ತಾಲೂಕು ಪಂಚಾಯತ ಸಭಾ ಭವನದಲ್ಲಿ ಕರ್ನಾಟಕ ಲೋಕಾಯುಕ್ತ ವಿಜಯಪುರ ಇವರಿಂದ ಸಾರ್ವಜನಿಕ ಅಹವಾಲು ಸ್ವೀಕಾರ ಮತ್ತು ಅಧಿಕಾರಿಗಳ ಸಭೆ ಜರುಗಿತು.
ಸಿಂದಗಿ : ವಿಜಯಪುರ ಜಿಲ್ಲೆಯಲ್ಲಿ ಅತ್ಯಂತ ದೂರುಗಳು ಸಿಂದಗಿ ತಾಲ್ಲೂಕಿನಿಂದ ಬರುತ್ತಿವೆ, ಇಲ್ಲಿನ ಅಧಿಕಾರಿಗಳಿಗೂ ಜನಸಾಮನ್ಯರಿಗು ಯಾವುದೇ ರೀತಿಯಾದ ಸಂಭಂಧಗಳಿಲ್ಲ ಎಂಬಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಎನ್ನುವುದೇ ಹೇಚ್ಚಾಗಿದೆ ಎಂದು ಲೋಕಾಯುಕ್ತ ಡಿ.ವಾಯ್.ಎಸ್.ಪಿ ಅರುಣ ನಾಯಕ್ ಹೇಳಿದರು.
ಅಧಿಕಾರಿಗಳ ಸಭೆ ನಡೆಸಿದ ಅವರು ಅಕ್ಷರ ದಾಸೋಹದ ಆಹಾರ ಧಾನ್ಯಗಳು ವಾಹನ ಸಂಚಾರ ಬಿಸಿಯೂಟಕ್ಕೆ ತಲುಪಬೇಕಾದ ಶಾಲೆ ಬಿಟ್ಟು ಎಲ್ಲಲ್ಲೋ ತಿರುಗುತ್ತಿರುತ್ತವೆ ಅದನ್ನು ಹಿಡಿದು ಒಂದಾದರು ದೂರು ದಾಖಲು ಮಾಡಿ ಎಂದು ಪಿ.ಎಸ್.ಆಯ್ ಸೊಮೇಶ ಗೇಜ್ಜಿ ಅವರಿಗೆ ಸೂಚಿಸಿದರು.
ಕೃಷಿ ಇಲಾಖೆಯ ಎಚ್.ವಾಯ್.ಸಿಂಗೆಗೋಳ ಮಾಹಿತಿ ನೀಡುತ್ತಿದಂತೆ ಆಘಾತಕಾರಿ ಗೋಬ್ಬರಗಳು ಸಿಕ್ಕರೆ ಕೇವಲ ಸಿಕ್ಕಿರುವ ದಾಸ್ತಾನು ಮೇಲೆ ದೂರು ಮಾಡುತ್ತಿರಿ, ಅದನ್ನು ತಯಾರಿಸಿದವರ ಮೇಲೆ ಕ್ರಮಕ್ಕೆ ಸಂಬಂಧಪಟ್ಟ ಜಿಲ್ಲಾಧೀಕಾರಿಗಳಿಗೆ ಪತ್ರ ಬರೆಯಿರಿ ಕೇವಲ ಇಲ್ಲಿರುವವರ ಮೇಲೆ ದೂರು ದಾಖಲು ಮಾಡಿದರೆ ತಯಾರಕರಿಗೆ ಯಾವುದೇ ಹಾನಿಯಾಗಲ್ಲ ಎಂದು ತಿಳಿಸಿದರು.
ಸಮಯ ಮೀರಿ ವೈನ್ ಶಾಪ್ ಗಳು ಪ್ರಾರಂಭ ವಿರುತ್ತವೆ ಅವರ ವಿರುದ್ದ ಕೇಸ್ ದಾಖಲೆಮಾಡಿ ರಾತ್ರಿ ಹೋತ್ತು ನೀವು ಗಸ್ತು ತಿರಾಗಾಡಬೇಕು ನನ್ನ ಗಮನಕ್ಕೆ ಸಮಯ ಮೀರಿ ಒಂದು ನಿಮಿಷವು ವೈನ್ ಶಾಪ್ ಪ್ರಾರಂಭವಿರುವುದು ಕಂಡುಂಬಂದರೆ ಸರಿ ಇರಲ್ಲ ಎಲ್ಲವು ಪೊಲೀಸರೆ ಮಾಡಲಿ ಎಂಬುವುದು ಬೀಡಿ ಎಂದು ಅಬಕಾರಿ ಸಿ.ಪಿ.ಆಯ್ ಆರತಿ ಖೈನೂರ ಅವರಿಗೆ ಎಚ್ಚರಿಕೆ ನೀಡಿದರು.
ಉಪನೊಂದಣಾಧಿಕಾರಿಗಳ ಕಛೇರಿ ಇಂದ ಪ್ರತಿನಿತ್ಯ 1 ರಿಂದ 2 ದೂರುಗಳು ಕಡ್ಡಾಯವಾಗಿ ಬರುತ್ತವೆ ನಿಮ್ಮ ಮತ್ತು ಜನರ ಮದ್ಯ ಏಜೆಂಟರೇ ಇರುವುದಾದರೇ ಹೇಗೆ? ನಿಮ್ಮ ಕಾರ್ಯಾಲಯದಲ್ಲಿರುವ ಪರವಾನಗಿ ಹೊಂದಿದ ಏಜೆಂಟ್ ರನ್ನು ಎಚ್ಚರಿಕೆಯಿಂದ ಇರಲು ತಿಳಿಸಿ ಇಲ್ಲವೇ ಪಶ್ಚಾತಾಪ ಪಡುತ್ತೀರಿ ಎಂದರು.
ಮುಂದಿನ ದಿನಮಾನಗಳಲ್ಲಿ ಮಳೆ ಆಗದೆ ಇದ್ದರೆ, ಅಕಸ್ಮಾತಾಗಿ ನೀರಿನ ಅಭಾವ ಉಂಟಾದರೆ ಅದಕ್ಕೆ ತೆಗೆದುಕೋಳಬೇಕಾದ ಮುಂಜಾಗೃತ ಕ್ರಮಗಳ ಕುರಿತು ಯೋಜನೆ ರೂಪಿಸಿಕೋಳ್ಳಿ. ಹೇಚ್ಚೆಚ್ಚು ಪರಿಸರ ಸಂರಕ್ಷಣೆ ಮಾಡಿ. ರಸ್ತೆ ಪಕ್ಕದಲ್ಲಿ ಅರಣ್ಯ ಇಲಾಖೆಯಿಂದ ಆಲದ ಮರಗಳು ಹಚ್ಚಿದ್ದೀರಿ ಆದರೆ ಮುಂದಿನ ಎರಡು ವರ್ಷಕ್ಕೆ ಪಕ್ಕ ದಲ್ಲಿರುವ ಆಲದ ಮರಗಳು ಕುಡಿಬಿಡುತ್ತವೆ ಹೀಗಾಗ ಬಾರದು ಮುನ್ನೇಚರಿಕೆ ವಹಿಸಿ. ರೈತರಿಗೆ ಪರಿಹಾರ ವದಗಿಸುವ ಬದಲು ಅವರ ಬೆಳೆ ಪಲವತ್ತತೆಯಿಂದ ಬರುವ ಹಾಗೆ, ಅವರ ದುಡಿಮೆಗೆ ಸೂಕ್ತ ಬೆಲೆ ದೊರಕಿಸಿಕೋಡುವ ನಿಟ್ಟಿನಲ್ಲಿ ಆಡಳಿತ ಮಾಡಿ. ನಾವು ಯಾವುದೇ ಅಧಿಕಾರಿಗಳ ಮನೆಗೆ ಬರಲು ಇಚ್ಚಿಸುವುದಿಲ್ಲ, ನಿಮ್ಮ ಮನೆಗೆ ಬರುವ ಹಾಗೆ ಮಾಡಬೇಡಿ ಬಂದರೆ ಅದರ ಪರಿಣಾಮ ನಿಮ್ಮಗೆ ಗೋತ್ತಿದೆ. ವಿಜಯಪುರ ಜಿಲ್ಲೆಯಲ್ಲಿಯೇ ಹೇಚ್ಚು ದೂರುಗಳು ಸಿಂದಗಿಯಿಂದ ದಾಖಲಾಗುತ್ತಿದ್ದು ಸಿಂದಗಿಯಲ್ಲಿಯೇ ಎರಡು ತಿಂಗಳು ಕ್ಯಾಂಪ್ ಮಾಡುವಂತೆ ಮಾಡಬೇಡಿ ಎಂದು ಲೋಕಾಯುಕ್ತ ಡಿ.ವಾಯ್.ಎಸ್.ಪಿ ಅರುಣ ನಾಯಕ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಸಾರ್ವಜನಿಕ ಅಹವಾಲು
ರಾಂಪುರ ಪಂಚಾಯತ ನಲ್ಲಿ ಒಂದು ಮನೆ ಹಾಕಿಸಿಕೊಳ್ಳಲು ಹತ್ತು ವರ್ಷದಿಂದ ಒಡಾಡುತ್ತಿದ್ದೇನೆ ಚುನಾಯಿತ ಪ್ರತಿನಿಧಿಯಿಂದ ವಿಧಾನಸೌದದ ವರೆಗೆ ತಿರುಗಾಡಿದ್ದೇನೆ. ಐವತ್ತು ಸಾವಿರ ನೀಡಿದರೆ ಮನೆ ಹಾಕುವೆ ಎನ್ನುತ್ತಾರೆ ಲಂಚ ಕೋಟ್ಟು ಮನೆ ಹಾಕಿಸಿಕೋಳ್ಳುವುದು ನನ್ನಗೆ ಇಷ್ಟ ಇಲ್ಲ ನನ್ನಗೆ ನ್ಯಾಯಯುತವಾಗಿ ಮನೆ ಹಾಕಿಸಿ ಕೋಡಿ ನನ್ನಗೆ ನ್ಯಾಯ ಕೊಡಿಸಿ ಎಂದು ಜಗದೇವಪ್ಪ ಮಾಳಪ್ಪ ಪೂಜಾರಿ ಸಾ||ಗಣಿಯಾರ ತನ್ನ ಹತ್ತು ವರ್ಷದ ತೋಳಲಾಟವನ್ನು ತೋಡಿಕೊಂಡನು.
ಒಬ್ಬ ಪಿ.ಡಿ.ಓ ನನ್ನು ಮೂರು ಮೂರು ಪಂಚಾಯತಗೆ ಅಧಿಕಾರಿ ನೀಡಿದ್ದಾರೆ, ಕೆಲವು ಪಿ.ಡಿ.ಓ ಗಳನ್ನು ತಾ.ಪಂ ನಲ್ಲಿ ಸುಮನ್ನೆ ಕುಳಿಸಿದ್ದಾರೆ ಅವರಿಗೆ ಪಂಚಾಯತ ಅಧಿಕಾರ ನೀಡಿ ಅಭಿವೃದ್ಧಿಗೆ ಸಹಕರಿಸಿ ಎಂದು ಕೆಲ ದಾಖಲೆಯೊಂದಿಗೆ ದೇವೇಂದ್ರ ಕುರಿಮನಿ ತಾಲೂಕು ಪಂಚಾಯತ ಅಧಿಕಾರಿಗಳ ವಿರುದ್ದ ಅರ್ಜಿ ನೀಡಿದರು.
ಒಟ್ಟು ಐದು ಅರ್ಜಿಗಳು ಬಂದಿದ್ದು ತನಿಖೆ ನಡೆಸುವುದಾಗಿ ಲೋಕಾಯುಕ್ತ ಸಿ.ಪಿ.ಆಯ್ ಆನಂದ ಡೋಣಿ ತಿಳಿಸಿದರು. ತಾಲೂಕಾ ದಂಡಾಧಿಕಾರಿ ನಿಂಗಣ್ಣ ಬಿರಾದಾರ ವೇದಿಕೆ ಮೇಲಿದ್ದರು. ಲೋಕಾಯುಕ್ತ ಸಿಬ್ಬಂದಿಗಳಾದ ಗುರು ಹಡಪದ, ಆನಂದ ಪಡಶೇಟ್ಟಿ, ಎಂ.ಎಸ್.ಸಲಗೊಂಡ, ಸಂತೋಷ ಚವ್ಹಾಣ ಸೇರಿದಂತೆ ತಾಲೂಕಿನ ಅಧಿಕಾರಿಗಳು ಉಪಸ್ಥಿತರಿದ್ದರು.
Leave a Reply