ಸಿಗರೇಟ್ ಕಳ್ಳನಿಗೆ ರಾಜಸ್ಥಾನದಲ್ಲಿ ಬಂಧಿಸಿದ ರಾಜ್ಯ ಪೊಲೀಸ್

ಸಿಂದಗಿ ಪಟ್ಟಣದ ಶಾಂತವೀರಪ್ಪ ವಾರದ ಇವರ ಅಂಗಡಿ ಬೀಗ ಮುರಿದು ಸಿಗರೇಟ್ ಕಳ್ಳತನ ಮಾಡಿದ ಪ್ರಕರಣ

ಸಿಂದಗಿ: ಸಿಂದಗಿ ಪೊಲೀಸ್ ಠಾಣೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಪೋಲಿಸ್ ಅಧೀಕ್ಷಕ ಋಷಿಕೇಶ ಸೋನಾವಣೆ 2023ರ ಡಿಸೆಂಬರ್ 24ರ ರಾತ್ರಿ ನಲವತ್ತು ಲಕ್ಷದ ಎಂಬತ್ತೇಳು ಸಾವಿರ ಮೌಲ್ಯದ ಸಿಗರೇಟ್ ಕಳ್ಳತನದ ಪ್ರಕರಣ ದಾಖಲಾಗಿತ್ತು. 

ಸಿಂದಗಿಯ ಸಿ.ಪಿ.ಐ ಡಿ.ಹುಲಗಪ್ಪ ಹಾಗೂ ಪಿ.ಎಸ್.ಐ ಭೀಮಪ್ಪ ರಬಕವಿ ಹಾಗೂ ಅರವಿಂದ ಅಂಗಡಿ ಇವರ ತಂಡ ಕಟ್ಟಿಕೊಂಡು ಆರೋಪಿ ಬಂಧಿಸಲು ಯಶಸ್ವಿಯಾಗಿದ್ದಾರೆ. ಆರೋಪಿ ಅಂತರರಾಜ್ಯ ಕಳ್ಳರ ಗ್ಯಾಂಗಿನವರಾಗಿರುವ ಖಚಿತ ಮಾಹಿತಿ ಪಡೆದ ತಂಡ ಆರೋಪಿ ಜಿತೇಂದ್ರಕುಮಾರ ಗೆಹ್ಲೋತ್ ಗೆ ರಾಜಸ್ಥಾನದಲ್ಲಿ ಬಂಧಿಸಿದ್ದಾರೆ. 

ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾಗ ಪ್ರಕಾಶ ದೀಪರಾಮ ಹಾಗೂ ಪಂಜಾಬಿನ ಗುರುಪ್ರೀತಸಿಂಗ ಮೂವರು ಸೇರಿ ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡು ಬೆಂಗಳೂರಿನಲ್ಲಿ ಸಿಗರೇಟ್ ಮಾರಾಟ ಮಾಡಲಾಗಿದೆ ಎಂದು ಹೇಳಿದ್ದಾನೆ.

ಅವನಿಗೆ ದಸಗೀರ ನಡೆಸಿದಾಗ ಸಿಗರೇಟ್ ಖರೀದಿಯಿಂದ ಬಂದು ಮೂವತ್ತೇಳು ಲಕ್ಷ ರೂಪಾಯಿಗಳನ್ನು ಹಾಗೂ ಕಳತನ್ನಕ್ಕೆ ಬಳಿಸಿದ ಮಾರುತಿ ಸುಜುಕಿ ಇಕೋ ವ್ಯಾನ್ ವಶಕ್ಕೆ ಪಡೆಯಲಾಗಿದೆ.

ಪರಾರಿಯಾಗಿರುವ ಇನ್ನೀಬ್ಬರು ಆರೋಪಿಗಳನ್ನು ಬಂಧಿಸಲು ಶೋಧಕಾರ್ಯ ಮುಂದುವರೆದಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮನಗೌಡ ಹಟ್ಟಿ, ಸಿ.ಪಿ.ಆಯ್. ಡಿ.ಹುಲಗಪ್ಪ, ಪಿ.ಎಸ್.ಐ ಭೀಮಪ್ಪ ರಬಕವಿ, ಅರವಿಂದ ಅಂಗಡಿ ಪೇದೆಗಳಾದ ಎಸ್.ಆರ್.ಚವ್ಹಾಣ, ಆರ್.ಎಲ್.ಕಟ್ಟಿಮನಿ, ಪಿ.ಕೆ ನಾಗರಾಳ, ಎಸ್.ಎಸ್.ಕೊಂಡಿ ಸೇರಿದಂತೆ ಹಲವು ಸಿಬ್ಬಂದಿಗಳು ಉಪಸ್ಥಿತರಿದ್ದರು.

 

ಸಿಪಿಐ ಡಿ.ಹುಲಗಪ್ಪ ಇವರ ತಂಡದ ಕಾರ್ಯಕ್ಕೆ ಇಲಾಖೆ ಶ್ಲಾಘನೀಯ ವ್ಯಕ್ತ ಪಡಿಸುತ್ತದೆ, ತಂಡಕ್ಕೆ ಬಹುಮಾನ ಘೋಷಿಸಲಾಗಿದೆ.

– ಋಷಿಕೇಶ ಸೋನಾವಣೆ              ಪೋಲಿಸ್ ಅಧೀಕ್ಷಕರು ವಿಜಯಪುರ