ಸಾಲಭಾದೆ ಸತೀಶ್ ತಾತೋಡೆ ನೇಣಿಗೆ ಶರಣು

ಇಸ್ಪೀಟ್  ದುಶ್ಚಟಕ್ಕೆ  ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗೆ ವಿಜಯಪುರ ಹೈವೆ ಯಲ್ಲಿರುವ ತ್ರಿಶೂಲ ದಾಭಾದಲ್ಲಿ ನಡೆದಿದೆ.

ಸಿಂದಗಿ : ಎಗ್ಗಿಲ್ಲದೆ ನಡೆಯುತ್ತಿರುವ ಇಸ್ಪೀಟ್  ಅಡ್ಡೆಗಳಿಂದ ಮತ್ತೋಂದು ಆತ್ಮಹತ್ಯೆ ಪ್ರಕರಣ ನಡೆದಿದೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ವಿಜಯಪುರ ಹೈವೆ ಯಲ್ಲಿರುವ ತ್ರಿಶೂಲ ದಾಬಾ ದಲ್ಲಿ ಬೆಳಗಿನ ಜಾವ ಸತೀಶ್ ಸಿದ್ದೋಬಾ ತಾತೋಡೆ ( ವಯಸ್ಸು 44 )  ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಥಳದಲ್ಲಿದ್ದ ಮೃತ್ತನ ತಂದೆ ಸಾಲಗಾರರ ಕಿರುಕುಳಕ್ಕೆ ನನ್ನ ಮಗ ಸತ್ತಾ,  ನಿನ್ನೇ 7 ಎಕರೆ ಜಮೀನು ಮಾರಿ ಸಾಲ ಕೊಟಾನ. ಒಂದು ಕೋಟಿ ಹತ್ತಿರ  ಸಾಲ ಮಾಡಿಕೊಂಡಿದ್ದ ಇನ್ನು ಕೆಲವರಿಗೆ ಸಾಲ ಕೋಡಬೇಕು ಅಂತಿದ್ದಾ ಸಾಲಗಾರರ ಮನೆಗೆ ಬರುತ್ತಿರುವುದು ನೋಡಿ ಇವತ್ತೆ ಊರಲ ಹಾಕೋಂಡಾನ ಎಂದು ಮಗನ ಕಳೆದುಕೊಂಡ ತಂದೆ ಅಳಲು ತೊಡಿಕೊಂಡರು. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಬಂದು ಪರಿಶೀಲನೆ ನಡೆಸುತ್ತಿದ್ದಾರೆ. 

ಇನ್ನೇಷ್ಟು   ಜೀವಗಳ ಬಲಿಯಾಗಬೇಕು ?

ಇಂತಹ ದುಶ್ಚಟಗಳ ಕಡಿವಾಣ ಹಾಕಬೇಕಿದ ಪೊಲೀಸ್ ಇಲಾಖೆಯೆ ಸುಮ್ಮನಾದಾಗ ಯಾರು ಏನು ಮಾಡುವರು ಎಂಬಂತಾಗಿದೆ.  ದಿನಕ್ಕೊಂದು ಇಸ್ಪೀಟ್ ಅಡ್ಡೆಗಳು ಹುಟ್ಟುತ್ತಿವೆ.  ಅದಕ್ಕೆ ಕಡಿವಾಣ ಹಾಕುವವರಿಲ್ಲಿ  ಇದರಿಂದ ಇನ್ನೇಷ್ಟು ಜೀವಗಳು ಹೋಗವುದು ನೋಡಬೇಕೋ ಎಂದು ಜನರು ಆಕ್ರೋಶ ಹೋರ ಹಾಕಲಾಗದೆ ಅಲ್ಲಲೆ ಗುಸು-ಗುಸು ಮಾತಾನಡುತ್ತಿರುವುದು ಕಂಡುಬಂತು. 

 

 


Comments

Leave a Reply

Your email address will not be published. Required fields are marked *