ಸಿಂದಗಿ : ಅಂದು ಬಿಜೆಪಿ ಕಟ್ಟಿ ಬೆಳಸಿದ ರಾಜ್ಯದ ಮಾಜಿ ಮುಖ್ಯಮಂತ್ರಿ ಜಗದೀಶ ಶಟ್ಟರ್ ಹಾಗೂ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಾಂಗ್ರೇಸ್ ಸೇರ್ಪಡೆಯಾಗಿದ್ದಾರೆ. ಬಿಜೆಪಿಯವರು ದುಡ್ಡಿನ ಹೊಳೆ ಹರಿಸಿದ ಕಾರಣ ಉಪ ಚುನಾವಣೆಯಲ್ಲಿ ಭೂಸನೂರ ಜಯಗಳಿಸಿದ್ದಾರೆ ಎಂದು ಬಸವನ ಬಾಗೇವಾಡಿ ಕ್ಷೇತ್ರದ ಶಾಸಕ ಶಿವಾನಂದ ಪಾಟೀಲ ಹೇಳಿದರು.
ಮಾಂಗಲ್ಯ ಭವನದಲ್ಲಿ ನಡೆದ ಕಾಂಗ್ರೇಸ್ ಪ್ರಚಾರ ಸಭೆಯ ಕಾರ್ಯಕ್ರಮ ಕುರಿತು ಮಾತನಾಡಿದ ಅವರು ಮುಖ್ಯಮಂತ್ರಿಗಳು ತಮ್ಮ ಸಾಧನೆ ಮೇಲೆ ಮತಗಳನ್ನು ಕೇಳಬೇಕು ವಿನಃ ಚಿತ್ರ ನಟರನ್ನು ಮುಂದಿಟ್ಟುಕೊಂಡು ಅಲ್ಲ. ಇಂದು ಮುಖ್ಯಮಂತ್ರಿ ಬಸವರಾಜ ಬೋಮ್ಮಾಯಿ ನಾಮಪತ್ರ ಸಲ್ಲಿಕೆಗೆ ಸುದೀಪರನ್ನು ಕರೆತರುವ ಪರಿಸ್ಥಿತಿ ಬಿಜೆಪಿಗೆ ಹಾಗೂ ಬೊಮ್ಮಾಯಿಗೆ ಬರಬರಾದಿತ್ತು.
ಬಿಜೆಪಿಯ ರಾಜ್ಯ ಮತ್ತು ಕೇಂದ್ರ ನಾಯಕರಿಗೆ ಕೇವಲ ನಮ್ಮ ರಾಜ್ಯದ ಧಿಮಂತ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಜ್ಯ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ಸರಿಸಾಟಿ. ಈ ಗೆಲವು ಕೇವಲ ಅಶೋಕ ಮನಗೂಳಿ ಗೆಲವು ಆಗಿರುವುದಿಲ್ಲ ರಾಜ್ಯದ ತುಂಬೇಲ್ಲ ಕಾಂಗ್ರೇಸ್ ಜಯಬೇರಿ ಬಾರಿಸಲಿದೆ ಸಿಂದಗಿ ಕ್ಷೇತ್ರದಲ್ಲಿ ಉಪ ಚುನಾವಣೆಯಲ್ಲಿಯು ಆಲಮೇಲ ಮುನ್ನಡೆ ಜನತೆ ಮುನ್ನಡೆ ನೀಡಿದ್ದಾರೆ ಅಲ್ಲಿಂದಲೆ ಗೆಲುವು ಪ್ರಾರಂಭವಾಗುತ್ತದೆ ಎಂದರು.
ಉಪ ಚುನಾವಣೆಯಲ್ಲಿ ಕಾಂಗ್ರೇಸ್ ಹಾಗೂ ಆವಾಗಲೆ ಪಕ್ಷಕೆ ಬಂದಿದ ಮನಗೂಳಿ ಅವರ ನಡುವೆ ಹೊಂದಾಣಿಕೆಯ ಕೊರತೆ ಇತ್ತು. ಇಂದು 16 ತಿಂಗಳ ಅವಧಿಯಲ್ಲಿ ಜೊತೆಗೂಡಿ ಒಂದಾಗಿ ಬಂದಿದೇವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗಕ್ಕೆ ಜನಸಂಖ್ಯಾ ಅನುಗುಣವಾಗಿ ಬಜಟ್ ಮೀಸಲಾಗಿಟ್ಟಿದು ಕಾಂಗ್ರೇಸ್ ಸರಕಾರ. ಇದುವರೆಗೂ ರಾಜ್ಯದಲ್ಲಿ ಒಂದೇ ಒಂದು ಮನೆ ಕಟ್ಟಲು ಡಬಲ್ ಇಂಜನ್ ಸರಕಾರಕ್ಕೆ ಆಗಿಲ್ಲ. ಡಬಲ್ ಎಂಜಿನ್ ಕೆಟ್ಟುಹೋಗಿದೆ ಮೊಡಕಾ ಅಂಗಡಿಗೆ ಈ ಬಾರಿ ಹಾಕಬೇಕಾಗಿದೆ. ಮೈಮರೆತು ಅಥವಾ ಗೇಲುವು ನಮ್ಮದಾಗಿದೆ ಎಂಬ ಅಥಿ ವಿಶ್ವಾಸ ಭಾವಿಸಿದರು ನಮ್ಮಗೆ ಸೋಲು ತಪ್ಪಿದಲ್ಲ. ಆದರಿಂದ 24 ಗಂಟೆಯು ಉಳಿದ 12 ದಿನಗಳ ಕಾಲ ದುಡಿಯಿರಿ ಎಂದು ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ ತಿಳಿಸಿದರು.
ನಂತರ ಮಾತನಾಡಿದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಉಪ ಚುನಾವಣೆಯ ಸೋಲಿನ ನಂತರ ನಾನು ಆತ್ಮಾವಲೋಕನ ಸಭೆಗೆ ಆಗಮಿಸಿದೆ. ಅಲ್ಲಿ ಬಂದಿರುವ ಕಾರ್ಯಕರ್ತರ ಮನೋಭಾವನೆ ನಾನು ಅಂದೆ ಕಂಡಿದೆ, ಮುಂದಿನ ಸಾರ್ವರ್ತಿಕ ಚುನಾವಣೆಗೆ ಸದೃಡವಾಗಿ ನಾವು ಹೋರಾಡುವ ತುಡಿತದಲ್ಲಿ ಕಾರ್ಯಕರ್ತರು ಇದ್ದರು. ಇಂದು ಶ್ರಮವಹಿಸಿ ನಾವು ದುಡಿಯಬೇಕಿದೆ ಎಂದರು.
ರಾಹುಲ್ ಗಾಂಧೀ ಸೂಚನೆಯಂತೆ ಇಂದು ಒಗ್ಗಟಾಗಿ ನಿಮ್ಮ ಬಳಿ ಬಂದಿದೇವೆ ಇಂದು ಅನ್ ಕಂಡಿಷನಲ್ ಎಮರ್ಜನ್ಸಿ ಯಲ್ಲಿ ರಾಜ್ಯವನ್ನು ಇಡಲಾಗಿದೆ. ಅಶೋಕ ಮನಗೂಳಿ ತಪ್ಪು ಮಾಡಿದ್ದರೆ ಅವರ ಪರವಾಗಿ ನಾನು ಕ್ಷಮೆ ಕೇಳುತ್ತೆನೆ ಅವರನ್ನು ಗೇಲ್ಲಿಸಿ ನಮ್ಮ ಕೈ ಬಲಪಡಿಸಿ ಎಂದು ವಿನಂತಿಸಿದರು.
ಕಾಂಗ್ರೇಸ್ ಅಭ್ಯರ್ಥಿ ಅಶೋಕ ಮನಗೂಳಿ ಮಾತನಾಡಿ ದುಡ್ಡಿನ ಬಲ ಮತ್ತು ಕುತಂತ್ರ ರಾಜಕಾರಣದಿಂದ ನಮ್ಮಗೆ ಉಪ ಚುನಾವಣೆಯಲ್ಲಿ ಸೋಲಾಗಿದೆ. ಸೋಲಿನ ಮರು ದಿನದಿಂದ ಕಾಂಗ್ರೇಸ್ ಕೆಳ ಮಟ್ಟದಿಂದ ಸಂಘಟಿಸಲು ಹಿರಿಯರ ಮಾರ್ಗದರ್ಶನದೊಂದಿಗೆ ಪ್ರಾರಂಭಿಸಿದೇನೆ. ಇದೆ ಸಂಧರ್ಭದಲ್ಲಿ ಹಿಂದಿನ ಸಮ್ಮಿಶ್ರ ಸರಕಾರದಲ್ಲಿ ಸಿಂದಗಿ ಕ್ಷೇತ್ರಕ್ಕೆ ಆಗಿನ ಸಚಿವರಾದ ದಿ. ಎಂ.ಸಿ ಮನಗೂಳಿ ಅವರು ನೀಡಿದ ಶಾಶ್ವತ ಯೋಜನೆಗಳ ಬಗ್ಗೆ ಸ್ಮರಿಸಿದರು.
ಆಲಮೇಲದ ತೋಟಗಾರಿಕೆ ಕಾಲೇಜು ಹಾಗೂ ಕಡಣಿ ಬ್ರಿಡ್ಜ್ ನಮ್ಮ ತಂದೆಯವರ ಕಾಲದಲ್ಲಿಯೇ ಮಂಜೂರಾಗಿದ್ದು, ಉಪ ಚುನಾವಣೆಯಲ್ಲಿ ಆಲಮೇಲ ತಾಲೂಕಿನಲ್ಲಿ ನಿಂತು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಎರಡು ಯೋಜನೆ ಖಂಡಿತವಾಗಿ ಮಾಡಿಕೊಡುವ ಭರವಸೆ ನೀಡಿದರು ಸಹಿತ ಇಂದಿನ ಕ್ಷೇತ್ರದ ಶಾಸಕರು ಅವೆರಡು ಕೆಲಸ ಆದರೆ ದಿ.ಎಂ.ಸಿ.ಮನಗೂಳಿ ಅವರ ಹೆಸರು ಅಜರಾಮರವಾಗಿರುತ್ತದೆ ಎಂಬ ಕಾರಣಕ್ಕೆ ಸ್ಥಳಿಯ ಶಾಸಕರು ಪ್ರಯತ್ನವೇ ಮಾಡುಲಿಲ್ಲಾ ಎಂದು ಆರೋಪಿಸಿದರು.
ಇಂದು ಬೂಸನೂರ ಅವರು ಸುಳ್ಳು ಮತ್ತು ವಂಚನೆಯಿಂದ ಮತ ಕೇಳುತ್ತಿದ್ದಾರೆ 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ನಾನು ಮಾತ್ರ ಅಭ್ಯರ್ಥಿ ಅಲ್ಲ ಕ್ಷೇತ್ರದ ನಾಯಕರು, ಮುಖಂಡರು, ಕಾರ್ಯಕರ್ತರು ಎಲ್ಲರು ಅಭ್ಯರ್ಥಿಗಳು ನನ್ನಗೆ ಆಶೀರ್ವಾದಿಸಿ ನನ್ನ ಕೈ ಬಲ ಪಡಿಸಿ ಎಂದು ಕೈ ಮುಗಿದು ವಿನಂತಿಸಿದರು. ಬ್ಲಾಕ್ ಕಾಂಗ್ರೇಸ್ ಜಿಲ್ಲಾಧ್ಯಕ್ಷರಾದ ರಾಜು ಆಲಗೂರು ಮಾತನಾಡಿದರು.
ಇದೆ ಸಂದಂರ್ಭದಲಿ ಮಲ್ಲಣ್ಣ ಸಾಲಿ, ಶರಣಪ್ಪ ವಾರದ, ಮೈಬೂಬ ತಾಂಬೋಳಿ, ರಾಕೇಶ ಕಲ್ಲೂರ, , ಖತಿಬ ಮಲ್ಲಿಕ, ಎಸ್.ಎಂ.ಪಾಟೀಲ ಗಣಿಯಾರ, ಪುರಸಭೆ ಅಧ್ಯಕ್ಷ ಹಣಮಂತ ಸುಣಗಾರ, ಚನ್ನು ವಾರದ, ರಾಜಶೇಖರ ಕೂಚಬಾಳ, ಅಶೋಕ ಸುಲ್ಪಿ, ಪರಸುರಾಮ ಕಾಂಬಳೆ, ರಮೇಶ ನಡುವಿನಕೇರಿ, ಇರ್ಪಾನ್ ಭಾಗವಾನ, ಮಾನಂದಾ ಬಮ್ಮಣಿ, ಜಯಶ್ರೀ ಹದನೂರ ಉಪಸ್ಥಿತರಿದ್ದರು ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ವಿಠ್ಠಲ ಕೋಳುರ ಸ್ವಾಗತಿಸಿದರು.
ಸಭೆಗೆ ಬಂದವರು ಮನಸ್ಸಿನಿಂದ ಕೆಲಸ ಮಾಡಿದರೆ ಕಂಡಿತವಾಗಲೂ ಅಶೋಕ ಮನಗೂಳಿ ಗೇಲ್ಲುತ್ತಾರೆ – ಶಿವಾನಂದ ಪಾಟೀಲ ಶಾಸಕರು ಬಾಗೇವಾಡಿ.
Leave a Reply