ನಾಳೆ ಸಾರಂಗಮಠ-ಗಚ್ಚಿನಮಠದಲ್ಲಿ 313 ನೇ ಸದ್ವಿಚಾರಗೋಷ್ಠಿ

ಸಿಂದಗಿ: ಪೂಜ್ಯ ಶ್ರೀ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ ಸಾರಂಗಮಠ-ಗಚ್ಚಿನಮಠದ ವತಿಯಿಂದ  313ನೆಯ ಸದ್ವಿಚಾರಗೋಷ್ಠಿಯನ್ನು ಜ.06 ಹುಣ್ಣಿಮೆ ದಿನದಂದು ಸಾಯಂಕಾಲ 7 ಗಂಟೆಗೆ ಶ್ರೀಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮ ಸಾರಂಗಮಠದ ಡಾ. ಪ್ರಭುಸಾರಂಗದೇವ ಶಿವಾಚಾರ್ಯುರ ದಿವ್ಯ ಸಾನಿಧ್ಯದಲ್ಲಿ ವಹಿಸಿಕೊಳ್ಳಲಿದ್ದಾರೆ. ಹಾಗೂ ಬಸವನ ಬಾಗೇವಾಡಿಯ ಶ್ರೀ ಬಸವೇಶ್ವರ ಕಲಾ, ವಾಣಿಜ್ಯ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ.ಎಸ್.ಟಿ.ಮೇರವಾಡೆ ಉರ್ಧ್ವರೇತ ಟೆಲಿಫಿಲ್ಮ್ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಕತೆ ಪ್ರಶಸ್ತಿ ಪಡೆದ ಉರ್ದ್ವರೇತ ಟೆಲಿಫಿಲ್ಮ್ ಕತೆಗಾರ ಡಾ.ಚನ್ನಪ್ಪ ಕಟ್ಟಿ ಅವರಿಗೆ ಸನ್ಮಾಸಿಲಾಗುವುದು. ವಿಜಯಪುರದ ಮವಿವಿ ಬಿ.ಎಸ್.ಡಬ್ಲ್ಯೂ ಪರೀಕ್ಷೆಯಲ್ಲಿ ರ‍್ಯಾಂಕ ಬಂದ ಶ್ರೀ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯದ ೧ನೆಯ ರ‍್ಯಾಂಕ ಪಡೆದ ನಜ್ಮಾ ಮಣೂರ, ೪ನೆಯ ರ‍್ಯಾಂಕ ಪಡೆದ ಸುಜಾತಾ ನಾವಿ, 9ನೆಯ ರ‍್ಯಾಂಕ ಪಡೆದ ಗಾಯತ್ರಿ ಪೂಜಾರಿ ಅವರನ್ನು ಸನ್ಮಾನಿಸಲಾಗುವುದು. ಕಾರಣ ತಾಲೂಕಿನ ಶ್ರೀಮಠದ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಪೂಜ್ಯ ಶ್ರೀ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನದ ಸಂಚಾಲಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.