ಸಿಂದಗಿ : ಜನೇವರಿ 21 ರಂದು ಸಿಂದಗಿ ವಿಧಾನಸಭಾ ಮತಕ್ಷೇತ್ರದಿಂದ ರಾಜ್ಯಕ್ಕೆ ವಿಜಯ ಸಂಕಲ್ಪ ಯಾತ್ರೆ ಪ್ರಾರಂಭಿಸಲಾಗುವದು. ಯಾತ್ರೆಯಲ್ಲಿ ಕೇಂದ್ರ ಸರಕಾರದ ಹಾಗೂ ರಾಜ್ಯ ಸರಕಾರದ ಸಾಧನೆ ಹಾಗೂ ಸಂಸದರು, ಶಾಸಕರು ಮಾಡಿರುವ ಅಭಿವೃದ್ಧಿ ಕಾರ್ಯಕ್ರಮಗಳ ಕರಪತ್ರ, ಗೋಡೆ ಬರಹ, ಸ್ಟಿಕರ್ ಗಳು ಮನೆ-ಮನೆಗೆ ತಲುಪಿಸಲಾಗುವುದು ಎಂದರು.
ಸಿಂದಗಿ ಮತಕ್ಷೇತ್ರದಲ್ಲಿ 271 ಬೂತ್ ಗಳಲ್ಲಿ 180 ಬೂತ್ ಗಳಲ್ಲಿ ಬೂತ್ ವಿಜಯ ಅಭಿಯಾನ ಮಾಡಲಾಗಿದೆ ಹಾಗೂ ವಿಜಯಪುರ ಜಿಲ್ಲೆಯಲ್ಲಿ ಪೂಜ್ಯ ಶ್ರೀ ಸಿದೇಶ್ವರ ಸ್ವಾಮಿಜಿಗಳ ಅಗಲಿಕೆಯ ಕಾರಣ ಗಳಿಂದ ಜಿಲ್ಲೆಯಲ್ಲಿ ಬೂತ್ ವಿಜಯ ಅಭಿಯಾನ ಕುಂಠಿತಗೊಂಡಿತ್ತು ಮತ್ತೆ ಪ್ರಾರಂಭಿಸಲಾಗಿದೆ . ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡಾ ಅವರು ರಾಜ್ಯದಲ್ಲಿ ವಿಜಯ ಸಂಕಲ್ಪ ಯಾತ್ರೆ ಇದೆ ಜನೇವರಿ 21 ರಂದು ಸಿಂದಗಿಯಿಂದ ಪ್ರಾರಂಭಿಸಲಾಗುವುದು.
ಸುಮಾರು 50000 ಜನರು ಸೇರಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ ವಿವರ ಮಾಹಿತಿಗಳನ್ನು ಮುಂದಿನ ದಿಗಳಲ್ಲಿ ಮಾಹಿತಿ ನೀಡಲಾಗುವುದೆಂದು ರಾಜ್ಯ ಪ್ರದಾನ ಕಾರ್ಯದರ್ಶಿ ಸಿದ್ದರಾಜು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಿಂದಗಿ ಶಾಸಕ ರಮೇಶ ಭೂಸನೂರ ದೇ,ಹೀಪ್ಪರಗಿ ಶಾಸಕ ಸೋಮನಗೌಡ ಪಾಟೀಲ, ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಚಂದ್ರಶೇಖರ ಕವಟಗಿ, ಶಿವರುದ್ರ ಬಾಗಲಕೋಟ, ಮಂಡಲ ಅಧ್ಯಕ್ಷ ಈರಣ್ಣ ರಾವೂರ ಇದ್ದರು.
Leave a Reply