ಹೃದಯಘಾತದಿಂದ ಶಿವಾನಂದ ಪಾಟೀಲ ಸೋಮಜಾಳ ನಿಧನ

ಸಿಂದಗಿ: ಸಿಂದಗಿ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಿವಾನಂದ ಪಾಟೀಲ ಸೋಮಜಾಳ ಹೃದಯ ಘಾತದಿಂದ ತಡರಾತ್ರಿ ಮೃತ ಪಟ್ಟಿದ್ದಾರೆ.

ಚುನಾವಣೆ ಸಂಭಂಧ ಜೆಡಿಎಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು ಎರಡು ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಸಿಂದಗಿ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ಮಾಡಿ ಭವಿಷ್ಯದ ನಾಯಕನೆಂದು ಕ್ಷೇತ್ರದ ಜನ ಮಾತನಾಡುತ್ತಿರುವಾಗಲೆ ಆಘಾತ ಉಂಟಾಗಿದೆ.

ಚುನಾವಣೆ ಸಂಭಂಧ ಕೆಲವರ ಮನೆಗೆ ಭೇಟಿಯ ಸಂದರ್ಭದಲ್ಲಿ ಹೃದಯಘಾತ ವಾಗಿದ್ದು ಸಮೀಪದ ಆಸ್ಪತ್ರೆಗೆ ಕರೆದೊಯುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮ ಸೋಮಜಾಳ ಗ್ರಾಮಕ್ಕೆ ಸ್ಥಳಾಂತರಿಸಿದ್ದಾರೆ.

ಮಡದಿ, ಹಾಗೂ ಎರಡು ಮಕ್ಕಳು ಮತ್ತು ಅಪಾರ ಬಂದುಗಳು, ಜೆಡಿಎಸ್ ಕಾರ್ಯಕರ್ತರು, ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.