ಬಸ್ಸ್ ನಿಲ್ದಾಣದ ಎದುರಿಗಿರುವ ಸರ್ಕಾರಿ ಶಾಲಾ ಕೊಠಡಿ ಎದುರಿಗೆ ಕಲ್ಲಿಂದ ತಲೆಗೆ ಜಜ್ಜಿ ಕೊಲೆ ಮಾಡಲಾಗಿದೆ.
ಸಿಂದಗಿ : ಮಾತಕ್ಷೇತ್ರದ ಮಲಘಾಣ ಗ್ರಾಮದ ರಾಜಕೀಯ ಮುಖಂಡ ಶರಣಪ್ಪ ಅಪ್ಪಣ್ಣ ಕಕ್ಕಳಮೇಲಿ ವಯಾ 45 ಅನುಮಾನಾಸ್ಪದವಾಗಿ ರಾತ್ರಿಹೊತ್ತು ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ.
ಒಂದು ವಾರದಿಂದ ಮನೆಗೆ ಬಂದಿರುವುದಿಲ್ಲ ಕುಡಿದು ಊರು ಬಿಡುವುದು ಇದು ಮೊದಲಲ್ಲ ಎಂಬ ಮಾಹಿತಿ ಲಭಿಸಿದ್ದು ವಾರದ ಹಿಂದೆ ಉಳ್ಳಾಗಡ್ಡಿ ಮಾರಾಟವಾದ ಹಣ ಮನೆಗೆ ನೀಡಿ ಹೋದವನ್ನು ಇಂದು ಶವವಾಗಿ ಮಲಗಿದ್ದಾನೆ ಎಂಬ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ್ತನಿಗೆ ಮಡದಿ ಸೇರಿದಂತೆ ಇಬ್ಬರು ಸುಪುತ್ರಿಯರು ಒಬ್ಬ ಸುಪುತ್ರನಿದ್ದಾನೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ.
ಸಿಂದಗಿಯ ವೃತ್ತ ನಿರೀಕ್ಷಕ ( ಸಿ.ಪಿ.ಐ ) ನಾನಾಗೌಡ ಪೊಲೀಸ್ ಪಾಟೀಲ ಆರಕ್ಷಕ ನಿರೀಕ್ಷಕ ಆರೀಫ್ ಮುಶಾಪುರಿ ಸ್ಥಳಕ್ಕೆ ಬೇಟಿ ನೀಡಿ ಪ್ರಥಮ ಹಂತದ ತನಿಖೆ ನಡೆಸುತ್ತಿದ್ದಾರೆ.
Leave a Reply