ಸರ್ಕಾರದ ಗ್ರಂಥಾಲಯ ಪುಸ್ತಕ ಸಮಿತಿಗೆ ಪ್ರಾಧ್ಯಾಪಕಿ ಡಾ.ಸುಮಾ ನಿರಾಣಿ ಆಯ್ಕೆ | ಶಿಷ್ಯ ಬಳಗದಿಂದ ಸನ್ಮಾನ ಸಮಾರಂಭ

ಸಿಂದಗಿ: ಗ್ರಂಥಾಲಯಗಳು ಸಾರ್ವಜನಿಕರ ವಿಶ್ವ ವಿದ್ಯಾಲಯಗಳಿದ್ದಂತೆ. ಓದುವ ಸಂಸ್ಕೃತಿ ಬೆಳೆಸಿಕೊಳ್ಳದಿದ್ದರೆ ನಮ್ಮ ಬೆಳವಣಿಗೆ ಕುಂಠಿತಗೊಳ್ಳುತ್ತದೆ ಎಂದು ಪ್ರಾಧ್ಯಾಪಕಿ ಡಾ.ಸುಮಾ ನಿರಣಿ ಹೇಳಿದರು.
ಪಟ್ಟಣದ ಓಂಕಾರ ಕರಿಯರ್ ಅಕಾಡೆಮಿಯಲ್ಲಿ ಕರ್ನಾಟಕ ಸರಕಾರದ ಸಾರ್ವಜನಿಕ ಗ್ರಂಥಾಲಯ ಪುಸ್ತಕ ಸಮಿತಿ ಸದಸ್ಯೆಯಾಗಿ ಆಯ್ಕೆಯಾದ ನಿಮಿತ್ಯ ಜಿ.ಪಿ.ಪೋರವಾಲ್ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ.ಸುಮಾ ನಿರಣಿ ಅವರಿಗೆ ಡಾ.ಸುಮಾ ನಿರಣಿ ಶಿಷ್ಯರ ಬಳಗದ ವತಿಯಿಂದ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ದೇಶದ ಮಕ್ಕಳು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು. ಅವರಿಗೆ ಉತ್ತಮ ಶಿಕ್ಷಣ ದೊರೆಯಬೇಕಾದರೆ ಗ್ರಂಥಾಲಯಗಳು ಜ್ಞಾನಸ್ಥ ಕೇಂದ್ರಗಳು. ನೀವು ಯಶಸ್ವಿ ವಿದ್ಯಾರ್ಥಿಯಾಗಲು ಬಯಸಿದರೆ ನಿಯಮಿತವಾಗಿ ಕಡಿಮೆ ಅವಧಿಯಲ್ಲಿ ಅಧ್ಯಯನ ಮಾಡುವುದನ್ನು ಕಲಿಯುವುದು ತುಂಬಾ ಅವಶ್ಯಕವಾಗಿದೆ ಎಂದು ಹೇಳಿದರು.

ಇದೇ ವೇಳೆ ಕಾನಿಪ ಅಧ್ಯಕ್ಷ ಆನಂದ ಶಾಬಾದಿ ಮತ್ತು ಕಸಾಪ ಮಾಜಿ ಅಧ್ಯಕ್ಷ ಸಿದ್ದಲಿಂಗ ಚೌಧರಿ ಮಾತನಾಡಿ, ಸರ್ಕಾರ ಪ್ರಾಥಮಿಕ ಶಿಕ್ಷಣಕ್ಕೆ ನೀಡುವಷ್ಟೇ ಗ್ರಂಥಾಲಯಗಳಿಗೂ ಆದ್ಯತೆ ನೀಡಬೇಕು. ಜೀವನದ ಅತ್ಯಮೂಲ್ಯ ಘಟ್ಟ ಎಂದರೆ ಅದು ವಿದ್ಯಾರ್ಥಿ ಜೀವನ ಎಂದು ಹೇಳಬಹುದು. ವಿದ್ಯಾರ್ಥಿಯ ಜೀವನ ಪ್ರತಿಯೊಬ್ಬ ವ್ಯಕ್ತಿಯ ಅಭಿವೃದ್ಧಿಯ ಮೂಲಾಧಾರ. ಒಬ್ಬ ವಿದ್ಯಾರ್ಥಿ ತನ್ನ ವಿದ್ಯಾರ್ಥಿ ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಒಳ್ಳೆಯ ಶಾಲೆ ಮತ್ತು ಉತ್ತಮ ಶಿಕ್ಷಕರಷ್ಟೇ ಮುಖ್ಯವಾಗುವುದಿಲ್ಲ. ೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಡಾ.ಅನಿಲ ನಾಯಕ, ದೈಹಿಕ ನಿರ್ದೇಶಕ ರವಿ ಗೋಲಾ, ಓಂಕಾರ ಅಕಾಡೆಮಿಯ ಸಂಚಾಲಕ ಶರಣಗೌಡ ಓಂಕಾರ ವೇದಿಕೆ ಮೇಲಿದ್ದರು.
ಕಾರ್ಯಕ್ರಮದಲ್ಲಿ ಶ್ವೇತಾ ಬೂದಿಹಾಳ, ಅಖಿಲಾ ಮಂಗ್ಯಾಳ, ಸಿದ್ದು ಹರನಾಳ, ಅಲ್ತಾಫ್, ಭೀರು ಪೂಜಾರಿ, ಶಿವಲಿಂಗ, ಸಂಜಯ ಬಿರಾದಾರ, ರತ್ನಾ, ಭಗವಂತ ಮುಳಸಾವಳಗಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
ಕಾರ್ಯಕ್ರಮವನ್ನು ಶಿವಾನಂದ ಗುಗ್ಗರಿ ನಿರೂಪಿಸಿದರು. ಸೀಮಾ ಬಿರಾದಾರ ಸ್ವಾಗತಿಸಿದರು. ಅಂಬಿಕಾ ಮಳ್ಳಿ ಪ್ರಾರ್ಥಿಸಿದರು. ಶಿವರಾಜ ವಂದಿಸಿದರು.


Comments

Leave a Reply

Your email address will not be published. Required fields are marked *