ದಿ. ಸಿಂದಗಿ ಪಟ್ಟಣ ಸಹಕಾರಿ ಬ್ಯಾಂಕ ನಿ. ಸಿಂದಗಿ ಯ ಚುನಾವಣೆ ನಾಮಪತ್ರ ಹಿಂಪಡೆಯುವ ದಿನವಾಗಿದ್ದು ನಿಯಮಗಳನ್ನು ಪಾಲಿಸಬೇಕಾದ ಚುನಾವಣಾಧೀಕಾರಿ ಸಮಯಕ್ಕೆ ಬಾರದಿರುವುದರಿಂದ ಗೊಂದಲ ಸೃಷ್ಟಿಯಾಯಿತು.
ಸಿಂದಗಿ : ಪಟ್ಟಣದ ಪ್ರತಿಷ್ಟಿತ ಬ್ಯಾಂಕಗಳಲ್ಲೊಂದಾದ ಪಟ್ಟಣ ಸಹಕಾರಿ ಬ್ಯಾಂಕ ನಿ. ಸಿಂದಗಿ ಯ ಚುನಾವಣೆ ನಾಮಪತ್ರ ಹಿಂಪಡೆಯುವ ದಿನವಾಗಿತ್ತು ನಿಯಮಾವಳಿಗಳು ಪಾಲಿಸಬೇಕಾದ ಚುನಾವಣಾಧಿಕಾರಿ ವಿಜಯಕುಮಾರ ನಾಯಕ ಸಮಯ ಪ್ರಜ್ಞೆ ಮರತ್ತಿದ್ದಾರೆ. ಇಲ್ಲಿ ಈ ರೀತಿಯ ಚುನಾವಣೆಯ ಬೇಜವಾಬ್ದಾರಿಗಳು ನೋಡಿದರೆ ಬ್ಯಾಂಕ್ ನಲ್ಲಿ ಅವ್ಯವಹಾರ ನಡೆಯುತ್ತಿದ್ದೆ ಎಂದು ಸಾರ್ವಜನಿಕರಲ್ಲಿ ಮೂಡುತ್ತಿದೆ. ಮೂರು ಗಂಟೆಗೆ ನಾಮಪತ್ರ ಹಿಂಪಡೆಯುವ ಸಮಯ ನಿಗದಿಯಾಗಿದ್ದರು 3ಗಂಟೆಗೆ ನಿಗದಿ ಮಾಡಲಾಗಿತ್ತು ಆದರೆ 3ಗಂಟೆ 30 ನಿಮಿಷಗಳು ಆಗುತ್ತಾ ಬಂದರು ಚುನಾವಣಾಧೀಕಾರಿಗಳು ಬರದೆ ಇರುವುದು ಹಾಗೂ ಬ್ಯಾಂಕಿನ ಸಿಬ್ಬಂದಿಗಳಿಗೆ ವಿಚಾರಿಸಿದರೆ ಬರುತ್ತಾರೆ ಎಂದು ಮಾತ್ರ ಹೇಳುತ್ತಿದ್ದಾರೆ. ಆದರಿಂದ ಜಿಲ್ಲಾಧೀಕಾರಿಗಳು ಇದನ್ನು ಗಂಭಿರವಾಗಿ ತೆಗೆದುಕೊಂಡು ಕಾನೂನು ಕ್ರಮ ಜರುಗಿಸಬೇಕು ಎಂದು ಮುಖಂಡ ರಾಜಶೇಖರ ಕೂಚಬಾಳ ಆಗ್ರಹಿಸಿದರು.
ಬ್ಯಾಂಕ್ ವ್ಯವಸ್ಥಾಪಕ ಮುರಗೇಶ ಬಮ್ಮಣ್ಣಿ ಅವರಿಗೆ ಆರೋಪದ ಕುರಿತು ಕೇಳಿದಾಗ ಚುನಾವಣಾ ಅಧೀಕಾರಿಗಳಿಗೆ ಮಾಹಿತಿ ಕೇಳಿ ಎಂದು ಜಾರಿಕೊಂಡರು. ಚುನಾವಣಾಧೀಕಾರಿ ವಿಜಯಕುಮಾರ ನಾಯಕ ತಡವಾಗಿ ಬಂದಿರುವುದು ಸತ್ಯ ಸಾವಿನ ಸುದ್ದಿ ಇರುವ ಕಾರಣ ಸ್ವಲ್ಪ ತಡವಾಗಿದೆ ಬಂದ ಕ್ಷಣದಿಂದಲೇ ಕಾನೂನು ನಿಯಮಾವಳಿಗಳಂತೆ ಚುನಾವಣಾ ಪ್ರಕ್ರೀಯೆ ಮಾಡಿದ್ದೇನೆ ಒಟ್ಟು 11 ಜನರು ಚುನಾವಣೆಯಲ್ಲಿ ಅಂತಿಮವಾಗಿ ಊಳಿದಿದ್ದಾರೆ.
ದಿನಾಂಕ 20 ಆಗಷ್ಟ 2023 ರಂದು ನಡೆಯುವ ಮುಂದಿನ ಐದು ವರ್ಷಗಳ ಸಹಕಾರಿ ಬ್ಯಾಂಕ ಸಿಂದಗಿಯ ಚುನಾವಣೆಗೆ ಅಂತಿಮ ಕಣದಲ್ಲಿ ಊಳಿದ ಅಭ್ಯರ್ಥಿಗಳಿಗೆ ಚುನಾವಣೆಯ ಚಿಹ್ನೆ ಘೋಷಿಸಲಾಗಿದೆ ಎಂದು ವಿಜಯಕುಮಾರ ನಾಯಕ ತಿಳಿಸಿದರು.
ಅಭ್ಯರ್ಥಿಗಳ ಪಟ್ಟಿ ಇಂತಿದೆ
Leave a Reply