ ಮತ ಯಾಚನೆಗೆ ನೋಟಿಸ್ ನೀಡಿದ ಸಂದರ್ಭದಲ್ಲಿ 18 ಜನ ಪುರಸಭೆ ಸದಸ್ಯರು ರುಜು ಹಾಕಿ ಅವಿಶ್ವಾಸ ಗೋತ್ತುವಳಿ ಪರ ಮತ ಚಲಾಯಿಸಿ ಶಾಂತವೀರ ಮನಗೂಳಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಿದ್ದರು.  ಇಗ ಒಟ್ಟಾಗಿ ಹದಿನೆಂಟು ಪುರಸಭೆ ಸದಸ್ಯರ ಮುಂದಾಳತ್ವದಲ್ಲಿ  ಹಣಮಂತ ಸುಣಗಾರ ಅಧ್ಯಕ್ಷರಾಗುವುದು ಖಚಿತ ಎಂಬಂತೆ  ಕಂಡು ಬರುತ್ತಿದೆ. ಅಧ್ಯಕ್ಷ ಸ್ಥಾನಕ್ಕೆ ಏಕೈಕ ನಾಮಪತ್ರ ಹಣಮಂತ ಸುಣಗಾರ ಅವರದ್ದಾಗಿರುತ್ತದೆ, ಅವಿರೋಧ ಆಯ್ಕೆ ಆಗುತ್ತದೆ ಎನ್ನಲಾಗಿದೆ. ಕಾಂಗ್ರೇಸ್ ಪಕ್ಷ ಅಧಿಕಾರ ಹಿಡಿಯುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಜನವಾಣಿ

ಕೊನೆಗು ಹಠ ಬಿಡದ ಹಣಮಂತ ಅಧ್ಯಕ್ಷನಾಗುತ್ತಿದ್ದಾನೆ, ಆದರೆ ಸಮಯ ಊಳಿದಿಲ್ಲ ಸ್ವಲ್ಪ ಸಮಯದಲ್ಲಿ ಎನ್ನು ಮಾಡುತ್ತಾನೆ ಎಂಬುದು ನೋಡಬೇಕು. ಮತ್ತು ಇಷ್ಟುದಿನ ಪುರಸಭೆಯ ಹಲವು ವಿಷಯಗಳನ್ನು ಖಾರವಾಗಿ ಟೀಕಿಸಿದ ಹಣಮಂತ ಸುಣಗಾರ ಎನ್ನು ಕ್ರಮ ತೆಗೆದುಕೋಳ್ಳುತ್ತಾರೆ ಎಂಬುದು ಕಾದು ನೋಡಬೇಕು ಎಂದು ಸಿಂದಗಿಯ ಜನರ ಮದ್ಯ ಚರ್ಚೆ ನಡೆಯುತ್ತಿವೆ. ಹಲವರು ಇಷ್ಟು ದಿನ ಆಗದ ಬಿಲ್ ಗಳು ಮಂಜೂರಾಗುತ್ತವೆ ಎಂದು ಕಾದು ಕುಳಿತಿದ್ದಾರೆ ಅವರಿಗೆ ಅನೂಕೂಲವಾಗಬಹುದು ಎಂಬ ಚರ್ಚೆಗಳು  ಶುರು ಆಗಿವೆ.