ಸಿಂದಗಿ ಶೈಕ್ಷಣಿಕ ವಿಧ್ಯಾಕಾಶಿ : ಭೂಸನೂರ

ವರದಿ ರಾಕೇಶ ಕಂಟಿಗೊಂಡ

ಸಿಂದಗಿ: ಆಧುನಿಕ ಜಗತ್ತಿನಲ್ಲಿ ಸಾಗಬೇಕಾದರೆ ಇಂದಿನ ಮಕ್ಕಳಿಗೆ ವಿಧ್ಯೆ ಅತಿ ಅವಶ್ಯಕವಾಗಿದೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.

ಪಟ್ಟಣದ ಇಂಡಸ್ಟ್ರಿಯಲ್ ನಗರದ ಪಕ್ಕದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಯೋಜನೆಯ ಅಡಿಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ವತಿಯಿಂದ ಸರಕಾರಿ ಮೇಟ್ರಿಕ್ ನಂತರದ ಬಾಲಕರ ವಸತಿ ನಿಲಯ (ಪರಿಶಿಷ್ಟ ಜಾತಿ) ಭೂಮಿಪೂಜೆ ನೆರವೇರಿಸಿ ಮಾತನಾಡಿದರು.


ಸಿಂದಗಿ ತಾಲೂಕು ಶೈಕ್ಷಣಿಕ ಕ್ಷೇತ್ರದ ಕೇಂದ್ರವಾಗಿದೆ. ಸುಮಾರು 5 ತಾಲೂಕಿನಿಂದ ಪ್ರತಿ ವರ್ಷ ಸಾವಿರಾರು ವಿಧ್ಯಾರ್ಥಿಗಳು ಬರುತ್ತಾರೆ. ಈ ಕಟ್ಟಡ 8 ತಿಂಗಳ ಹಿಂದೆಯೇ ಆಗಬೇಕಿತ್ತು. ಜಾಗದ ಅನಾನುಕೂಲ ಇರುವುದರಿಂದ ಮತ್ತೇ ಕಂದಾಯ ಇಲಾಖೆಯಿಂದ ಹೊಸ ವಿನ್ಯಾಸದೊಂದಿಗೆ 616 ಲಕ್ಷ ರೂ ಗಳಲ್ಲಿ ಮಂಜೂರು ಮಾಡಿಸಲಾಯಿತು. ಈ  ಕಟ್ಟಡ ಹೊಸ ವಿನ್ಯಾಸದೊಂದಿಗೆ 150 ಮಕ್ಕಳಿಗೆ ಸ್ಥಳವಕಾಶಕ್ಕೆ ಅನೂಕೂಲವಾಗಿದೆ. ಕಟ್ಟಡ ಸುಸಜ್ಜಿತವಾಗಿ ನಿರ್ಮಿಸಬೇಕು ಎಂದು ಗುತ್ತಿಗೆದಾರರ ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.

ಪುರಸಭೆ ಅಧ್ಯಕ್ಷ ಹಣಮಂತ ಸುಣಗಾರ ಮಾತನಾಡಿ, ಈಗಿನ ಪ.ಜಾ / ಪ.ಪಂ ಮತ್ತು ಅಲ್ಪಸಂಖ್ಯಾತರ ವಸತಿ ನಿಲಯಗಳಿಗೆ ಶ್ರಮಿಸಿದ ಶಾಸಕರಿಗೆ ಅಭಿನಂದನೆ ಸಲ್ಲಿಸಿದರು.

‌ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ಕಾಮಗಾರಿಯ ಭೂಮಿಪೂಜೆಯ  ಅಸ್ತವ್ಯಸ್ತಕ್ಕೆ ಅಧಿಕಾರಿಗಳಿಗೆ ಶಾಸಕ ಭೂಸನೂರ ತರಾಟೆ ತೆಗೆದುಕೊಂಡರು.

ಇದೇ ವೇಳೆ ಪುರಸಭೆ ಸದಸ್ಯರಾದ ಶರಣಗೌಡ ಪಾಟೀಲ, ರಾಜಣ್ಣ ನಾರಾಯಣಕರ, ಶರಣಪ್ಪ ಸುಲ್ಪಿ , ಬಿಜೆಪಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಕ್ರೈಸ್ ಅಧಿಕಾರಿ ಬಸವಾರಜ ಬುರಲಿ, ಸಮಾಜ ಕಲ್ಯಾಣ ಅಧಿಕಾರಿ ನೀಲಮ್ಮ ಬೂಸಗೊಂಡ, ಗುತ್ತಿಗೆದಾರ ಸೋಮನಗೌಡ ಬಿರಾದಾರ ಮಲ್ಲಿಕಾರ್ಜುನ ಪಡಶೆಟ್ಟಿ, ಚಂದ್ರಶೇಖರ ಅಮಲಿಹಾಳ ಇದ್ದರು.

 


Comments

Leave a Reply

Your email address will not be published. Required fields are marked *