ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ಕಾನೂನು ಅರಿವು ಕಾರ್ಯಕ್ರಮವನ್ನುದ್ದೇಶಿಸಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ನಾಗೇಶ ಮೋಗರೆ ಮಾತನಾಡಿದರು.
ವೇಗದೂತ ಜನದನಿ
ಸಿಂದಗಿ: ಸರ್ಕಾರಿ ಕಾಲೇಜಿನಲ್ಲಿ ಕಲಿಕಾ ಆಸಕ್ತಿಯನ್ನು ಹೆಚ್ಚಿಸುವ ವಾತಾವರಣವನ್ನು ನಿರ್ಮಿಸಿದ ಕಾಲೇಜಿನ ಪಾಚಾರ್ಯ ಬಳಗದ ಕಾರ್ಯ ಶ್ಲಾಘನೀಯ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ನಾಗೇಶ ಮೋಗರೆ ಹರ್ಷವನ್ನು ವ್ಯಕ್ತಪಡಿಸಿದರು.
ತಾಲೂಕು ಕಾನೂನು ಸಮಿತಿ, ವಕೀಲರ ಸಂಘ ಸಿಂದಗಿ ಹಾಗೂ ಸರ್ಕಾರಿ ಪ.ಪೂ ಕಾಲೇಜಿನ ಸಹಯೋಗದಲ್ಲಿ ಹಮ್ಮಿಕೊಂಡ ಮಕ್ಕಳ ಹಕ್ಕುಗಳು, ಸಂತ್ರಸ್ತ ಪರಿಹಾರ ಯೋಜನೆ, ಪೋಕ್ಸೋ ಕಾಯಿದೆ ಕುರಿತು ಹಮ್ಮಿಕೊಂಡ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಾನೂ ಕೂಡಾ ಸರ್ಕಾರಿ ಶಾಲೆಯಲ್ಲಿಯೇ ಕಲಿತವನು ವಿದ್ಯಾರ್ಥಿ ದಿಸೆಯಲ್ಲಿ ಮಕ್ಕಳು ಸಾಧಕರ ಸಾಧನೆಯನ್ನು ಮಾದರಿಯನ್ನಾಗಿಸಿಕೊಂಡು ಕಲಿಯಬೇಕು. ಈ ಕಾಲೇಜಿನಲ್ಲಿ ಕಲಿಕಾ ವಾತಾವರಣ ಸೃಷ್ಠಿಸಿದ ಪ್ರಾಚಾರ್ಯರ ಕಾರ್ಯ ಶ್ಲಾಘನೀಯವಾದದ್ದು ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷರಾದ ಎಸ್.ಬಿ,ದೊಡ್ಡಮನಿ ಮಾತನಾಡಿ ಈ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳ ಶಿಸ್ತು ನೋಡಿದರೆ ಸಂಸ್ಕಾರಯುತ ನೋಡಿದ ಹಾಗೆ ಎನಿಸಿತು. ವಿದ್ಯಾರ್ಥಿಗಳು ಕಾನೂನಿನ ಬಗ್ಗೆ ತಿಳಿದುಕೊಳ್ಳಬೇಕಿದೆ. ಕಾನೂನಿ ಶೇ 70 ರಷ್ಟು ಸದುಪಯೋಗವನ್ನು ಇಂದಿನ ಮಹಿಳೆಯರು ಪಡೆದುಕೊಳ್ಳುತ್ತಿದ್ದಾರೆ. ಅಬಲೆಯರು ಸಬಲೆಯರಾಗುವುದಕ್ಕೆ ಕಾನೂನಿನ ಕಾಯ್ದೆಗಳೇ ಕಾರಣ ಎಂದು ಹೇಳಿದರು. ಉಪನ್ಯಾಸ ನೀಡಿದ ವಕೀಲ ಎಸ್.ಬಿ.ಪಾಟೀಲ ಕಾಲೇಜು ವಿದ್ಯಾರ್ಥಿಗಳಿಗೆ ಕಾನೂನು ಕಾಯ್ದೆಗಳ ಕುರಿತಾಗಿ ವಿವರಣೆ ನೀಡಿದರು.
ಅಪರ ಸರ್ಕಾರಿ ವಕೀಲ ಎಮ್.ಎಸ್.ಪಾಟೀಲ ಮಾತನಾಡಿದರು. ಜಿ.ಎಸ್.ಮೋರಟಗಿ ವೇದಿಕೆ ಮೇಲಿದ್ದರು. ಈ ವೇಳೆ ಕಾಲೇಜಿನ ಭೋದಕ ಹಾಗೂ ಭೋದಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Leave a Reply